ಜನಪ್ರಿಯ ಅಸೋಸಿಯೇಷನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ 17ನೇ ವರ್ಷದ ದುರ್ಗಾ ದೇವಿ ಪೂಜೆ.
ಸ್ಥಳೀಯ ಸುದ್ದಿ


ಕೆ.ಆರ್.ಪುರ: ಜನಪ್ರಿಯ ಅಸೋಸಿಯೇಷನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕ್ಷೇತ್ರದ ವಿಜಿನಾಪುರದಲ್ಲಿ ಏರ್ಪಡಿಸಿದ್ದ ದುರ್ಗಾ ದೇವಿಯ ಪೂಜಾ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಬೈರತಿ ಬಸವರಾಜ್ ವಿಶೇಷ ಪೂಜೆ ಸಲ್ಲಿಸಿದರು.
ಪೂಜೆ ಸಲ್ಲಿಸಿ ಮಾತನಾಡಿದ ಮಾಜಿ ಸಚಿವ ಬೈರತಿಬಸವರಾಜ್ ಅವರು ದಸರಾ ಹಬ್ಬದ ಅಂಗವಾಗಿ ದುರ್ಗ ಮಾತೆಯ ಪೂಜೆಯನ್ನು ಕ್ಷೇತ್ರದ ಹಲವೆಡೆ ಹಮ್ಮಿಕೊಂಡಿರುವುದು ಸಂತಸ ತಂದಿದೆ ಎಂದು ಹೇಳಿದರು.
ಕೆ.ಆರ್.ಪುರ ಕ್ಷೇತ್ರದಲ್ಲಿ ದಸರಾ ಹಬ್ಬ ವಿಶೇಷವಾಗಿ ಆಚರಣೆ ವಿಜಿನಾಪುರದಲ್ಲಿ ಮಾಡಲಾಗುತ್ತಿದೆ,ದುರ್ಗಾದೇವಿ,ಗಣೇಶ ಸೇರಿದಂತೆ,ಹಲವು ದೇವರುಗಳ ಪ್ರತಿಷ್ಠಾಪನೆ ಹಾಗೂ ಮೆರವಣಿಗೆ ಕಾರ್ಯಗಳು ನಡೆಯುತ್ತಿರುವುದು ಮುಂದಿನ ಪೀಳಿಗೆಗೆ ನಮ್ಮಸಂಸ್ಕೃತಿ ನೀಡಲು ಸಹಾಯಕವಾಗಿದೆ ಎಂದು ನುಡಿದರು.ನಮ್ಮ ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ಕಾರ್ಯಯುವ ಪೀಳಿಗೆ ಮಾಡಬೇಕಾಗಿದ್ದು, ಇದಕ್ಕೆ ಹಿರಿಯರ ಮಾರ್ಗದರ್ಶನ ಅವಶ್ಯಕವಾಗಿದೆ ಎಂದು ವಿವರಣೆ ನೀಡಿದರು.
ವಿಜಿನಾಪುರ ವಾರ್ಡನ ಬಿಜೆಪಿ ಮುಖಂಡರಾದ ಪ್ರದೀಪ್ ಗೌಡ ಮಾತನಾಡಿ ಕಳೆದ 17 ವರ್ಷಗಳಿಂದ ದುರ್ಗಾದೇವಿ ಪ್ರತಿಷ್ಠಾಪನೆ ಮಾಡಿ ಪೂಜೆ ನೇರವೇರಿಸಲಾಗುತ್ತಿದ್ದು, ಲೋಕಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಯಿತು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಸೋಸಿಯೇಷನ್ ಅಧ್ಯಕ್ಷ ಸಂಜಯ್ ಸಿನ್ಹಾ, ಗ್ಸೇವಿಯರ್, ಪಂಕಜ್, ಆಕಾಶ್, ರಾಜೆರಶ್ ಸೋನು, ಶಾಮಲ್, ದೀನಾನಾಥ್ , ನಾಗರಾಜ್ ಇದ್ದರು.