ಮಹದೇವಪುರ: ಬೆಂಗಳೂರು ಪೂರ್ವ ನಗರ ಪಾಲಿಕೆಯಲ್ಲಿ ಜನಗಣತಿ–2027ರ ಪೂರ್ವ ಸಿದ್ಧತಾ ಕಾರ್ಯಗಳ ಕುರಿತು ಸಮಗ್ರ ಪರಿಶೀಲನಾ ಸಭೆಯನ್ನು ಪ್ರಧಾನ ಜನಗಣತಿ ಅಧಿಕಾರಿ ಹಾಗೂ ಆಯುಕ್ತರಾದ ಡಿ.ಎಸ್. ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಸಭೆಯಲ್ಲಿ ಜನಗಣತಿ ಕಾರ್ಯವನ್ನು ಸಮರ್ಪಕವಾಗಿ ಮತ್ತು ಸಮಯೋಚಿತವಾಗಿ ನಿರ್ವಹಿಸಲು ಅಗತ್ಯ ಕ್ರಮಗಳ ಕುರಿತು ಚರ್ಚೆ ನಡೆಸಲಾಯಿತು. ಜನಗಣತಿ ಕಾರ್ಯದ ವಿವಿಧ ಹಂತಗಳ ಪ್ರಗತಿಯನ್ನು ಪರಿಶೀಲಿಸಿದ ಅವರು, ಕಾಲಮಿತಿಯೊಳಗೆ ಕೆಲಸ ಮುಗಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದರು.
ಸಭೆಯ ಪ್ರಮುಖ ನಿರ್ದೇಶನಗಳು:
• ಎಚ್.ಎಲ್.ಬಿ.ಸಿ (HLBC) ಗಡಿ ಗುರುತಿಸುವಿಕೆ: ಎಲ್ಲಾ ಎಚ್.ಎಲ್.ಬಿ.ಸಿಗಳ ಗಡಿ ಗುರುತಿಸುವಿಕೆ (Demarcation) ಪ್ರಕ್ರಿಯೆಯನ್ನು ಇಂದು ಸಂಜೆ ಒಳಗೆ ಕಡ್ಡಾಯವಾಗಿ ಪೂರ್ಣಗೊಳಿಸುವಂತೆ ತಿಳಿಸಿದರು.
• ಬಾಕಿ ಇರುವ ಎಚ್.ಎಲ್.ಬಿ.ಸಿಗಳ ಸೃಜನೆ: ತಾಂತ್ರಿಕ ಕಾರಣಗಳಿಂದ ಬಾಕಿ ಇರುವ ಎಲ್ಲಾ ಎಚ್.ಎಲ್.ಬಿ.ಸಿಗಳನ್ನು ತಕ್ಷಣವೇ ಸೃಜಿಸಲು ಸೂಚಿಸಿದರು.
• ಮೇಲ್ವಿಚಾರಣಾ ಬ್ಲಾಕ್‌ಗಳ ರಚನೆ: ಪ್ರತಿ ಚಾರ್ಜ್ ಆಫೀಸರ್‌ಗಳ ವ್ಯಾಪ್ತಿಯಲ್ಲಿ ಅಗತ್ಯವಿರುವ ಮೇಲ್ವಿಚಾರಣಾ ಬ್ಲಾಕ್‌ಗಳನ್ನು (Supervisory Blocks) ಶೀಘ್ರವಾಗಿ ರಚಿಸುವಂತೆ ಸೂಚಿಸಿದರು.
• ನೇಮಕಾತಿ ಆದೇಶಗಳ ವಿತರಣೆ: ಜನಗಣತಿ ಕಾರ್ಯಕ್ಕೆ ನಿಯೋಜಿಸಲಾದ ಸಿಬ್ಬಂದಿಗಳ ನೇಮಕಾತಿ ಆದೇಶಗಳನ್ನು ಆಯಾ ಇಲಾಖೆಗಳ ನೋಡಲ್ ಅಧಿಕಾರಿಗಳ ಮೂಲಕ ಗಣತಿದಾರರಿಗೆ ತಲುಪಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಸೂಚಿಸಿದರು.
• ತರಬೇತಿ ಕಾರ್ಯಾಗಾರ: ಮುಂಬರುವ ತರಬೇತಿ ಕಾರ್ಯಾಗಾರಕ್ಕೆ ಅಗತ್ಯ ವ್ಯವಸ್ಥೆಯನ್ನು ಮಾಡಿಕೊಳ್ಳುವಂತೆ ಸೂಚಿಸಿದರು.
*ಸಮಗ್ರ ಮತ್ತು ಪರಿಣಾಮಕಾರಿ ಜನಗಣತಿಗೆ ಬದ್ಧ*
ಜನಗಣತಿ–2027 ಕಾರ್ಯವನ್ನು ಸಮಗ್ರ, ನಿಖರ ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಬೆಂಗಳೂರು ಪೂರ್ವ ನಗರ ಪಾಲಿಕೆ ಬದ್ಧವಾಗಿದ್ದು, ಎಲ್ಲಾ ಹಂತಗಳಲ್ಲಿ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.
ಸಭೆಯಲ್ಲಿ ಅಪರ ಆಯುಕ್ತರು (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್,ಅಪರ ಆಯುಕ್ತರು (ಕಂದಾಯ) ಪ್ರಜ್ಞಾ ಅಮ್ಮಂಬಳ,ಜಂಟಿ ಆಯುಕ್ತರು ಡಾ. ಸುಧಾ , ಉಪ ಆಯುಕ್ತರು, ಚಾರ್ಜ್ ಆಫೀಸರ್‌ಗಳು, ಸಹಾಯಕ ಚಾರ್ಜ್ ಆಫೀಸರ್‌ಗಳು ಹಾಗೂ ತಾಂತ್ರಿಕ ಸಹಾಯಕರು ಉಪಸ್ಥಿತರಿದ್ದರು.
: ಬೆಂಗಳೂರು ಪೂರ್ವ ನಗರ ಪಾಲಿಕೆಯಲ್ಲಿ ಜನಗಣತಿ–2027ರ ಪೂರ್ವ ಸಿದ್ಧತಾ ಕಾರ್ಯಗಳ ಕುರಿತು ಸಮಗ್ರ ಪರಿಶೀಲನಾ ಸಭೆಯನ್ನು ಪ್ರಧಾನ ಜನಗಣತಿ ಅಧಿಕಾರಿ ಹಾಗೂ ಆಯುಕ್ತರಾದ ಡಿ.ಎಸ್. ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.