Wednesday, April 15, 2026
Home ಬೆಂಗಳೂರು ನಗರಶ್ರೀ ವಿನಾಯಕ ಜ್ಯುವೆಲ್ಲರಿ ಮತ್ತು ಸಿಲ್ಕ್ ಸ್ಯಾರೀಸ್ ಲಕ್ಕಿ ಡ್ರಾ :ವಿಜೇತರಿಗೆ ಬಹುಮಾನ ವಿತರಣೆ.

ಶ್ರೀ ವಿನಾಯಕ ಜ್ಯುವೆಲ್ಲರಿ ಮತ್ತು ಸಿಲ್ಕ್ ಸ್ಯಾರೀಸ್ ಲಕ್ಕಿ ಡ್ರಾ :ವಿಜೇತರಿಗೆ ಬಹುಮಾನ ವಿತರಣೆ.

by Dharmaraju
0 comments

ಕೆಆರ್. ಪುರ: ಸಂಕ್ರಾಂತಿ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಕೆಆರ್ ಪುರಂನ ಶ್ರೀ ವಿನಾಯಕ ಜ್ಯುವೆಲ್ಲರಿ ಮತ್ತು ಸಿಲ್ಕ್ ಸ್ಯಾರೀಸ್ ಮಳಿಗೆ ವತಿಯಿಂದ ಲಕ್ಕಿ ಡ್ರಾ ಆಯೋಜಿಸಿ ಫಲಿತಾಂಶ ಪ್ರಕಟಿಸಿದೆ.ಒಟ್ಟು 100 ವಿಜೇತರಿಗೆ ಬಹುಮಾನ ವಿತರಿಸಲಾಗಿದೆ.

2 ಸಾವಿರ ಮತ್ತು 5 ಸಾವಿರ ಹಾಗೂ 10 ಸಾವಿರ ರೂಪಾಯಿಗಳಿಗೂ ಅಧಿಕ‌ ಮೊತ್ತದ ಖರೀದಿಯ ಗ್ರಾಹಕರಿಗೆ ಒಂದು ಲಕ್ಕಿ ಡ್ರಾ ಕೂಪನ್ ನನ್ನು ನೀಡಲಾಗಿತ್ತು. ಅದರಂತೆ ಜ್ಯೂವೆಲ್ಲರಿ ಅಂಗಡಿ ಮಾಲೀಕರಾದ ಚಿದಂಬರಂ,ಎಸಿಪಿ ರಮೇಶ್ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಭವ್ಯ ನರಸಿಂಹಮೂರ್ತಿ ಅವರು ಲಕ್ಕಿ ಡ್ರಾ ವಿಜೇತರಿಗೆ ಬಹುಮಾನ ವಿತರಿಸಿದರು.

ವಿಜೇತರಿಗೆ ದ್ವಿಚಕ್ರ ವಾಹನ, ಎಲ್ ಇ ಡಿ ಟಿವಿ, ವಾಷಿಂಗ್ ಮಿಷನ್, ಫ್ರಿಡ್ಜ್ ,ಬೆಳ್ಳಿ ನಾಣ್ಯ, ಸಿಲ್ಕ್ ಸ್ಯಾರಿಸ್ ಸೇರಿದಂತೆ ನೂರು ಗ್ರಾಹಕರಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು.

1)ರಾಮಮೂರ್ತಿನಗರ ನಿವಾಸಿ ಸುಪ್ರಿಯಾ ಅವರಿಗೆ ಮೊದಲ ಬಹುಮಾನ ಎಲೆಕ್ಟ್ರಾನಿಕ್ ಮೊಟರ್ ವಾಹನ,
2)ಸೀಗೆಹಳ್ಳಿ ನಿವಾಸಿ ಸುರೇಶ್ ಅವರಿಗೆ ಎಲ್ ಇ ಡಿ ಟಿವಿ ದ್ವಿತೀಯ ಬಹುಮಾನ,
3) ವಿಶಾಲ್ ಅವರಿಗೆ ವಾಷಿಂಗ್ ಮಿಷನ್ ತೃತೀಯ ಬಹುಮಾನ,
4) ದೀಪಾಂಜಲಿ ಅವರಿಗೆ ಡಬಲ್ ಡೋರ್ ಫ್ರಿಡ್ಜ್ ನಾಲ್ಕನೇ ಬಹುಮಾನ,
5) 10 ವಿಜೇತರಿಗೆ ಬೆಳ್ಳಿ ನಾಣ್ಯಗಳು,
6) 30 ವಿಜೇತರಿಗೆ ಕುಕ್ಕರ್ ,
7) 54 ವಿಜೇತರಿಗೆ ಸಿಲ್ಕ್ ಸ್ಯಾರೀಸ್ ಬಹುಮಾನಗಳನ್ನ ವಿತರಣೆ ಮಾಡಲಾಯಿತು.

ಮಾಲೀಕರಾದ ಚಿದಂಬರಂ ಮಾತನಾಡಿ ಕೆ.ಆರ್.ಪುರ ಮತ್ತು ಆನೇಪ್ಪ ಸರ್ಕಲ್ ನ ಎರಡು ಮಳಿಗೆಗಳಲ್ಲಿ ಲಕ್ಕಿ ಡ್ರಾ ಬಹುಮಾನಗಳ ಕೂಪನ್ ಗಳನ್ನ ನಮ್ಮ ಗ್ರಾಹಕರಿಗೆ ನೀಡಲಾಗಿತ್ತು.ಸಾವಿರಾರು ಸಂಖ್ಯೆಯಲ್ಲಿ ಗ್ರಾಹಕರು ನಮ್ಮ ಮೇಲೆ ವಿಶ್ವಾಸವಿಟ್ಟು ಆಭರಣ ಮತ್ತು ಬಟ್ಟೆಗಳನ್ನು ಖರೀದಿ ಮಾಡಿದರು ಅವರಿಗೆ ನಮ್ಮಿಂದ ಏನಾದರೂ ಉಡುಗೊರೆ ನೀಡಲು ಆಶಯ ಆಗಿತ್ತು ಆದರಿಂದ ಈ ಲಕ್ಕಿ ಡ್ರಾ ಬಹುಮಾನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.

ಗ್ರಾಹಕರ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶ ಹೊಂದಿದ್ದು, ಮುಂದಿನ ದಿನಗಳಲ್ಲಿ ಇಂತಹ ವಿಶೇಷ ಯೋಜನೆ ಕೈಗೊಳ್ಳುವುದಾಗಿ ಎಂದು ತಿಳಿಸಿದರು.

ಈ ವೇಳೆ ಗೀತಾ ಚಿದಂಬರ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಲಕ್ಕಿ ಡ್ರಾ ವಿಜೇತರಿಗೆ ಬಹುಮಾನ ವಿತರಣೆ

You may also like

Leave a Comment