Tuesday, June 9, 2026
Home ಸಿನಿಮಾಬೆನ್ನ ಮೇಲೆ ಗಣೇಶನ ಟ್ಯಾಟೂ: ಕಿಚ್ಚ ಸುದೀಪ್ ಪುತ್ರಿ ಸಾನ್ವಿ ವಿರುದ್ಧ ನೆಟ್ಟಿಗರ ಆಕ್ರೋಶ!

ಬೆನ್ನ ಮೇಲೆ ಗಣೇಶನ ಟ್ಯಾಟೂ: ಕಿಚ್ಚ ಸುದೀಪ್ ಪುತ್ರಿ ಸಾನ್ವಿ ವಿರುದ್ಧ ನೆಟ್ಟಿಗರ ಆಕ್ರೋಶ!

by Dharmaraju
0 comments

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗುರಿಯಾಗಿದ್ದಾರೆ. ಅವರು ಇತ್ತೀಚೆಗೆ ತಮ್ಮ ಬೆನ್ನಿನ ಮೇಲೆ ಹಾಕಿಸಿಕೊಂಡಿರುವ ಹೊಸ ಟ್ಯಾಟೂ ಈಗ ಪರ-ವಿರೋಧದ ಚರ್ಚೆಗಳಿಗೆ ಕಾರಣವಾಗಿದೆ.

ಸಾನ್ವಿ ಸುದೀಪ್ ಅವರು ತಮ್ಮ ಬೆನ್ನಿನ ಮೇಲೆ ವಿಘ್ನನಿವಾರಕ ಗಣೇಶನ ಚಿತ್ರವನ್ನು ಟ್ಯಾಟೂ ಆಗಿ ಹಾಕಿಸಿಕೊಂಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಅನೇಕರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸಾನ್ವಿ ಅವರ ಫೋಟೋಗೆ ಕಮೆಂಟ್ ಮಾಡಿರುವ ಹಲವಾರು ನೆಟ್ಟಿಗರು, ದೈವಿಕ ಶ್ರದ್ಧೆಯ ವಿಷಯದಲ್ಲಿ ಈ ರೀತಿ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ದೇವರ ಚಿತ್ರವನ್ನು ಮೈಮೇಲೆ ಹಾಕಿಸಿಕೊಳ್ಳುವುದು ಸಂಪ್ರದಾಯಕ್ಕೆ ವಿರುದ್ಧ” ಎಂದು ಕೆಲವರು ಅಸಮಾಧಾನ ಹೊರಹಾಕಿದ್ದಾರೆ.

ಇನ್ನು ಕೆಲವರು, “ಟ್ಯಾಟೂ ತೆಗೆಸಿ ಪುಣ್ಯ ಕಟ್ಟಿಕೊಳ್ಳಿ” ಎಂದು ನೇರವಾಗಿಯೇ ಸಾನ್ವಿಗೆ ಸಲಹೆ ನೀಡಿದ್ದಾರೆ. ದೇವರಿಗೆ ನೀಡಬೇಕಾದ ಗೌರವವನ್ನು ಮೈಮೇಲೆ ಚಿತ್ರಿಸಿಕೊಳ್ಳುವ ಮೂಲಕ ಅವಮಾನಿಸಬಾರದು ಎಂಬುದು ಇವರ ವಾದ.

ಒಂದೆಡೆ ಟೀಕೆಗಳು ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಕಿಚ್ಚನ ಅಭಿಮಾನಿಗಳು ಸಾನ್ವಿ ಪರವಾಗಿ ಬ್ಯಾಟ್ ಬೀಸಿದ್ದಾರೆ. “ಇದು ಅವರ ವೈಯಕ್ತಿಕ ಆಯ್ಕೆ ಮತ್ತು ದೇವರ ಮೇಲಿರುವ ಭಕ್ತಿಯ ಸಂಕೇತ” ಎಂದು ಬೆಂಬಲ ಸೂಚಿಸುತ್ತಿದ್ದಾರೆ.

ಒಟ್ಟಿನಲ್ಲಿ, ಸಾನ್ವಿ ಸುದೀಪ್ ಅವರ ಈ ಹೊಸ ಟ್ಯಾಟೂ ಸದ್ಯ ಸ್ಯಾಂಡಲ್‌ವುಡ್ ಅಂಗಳದಲ್ಲಿ ಮತ್ತು ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿರುವುದಂತೂ ಸುಳ್ಳಲ್ಲ.

You may also like

Leave a Comment