Saturday, July 11, 2026
Home ಬೆಂಗಳೂರು ನಗರಕೆಂಪೇಗೌಡರ ದೂರದೃಷ್ಟಿ ಆಡಳಿತಗಾರರಿಗೆ ಆದರ್ಶ : ಶಾಸಕ ಬೈರತಿ ಬಸವರಾಜ

ಕೆಂಪೇಗೌಡರ ದೂರದೃಷ್ಟಿ ಆಡಳಿತಗಾರರಿಗೆ ಆದರ್ಶ : ಶಾಸಕ ಬೈರತಿ ಬಸವರಾಜ

by Dharmaraju
0 comments

ಕೆ.ಆರ್ ಪುರ: ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ ದೂರದೃಷ್ಟಿ ಹಾಗೂ ವ್ಯವಸ್ಥಿತ ಆಡಳಿತ ವೈಖರಿಯನ್ನು ಇಂದಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಮ್ಮ ಆಡಳಿತದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಬಿ.ಎ.ಬಸವರಾಜ ತಿಳಿಸಿದರು.
ಕ್ಷೇತ್ರದ ವಿಜಿನಾಪುರದಲ್ಲಿ ಶ್ರೀ ಭುವನೇಶ್ವರಿ ಒಕ್ಕಲಿಗರ ಸಂಘ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 517 ನೇ ಜಯಂತೊತ್ಸವದಲ್ಲಿ ಅವರು ಮಾತನಾಡಿದರು.

ಇಡೀ ಮನುಕುಲಕ್ಕೆ ದಾರಿದೀಪವಾದ ಮತ್ತು ಶಕ್ತಿ ತುಂಬಿದ ಕೆಂಪೇಗೌಡರನ್ನು ನಾವು ಒಂದು ಜಾತಿಗೆ ಸೀಮಿತಗೊಳಿಸಬಾರದು,ನಗರದ ಪ್ರತಿಯೊಂದು ಜಾಗದಲ್ಲೂ ಕೆಂಪೇಗೌಡರ ಅಸ್ತಿತ್ವವಿದೆ, 7 ಸಾವಿರಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿದ ಕೀರ್ತಿ , ಮಣ್ಣಿನ ಅರಮನೆಗಳನ್ನು ನಿರ್ಮಿಸಿ ಇಸ್ಲಾಮಿಕ್ ವಾಸ್ತುಶಿಲ್ಪವನ್ನು ನಾಚಿಸುವಂತೆ ನಿರ್ಮಾಣ ಮಾಡಿದ್ದು ಕೂಡಾ ಕೆಂಪೇಗೌಡರ ಚಾಣಾಕ್ಷತನಕ್ಕೆ ಸಾಕ್ಷಿ ಎಂದರು.
ಕೆಂಪೇಗೌಡರು ಅಂದು ಬೆಂಗಳೂರನ್ನು ಕಟ್ಟುವಾಗ ರೂಪಿಸಿದ ನೀಲನಕ್ಷೆ ಹಾಗೂ ಯೋಜನಾಬದ್ಧ ವಿನ್ಯಾಸ ಇಂದಿಗೂ ನಮಗೆಲ್ಲ ದಾರಿದೀಪವಾಗಿದೆ. ಇಂದು ಜಾಗತಿಕ ಮಟ್ಟದಲ್ಲಿ ಭಾರತದ ಸಿಲಿಕಾನ್ ಸಿಟಿ ಎಂದು ಹೆಮ್ಮೆಯಿಂದ ಕರೆಯಲ್ಪಡುವ ಬೆಂಗಳೂರಿಗೆ ಅವರೇ ಭದ್ರವಾದ ಅಡಿಪಾಯ ಹಾಕಿದವರು.
ಪ್ರತಿಯೊಂದು ವ್ಯಾಪಾರ-ವಹಿವಾಟಿಗೂ ಪ್ರತ್ಯೇಕ ಪೇಟೆಗಳನ್ನು ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಕೇವಲ ವ್ಯಾಪಾರವಷ್ಟೇ ಅಲ್ಲದೆ ಪರಿಸರ ಸಂರಕ್ಷಣೆಗೂ ಒತ್ತು ನೀಡಿ, ನಗರದ ನೀರಿನ ದಾಹ ನೀಗಿಸಲು ಬೃಹತ್ ಕೆರೆಗಳನ್ನೂ ನಿರ್ಮಿಸಿದ್ದರು ಎಂದು ತಿಳಿಸಿದರು.

ಪ್ರತಿ ಮನೆಯಲ್ಲಿ ಮಕ್ಕಳಿಗೆ ನಾಡಿನ ಮಹನೀಯರ ಸಾಧನೆ, ಜೀವನವನ್ನು ತಿಳಿಸಿಕೊಡಬೇಕು, ಮುಂದಿನ‌ ಪೀಳಿಗೆಗೂ ಮಹಾತ್ಮರನ್ನು‌ ಕೊಂಡೊಯ್ಯಬೇಕು, ಸೂರ್ಯ ಚಂದ್ರ ಇರುವವರಿಗೂ ಅವರನ್ನು ಜೀವಂತವಾಗಿರಿಸಬೇಕು ಎಂದು ತಿಳಿಸಿದರು

ದೂರವಾಣಿನಗರ ಬಿಜೆಪಿ ಮುಖಂಡ ಪ್ರದೀಪ್ ಗೌಡ ಮಾತನಾಡಿ, ದೇಶದ ಇತರ ಭಾಗಗಳಿಗೆ ಹೋಲಿಸಿದರೆ, ನಮ್ಮ ಬೆಂಗಳೂರಿನಲ್ಲಿ ಯಾವಾಗಲೂ ಅನುಕೂಲಕರ ವಾತಾವರಣ ಇರುತ್ತದೆ. ಇದಕ್ಕೆ ಮೂಲ ಕಾರಣ ದೂರದೃಷ್ಟಿ ಇಟ್ಟುಕೊಂಡು ನಾಡಪ್ರಭು ಶ್ರೀ ಕೆಂಪೇಗೌಡರು ಬೆಂಗಳೂರು ನಗರವನ್ನು ಕಟ್ಟಿದ್ದು. ಅಂದು ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಗೋಪುರವನ್ನು ಕಟ್ಟಿ ನಗರವನ್ನು ಕಟ್ಟಿದ್ದರು. ಎಲ್ಲಾ ಸಮಾಜದವರಿಗೂ ಹಾಗೂ ವ್ಯಾಪಾರದ ದೃಷ್ಟಿಯಿಂದ ಎಲ್ಲಾ ಪೇಟೆಗಳನ್ನು ನಿರ್ಮಿಸಿದ್ದರು, ಉತ್ತಮ ಪರಿಸರ ಹಾಗೂ ಜನ ಜೀವನಕ್ಕಾಗಿ ಅಂದಿನ ಕಾಲದಲ್ಲಿಯೆ ಕೆರೆಗಳನ್ನು ಅಭಿವೃದ್ಧಿಪಡೆಸಿದವರು. ಆದರೆ ಇಂದು ಆ ಗಡಿಯನ್ನು ಮೀರಿ ನಗರ ಬೆಳೆದಿದೆ ಎಂದರು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಮುನೇಗೌಡ, ವಾರ್ಡ್ ಅಧ್ಯಕ್ಷ ರಮೇಶ್ ಗೌಡ, ಪಾಲಿಕೆ ಮಾಜಿ ಸದಸ್ಯ ಶ್ರೀಕಾಂತ್ ಗೌಡ, ಮುಖಂಡರಾದ ಗೋಪಾಲಣ್ಣ, ಎಂಎಲ್ ಡಿಸಿ ಮುನಿರಾಜು, ಎಸ್ ಎಲ್ ವಿ.ಶೇಖರ್, ಮಲ್ಲಣ್ಣ, ಗಂಗಾಧರ್, ಗಂಗಣ್ಣ, ಶಿವಣ್ಣ, ಆನಂದ್, ಅಯ್ಯಪ್ಪ, ಸಂದೀಪ್, ಬಾಬು ಸೆಲ್ವಂ, , ರಮೇಶ್, ಕಪಿನಿಗೌಡ, ಪ್ರೇಮಗೌಡ ಪೂರಕರಿದ್ದರು.

You may also like

Leave a Comment