Tuesday, September 8, 2026
Home ರಾಜಕೀಯ ‌ಸುದ್ದಿಕಣ್ಣೀರಿಡುತ್ತಲೇ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ಘೋಷಣೆ.

ಕಣ್ಣೀರಿಡುತ್ತಲೇ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ಘೋಷಣೆ.

ಡಿಕೆಶಿ ಸರ್ಕಾರದ ಮೊದಲ ವಿಕೆಟ್ ಪತನ

by Dharmaraju
0 comments

ಬೆಂಗಳೂರು :ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಡುತ್ತಲೇ ಬಿ.ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದರು. ಇದೇ ಸಂದರ್ಭದಲ್ಲಿ ಬಿಜೆಪಿಗರ ವಿರುದ್ಧ ಹಿಗ್ಗಾಮುಗ್ಗ ವಾಗ್ಧಾಳಿಯನ್ನು ನಡೆಸಿದರು.

ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಸದನ ನಡೆಯಲಿಕ್ಕೂ ಬಿಡಲಾರದೇ, ರಾಜ್ಯದ ಜ್ವಲ್ವಂತ ಸಮಸ್ಯೆ ಬಗ್ಗೆ ಚರ್ಚೆ ಮಾಡೋದಕ್ಕೂ ಬಿಡದೇ, ಸಂವಿಧಾನ ವಿರೋಧಿಗಳಾದಂತ ವಿರೋಧ ಪಕ್ಷದ ನಾಯಕರಿಗೆ ಕೆಲವು ಮಾತು ಹೇಳಬೇಕೆನಿಸಿದೆ.

ಕಳೆದ ಉತ್ತರಾಖಾಂಡದಲ್ಲಿ ಶಂಭುಕ ಹತ್ಯೆ ಆದನೋ ಆದರೇ, ಈಗ ಅದು ಸಾಧ್ಯವಿಲ್ಲ. ಅದನ್ನು ರಕ್ಷಣೆ ಮಾಡಲು ನ್ಯಾಯದೇವತೆ ಇದೆ. ಮನುಸ್ಮೃತಿಗಳೆಲ್ಲ ಸೇರಿ ಸದನವನ್ನು ಹಾಳು ಮಾಡಿದ್ರಲ್ಲ. ಶೂದ್ರರು, ದಲಿತರು, ಮಹಿಳೆಯರು, ಆದಿವಾಸಿಗಳು, ಅಲ್ವ ಸಂಖ್ಯಾತರು ಸ್ವತಂತ್ರವಾಗಿ ಬದುಕಲೇ ಬಾರದು ಎಂಬುದು ಬಿಜೆಪಿಯ ವಿರೋಧಪಕ್ಷದವರು ಎಂಬುದಾಗಿ ಕಿಡಿಕಾರಿದರು.
ವಿರೋಧ ಪಕ್ಷಗಳಿಂದ ಕುತಂತ್ರ ರಾಜಕಾರಣ ಮಾಡುತ್ತಿದೆ. ನೋಟಿಸ್ ಕೊಡಲು ಮನವಿ ಮಾಡಿಕೊಳ್ಳಲಾಗಿತ್ತು. ಆದರೇ ಅದನ್ನು ಕೇಳಲಿಲ್ಲ. ರಾಜ್ಯದಲ್ಲಿ ಬರಗಾಲ, ಕೆಪಿಎಸ್ಸಿ ಹಗರಣ, ಕಾವೇರಿ ವಿವಾದ, ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆಗೆ ಸದನದಲ್ಲಿ ಅವಕಾಶವೇ ನೀಡಲಿಲ್ಲ. ವಿನಾಕಾರಣ ವಿರೋಧ ಪಕ್ಷಗಳು ಕುತಂತ್ರ ರಾಜಕಾರಣ ಮಾಡಲಾಗುತ್ತಿದೆ ಎಂಬುದಾಗಿ ವಾಗ್ಧಾಳಿ ನಡೆಸಿದರು.
ವಿಷಯವೇ ಇಲ್ಲದೇ ಪಾದಯಾತ್ರೆಯನ್ನು ಬಿಜೆಪಿಯವರು ಮಾಡಲು ಹೊರಟಿದ್ದಾರೆ. ನಿಮ್ಮನ್ನು ಈ ರಾಜ್ಯದ ಜನರು ನೋಡುತ್ತಿದ್ದಾರೆ. ಇದು ಒಳ್ಳೇಯದಾಗಲ್ಲ. ಒಂದು ಸುಳ್ಳನೇ ವಾಲ್ಮೀಕಿ ನಿಗಮದ ಹಗರಣ ಆಗಿದೆ ಎಂಬುದಾಗಿ ದೊಡ್ಡದು ಮಾಡ್ತಿದ್ದಾರೆ. ಒಬ್ಬ ದಲಿತ, ಆದಿವಾಸಿ ಸಮುದಾಯದವರು ಮೇಲೆ ಬರಬಾರದು ಎಂಬುದಾಗಿ ಹೀಗೆ ಮಾಡುತ್ತಿದ್ದಾರೆ. ನಿಜವಾಗಿಯೂ ನಿಮಗೆ ಒಳ್ಳೇದಾಗಲ್ಲ ಎಂಬುದಾಗಿ ಕಿಡಿಕಾರಿದರು.
2024ರಲ್ಲಿ ರಾಜೀನಾಮೆ ನೀಡಿದಾಗಲೂ ಪಕ್ಷಕ್ಕೆ ಮುಜುಗರವಾಗಬಾರದು ಎಂಬುದಾಗಿ ರಾಜೀನಾಮೆ ನೀಡಲಾಯಿತು. ಎಸ್‌ಐಟಿ, ಸಿಐಡಿ ಅವರಿಂದ ತನಿಖೆ ನಡೆಸಲಾಯಿತು. ನಮ್ಮ ರಾಜ್ಯದ ಪೊಲೀಸರ ಮೇಲೆ ಗೌರವದಿಂದ ತನಿಖೆ ನಡೆಸಲಾಯಿತು. ನಿಮ್ಮ ಕುತಂತ್ರದ ಕೇಂದ್ರ ಸರ್ಕಾರದ ಕೈಗೊಂಬೆಯಾಗಿರುವಂತ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದಾರೆ ಎಂದು ಗುಡುಗಿದರು.
ರಾಜ್ಯದ ಜನರನ್ನು ಧಿಕ್ಕು ತಪ್ಪಿಸುವಂತ ಕೆಲಸವನ್ನು ವಿರೋಧ ಪಕ್ಷದವರು ಮಾಡುತ್ತಿದ್ದಾರೆ. ಅದಕ್ಕೆ ನಾವು ಬಗ್ಗಲ್ಲ. ನಾವು ಸಂವಿಧಾನಕ್ಕೆ ಗೌರವ ನೀಡುತ್ತೇವೆ. ಸದನದಲ್ಲಿ ಚರ್ಚೆ ಮಾಡದೇ ರಾಜ್ಯಪಾಲರಿಂದ ನಿರ್ದೇಶನ ಕೊಡಿಸುತ್ತೀರಿ. ಅದಕ್ಕೆ ನಾವು ಗೌರವ ಕೊಡುತ್ತೇವೆ. ಕುಮಾರಸ್ವಾಮಿಯವರದ್ದು ಯಾಕೆ ಕಳುಹಿಸಲಿಲ್ಲ. ಜೋಡೆತ್ತುಗಳಾಗಿ ಕೆಲಸ ಮಾಡುತ್ತಿದ್ದೀರಲ್ಲ ಅದಕ್ಕೆ ಕಳುಹಿಸಿಲ್ವ. ಅವರಿಗೊಂದು ನ್ಯಾಯ ನಮಗೊಂದು ನ್ಯಾಯವೇ ಎಂದು ಪ್ರಶ್ನಿಸಿದರು.

ವಾಲ್ಮೀಕಿ ನಿಗಮದಲ್ಲಿ ಹಗರಣ ಆಗಿಲ್ಲ. ಅದನ್ನು ಜಗಜ್ಜಾಹಿರ ಮಾಡಿದ್ದೇನೆ. ನಾನು ಹಗರಣದಲ್ಲಿ ಭಾಗಿಯಾಗಿದ್ದೇನೆ ಎಂಬುದಕ್ಕೆ ಸಾಕ್ಷಿ ಏನಿದೆ.? ನನಗೆ ಒಂದು ರೂಪಾಯಿ ಬಂದಿದ್ಯಾ? ಎಂದು ಆಕ್ರೋಶ ಹೊರ ಹಾಕಿದಂತ ಅವರು. ಬಿಜೆಪಿಗರು ಮನಸ್ಮೃತಿವಾದಿಗಳು. ಈಗಾಗಲೇ 100ಕ್ಕೆ 100ರಷ್ಟು ವಾಲ್ಮೀಕಿ ನಿಗಮದ ಹಣ ವಾಪಾಸ್ ಆಗಿದೆ ಎಂದರು.
ನಾನು ದಲಿತ, ಆದಿವಾಸಿ ಎನ್ನುವ ಕಾರಣಕ್ಕೆ ನನ್ನ ಮೇಲೆ ಬಿಜೆಪಿಗರು ಟಾರ್ಗೆಟ್ ಮಾಡುತ್ತಿದ್ದಾರೆ. ಇದು ಒಳ್ಳೇದಾಗಲ್ಲ. ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ಸಚಿವ ಬಿ.ನಾಗೇಂದ್ರ ಅವರು ಮನುವಾದಿಗಳು ಒಂದು ಸುಳ್ಳನ್ನೇ ಹೇಳಿ ಹೇಳಿ ನಿಜ ಮಾಡಲು ಹೊರಟಿದ್ದಾರೆ. ಆದರೇ ನನ್ನಿಂದ ಪಕ್ಷಕ್ಕೆ ಮುಜುಗರ ಆಗಬಾರದು ಎನ್ನುವ ಕೇವಲ ಒಂದೇ ಒಂದು ಕಾರಣಕ್ಕೆ, ಮುಖ್ಯಮಂತ್ರಿಗಳ ಅಭಿವೃದ್ಧಿ ಕುಂಠಿತವಾಗಬಾರದು ಎನ್ನುವ ಕಾರಣದಿಂದ, ನಮ್ಮ ವರಿಷ್ಠರಿಗೆ ಮುಜುಗಾರವಾಗಬಾರದು ಎನ್ನುವ ಕಾರಣಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದರು.

You may also like

Leave a Comment