Thursday, 5 November 2026 — Prajabharat
BREAKING NEWS
ಬೆಂಗಳೂರು ನಗರ ಕ್ಯಾಪಿಟಲ್ ಅಂತರಾಷ್ಟ್ರೀಯ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ದೇಶ ವಿದೇಶಗಳ ಪರಿಚಯ. ಬೆಂಗಳೂರು ನಗರ ಮೊಸರಿನ ದರ ಲೀಟರ್‌ಗೆ 14 ರೂ. ಹೆಚ್ಚಳ;ನಂದಿನಿ’ ಟೋನ್ಡ್ ಪ್ರತಿ ಲೀಟರ್‌ಗೆ 8 ರೂ. ಹೆಚ್ಚಳ : ಕೆಎಂಎಫ್ ಆದೇಶ ದೊಡ್ಡಬಳ್ಳಾಪುರ 71ನೇ ಕನ್ನಡ ರಾಜ್ಯೋತ್ಸವ ಕಲರವ,ಕನ್ನಡ ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ:ಸಚಿವ ಮುನಿಯಪ್ಪ. ಬೆಂಗಳೂರು ನಗರ ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಮಹತ್ವ ಸಾರಿದ ಬೆಂ.ಪೂರ್ವ ಪಾಲಿಕೆ ಆಯುಕ್ತರು ಡಿ.ಎಸ್. ರಮೇಶ್ ದೇವನಹಳ್ಳಿ, ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ 16 ಸಾಧಕರ ಆಯ್ಕೆ ಬೆಂಗಳೂರು ನಗರ ಇ-ಖಾತಾ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬವಾಗದಂತೆ ಕ್ರಮವಹಿಸಿ: ಆಯುಕ್ತ ಡಿ.ಎಸ್. ರಮೇಶ್ ಬೆಂಗಳೂರು ನಗರ ಅಂಬೇಡ್ಕ‌ರ್ ನಗರ ಶಾಲೆಯಲ್ಲಿ ವಾಲ್ಮೀಕಿ ಜಯಂತಿ ಸಂಭ್ರಮ ಬೆಂಗಳೂರು ನಗರ ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಜಿನಿಯರಿಂಗ್, ಎಂಸಿಎ, ಎಂಬಿಎ ಮತ್ತು ಎಂಟೆಕ್ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ‌ ಸಮಾರಂಭ. ಬೆಂಗಳೂರು ನಗರ ಕ್ಯಾಪಿಟಲ್ ಅಂತರಾಷ್ಟ್ರೀಯ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ದೇಶ ವಿದೇಶಗಳ ಪರಿಚಯ. ಬೆಂಗಳೂರು ನಗರ ಮೊಸರಿನ ದರ ಲೀಟರ್‌ಗೆ 14 ರೂ. ಹೆಚ್ಚಳ;ನಂದಿನಿ’ ಟೋನ್ಡ್ ಪ್ರತಿ ಲೀಟರ್‌ಗೆ 8 ರೂ. ಹೆಚ್ಚಳ : ಕೆಎಂಎಫ್ ಆದೇಶ ದೊಡ್ಡಬಳ್ಳಾಪುರ 71ನೇ ಕನ್ನಡ ರಾಜ್ಯೋತ್ಸವ ಕಲರವ,ಕನ್ನಡ ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ:ಸಚಿವ ಮುನಿಯಪ್ಪ. ಬೆಂಗಳೂರು ನಗರ ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಮಹತ್ವ ಸಾರಿದ ಬೆಂ.ಪೂರ್ವ ಪಾಲಿಕೆ ಆಯುಕ್ತರು ಡಿ.ಎಸ್. ರಮೇಶ್ ದೇವನಹಳ್ಳಿ, ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ 16 ಸಾಧಕರ ಆಯ್ಕೆ ಬೆಂಗಳೂರು ನಗರ ಇ-ಖಾತಾ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬವಾಗದಂತೆ ಕ್ರಮವಹಿಸಿ: ಆಯುಕ್ತ ಡಿ.ಎಸ್. ರಮೇಶ್ ಬೆಂಗಳೂರು ನಗರ ಅಂಬೇಡ್ಕ‌ರ್ ನಗರ ಶಾಲೆಯಲ್ಲಿ ವಾಲ್ಮೀಕಿ ಜಯಂತಿ ಸಂಭ್ರಮ ಬೆಂಗಳೂರು ನಗರ ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಜಿನಿಯರಿಂಗ್, ಎಂಸಿಎ, ಎಂಬಿಎ ಮತ್ತು ಎಂಟೆಕ್ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ‌ ಸಮಾರಂಭ.
ಬೆಂಗಳೂರು ನಗರ

ಶ್ರೀ ವೇಣುಗೋಪಾಲ ಸ್ವಾಮಿ ಸನ್ನಿಧಿಯಲ್ಲಿ ಸಂಭ್ರಮದ ಕೃಷ್ಣಜನ್ಮಾಷ್ಟಮಿ.

Dharmaraju
ವರದಿ: Dharmaraju ಮುಖ್ಯ ಸಂಪಾದಕರು (Chief Editor)
3 ನಿಮಿಷ ಓದು

ಕೆ.ಆರ್ ಪುರ: ನಾಡಿನೆಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮನೆಮಾಡಿದ್ದು, ಕೆ.ಆರ್.ಪುರ ಕ್ಷೇತ್ರದ ದೇವಸಂದ್ರ ಗ್ರಾಮದ ಪುರಾತನ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯಲ್ಲಿ ವಿಶೇಷ ಪೂಜೆ ಹಾಗೂ ಅಲಂಕಾರ ಮಾಡಲಾಗಿತ್ತು.

ದೇವಸಂದ್ರ ಗ್ರಾಮದಲ್ಲಿ ಅನಾದಿಕಾಲದಿಂದಲೂ ನೆಲೆಸಿರುವ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ಇಂದು ಭಕ್ತಿ ಭಾವ ಹಾಗೂ ಸಡಗರದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಲಾಯಿತು.

ದಿವಾಂಗತ ಎ.ಕೃಷ್ಣಪ್ಪ ಅವರ ಕುಟುಂಬ ಮತ್ತು ಸಮುದಾಯದ ಮುಖಂಡರು ಸೇರಿ ದೇವಾಲಯದಲ್ಲಿ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣನಿಗೆ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಮುಂಜಾನೆಯಿಂದಲೇ ವಿಶೇಷ ಪೂಜೆ ಹಾಗೂ ಅಭಿಷೇಕ ನೆರವೇರಿಸಲಾಗಿದೆ. ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸಾವಿರಾರು ಜನರು ಸರತಿ ಸಾಲಿನಲ್ಲಿ ಆಗಮಿಸಿ ದೇವರ ದರ್ಶನ ಪಡೆದು ತಮ್ಮ ಇಷ್ಟಾರ್ಥಗಳಿಗಾಗಿ ಪೂಜೆ ಸಲ್ಲಿಸಿದರು. ದೇವಾಲಯಕ್ಕೆ ಬರುವ ಎಲ್ಲಾ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.

ಮಾಜಿ ಶಾಸಕರಾದ ಪೂರ್ಣಿಮಾ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್‌ ಕುಟುಂಬ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಡಿ.ಕೆ.ಮೋಹನ್ ಡಿಕೆ ಮೋಹನ್ ಬಾಬು,ಮುಖಂಡರಾದ ಡಿಕೆ ದೇವೇಂದ್ರ,ಡಿಕೆ ರಮೇಶ್,ಯುವಮುಖಂಡರಾದ ಚಲಪತಿ,ಚನ್ನಕೇಶವ ಅವರು ಕುಟುಂಬದ ಸಮೇತರಾಗಿ ಆಗಮಿಸಿ ದೇವರಿಗೆ ವಿಶೇಷ ಸೇವೆ ಸಲ್ಲಿಸಿದರು.

ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಕೆ.ಆರ್.ಪುರಕ್ಕೆ ರಾಜಕೀಯ ನಾಯಕರ ದಂಡೆ ಆಗಮಿಸಿದರು. ಮಾಜಿ ಸಿಎಂ ಸಿದ್ದರಾಮಯ್ಯ, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ,ವಿಧಾನ ಪರಿಷತ್ತಿನ ಸಭಾಪತಿ ಸಲೀಂ ಅಹ್ಮದ್‌, ಉಪ ಸಭಾಪತಿ ಉಮಾಶ್ರೀ,ಮಾಜಿ ಸಚಿವ ಆಂಜನೇಯ,ಎಚ್ ನಾಗೇಶ್,ಮತ್ತಿತರು ಪೂರ್ಣಿಮಾ ಶ್ರೀನಿವಾಸ್ ಹಾಗೂ ಡಿಕೆ ಮೋಹನ್ ಬಾಬು ಅವರ ಮನೆಗೆ ಭೇಟಿ ನೀಡಿದರು.

ಬಳಿಕ ಮಾತನಾಡಿದ ಪೂರ್ಣಿಮಾ ಶ್ರೀನಿವಾಸ್, ಪ್ರತೀ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿ ಯನ್ನು ಅದ್ದೂರಿಯಾಗಿ ಆಚರಿಸಿ ಭಕ್ತಾದಿಗಳಿಗೆ ಸಾರ್ವಜನಿಕರಿಗೆ ಅನ್ನದಾನ ಏರ್ಪಡಿಸುತ್ತಾ ಬಂದಿದ್ದೇವೆ, ಕಾರ್ಯಕ್ರಮದಲ್ಲಿ ಕುಟುಂಬದ ಆಪ್ತರು ರಾಜಕೀಯ ಗಣ್ಯರು, ಹಿತೈಷಿಗಳು ಬಂದು ಭಾಗವಹಿಸಿದ್ದು ಸಂತಸ ತಂದಿದೆ ಎಂದರು.

ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬ ಬಂದರೆ ನಮ್ಮ ದೇವಸಂದ್ರ ಗ್ರಾಮದಲ್ಲಿ ಹಬ್ಬದ ವಾತಾವರಣ ಇರುತ್ತದೆ. ರಾತ್ರಿ ಗ್ರಾಮದ ಎಲ್ಲಾ ದೇವತೆಗಳ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಈ ಪಲ್ಲಕ್ಕಿಯಲ್ಲಿ ನೂರಕ್ಕೂ ಹೆಚ್ಚು ಗ್ರಾಮದೇವತೆಗಳ ಮೆರವಣಿಗೆ ಮಾಡಲಾಗುತ್ತದೆ ಎಂದರು.ನಮ್ಮ ಗ್ರಾಮವೇ ಅಲ್ಲದೆ ಸುತ್ತ ಮುತ್ತಲಿನ ಗ್ರಾಮಸ್ಥರು ಕೂಡ ಈ ದೈವಕಾರ್ಯದಲ್ಲಿ ಭಾಗಿಯಾಗಿರುವುದು ಸಂತೋಷ ತಂದಿದೆ ಎಂದರು.

ದೇವಾಲಯದಲ್ಲಿ ನಡೆದಿರುವ ಎಲ್ಲಾ ಕಾರ್ಯಕ್ರಮಗಳಲ್ಲಿ ಅಂದರೆ ಮಹಾ ಮಂಗಳಾರತಿ, ಪಂಚಾಮೃತ ಅಭಿಷೇಕ, ಮೆರವಣಿಗೆ, ಪ್ರಸಾಧ ವಿನಿಯೋಗದಲ್ಲಿ ಕೈಜೋಡಿಸಿ ಸಹಕಾರ ನೀಡಿದ್ದಾರೆ. ಭಗವಾನ್ ಶ್ರೀಕೃಷ್ಣ ಪರಮಾತ್ಮನ ಬಾಲಲೀಲೆಗಳನ್ನು ಗ್ರಾಮಸ್ಥರು ಕೂಡಿ ಆಡುವ ಮೂಲಕ ದೇವರಿಗೆ ಪ್ರಿಯರಾಗುವ ಕ್ರಮ ನಿಜಕ್ಕೂ ಮನಸ್ಸಂತೋಷಗೊಳಿಸಲಿದೆ. ಭಗವಂತನ ಶ್ರೀರಕ್ಷೆ ಎಲ್ಲಾ ಜೀವಸಂಕುಲದ ಮೇಲಿರಲಿ, ಮಳೆ ಬೆಳೆ ಚೆನ್ನಾಗಿ ಬಂದು ಸುಖ ಸಮೃದ್ಧಿ ನೆಲೆಸಲಿ ಎಂದು ಆಶಿಸಿದರು.

ಚಿಕ್ಕ ದೇವಸಂದ್ರ, ಕೆ.ಆರ್.ಪುರ,ಅಯ್ಯಪ್ಪನಗರ, ಬಸವನಪುರ
ಗಾಯತ್ರಿ ಬಡಾವಣೆ, ರಾಮಮೂರ್ತಿನಗರ, , ಹೂಡಿ, ಭಟ್ಟರಹಳ್ಳಿ, ಮೇಡಹಳ್ಳಿ ಸೇರಿದಂತೆ ಸುತ್ತಮುತ್ತಲಿನ ನಾನಾ ಕಡೆಯಿಂದ ಆಗಮಿಸಿದ ಭಕ್ತರು ಶ್ರೀಕೃಷ್ಣನ ದರ್ಶನ ಪಡೆದು, ಪೂಜೆ, ಅರ್ಚನೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ನಂತರ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಕೆ.ಮೋಹನ್, ಮುಖಂಡರಾದ ಚಲಪತಿ, ಡಿಕೆ.ರಮೇಶ್,ಚನ್ನಕೇಶವ, ಮತ್ತಿತರರು ಹಾಜರಿದ್ದರು.

ಮುಖ್ಯ ಸಂಪಾದಕರು (Chief Editor) ✍️ 307 ಲೇಖನಗಳು

Dharmaraju

Dharmaraju ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment