
ಕೆ.ಆರ್.ಪುರ: ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳು ಇಂದಿನ ಸಮಾಜಕ್ಕೂ ದಾರಿದೀಪವಾಗಿವೆ. ಅವರು ಜಗತ್ತಿಗೆ ಸಾರಿದ ಸತ್ಯ, ಧರ್ಮ, ನ್ಯಾಯ ಹಾಗೂ ಮಾನವೀಯತೆಯ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಬೈರತಿ ಬಸವರಾಜ ಅವರು ತಿಳಿಸಿದರು.

ಮಹರ್ಷಿ ವಾಲ್ಮೀಕಿ ಅವರು ಕೇವಲ ರಾಮಾಯಣದ ಕರ್ತೃಗಳಲ್ಲ, ಮಾನವೀಯ ಮೌಲ್ಯಗಳು, ಧರ್ಮ, ನ್ಯಾಯ, ತ್ಯಾಗ, ಕರ್ತವ್ಯ ಪ್ರಜ್ಞೆ ಹಾಗೂ ಆದರ್ಶ ಬದುಕಿನ ಸಂದೇಶ ಸಾರಿದ ಮಹಾನ್ ಋಷಿಗಳು. ಅವರ ಜೀವನ ಮತ್ತು ಸಾಹಿತ್ಯ ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ರಾಮಾಯಣದ ಮೂಲಕ ಮಾನವ ಸಂಬಂಧಗಳ ಮಹತ್ವ, ಕುಟುಂಬದ ಮೌಲ್ಯಗಳು, ಸತ್ಯನಿಷ್ಠೆ ಹಾಗೂ ಧರ್ಮದ ಹಾದಿಯಲ್ಲಿ ನಡೆಯುವ ಪ್ರೇರಣೆಯನ್ನು ಅವರು ಜಗತ್ತಿಗೆ ನೀಡಿದ್ದಾರೆ ಎಂದು ಹೇಳಿದರು.

ವಾಲ್ಮೀಕಿ ಭವನಕ್ಕೆ ಹಾಗೂ ಪುತ್ಥಳಿ ನಿರ್ಮಾನಕ್ಕೆ ಜಾಗ ಗುರುತಿಸಿಕೊಡಿ ಎಂದು ಜನಾಂಗದ ಮುಖಂಡರು ಮನವಿ ಮಾಡಿಕೊಂಡಾಗ ನಮ್ಮ ಬಿಜೆಪಿ ಸರ್ಕಾರ ಬಂದ ಕೂಡಲೇ ನಿಮಗೆ ಜಾಗ ಗುರುತಿಸಿಕೊಡುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ನಂತರ ಮುಂದಿನ ವರ್ಷದೊಳಗೆ ವಾಲ್ಮೀಕಿ ಜನಾಂಗಕ್ಕೆ ಬೆಂಗಳೂರು ಪೂರ್ವ ತಾಲೂಕಿನಲ್ಲಿ ಸಮೂದಾಯ ಭವನಕ್ಕೆ ಜಾಗ ಗುರ್ತಿಸಿಕೊಡುವಂತೆ ತಹಶಿಲ್ದಾರ ಬಳಿ ಮನವಿ ಮಾಡಿದರು.ಸಾಕಷ್ಟು ಬಾರಿ ಪತ್ರಗಳನ್ನ ನೀಡಲಾಗಿದೆ.ಮುಂದಿನ ವರ್ಷದೊಳಗೆ ಜಾಗ ನಿಗಧಿಯಾಗಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯ ಆಂತೋಣಿಸ್ವಾಮಿ ವಾರ್ಡ್ ಅಧ್ಯಕ್ಷ ಶಿವಪ್ಪ, ಶಂಕರ್, ಬೆಂಗಳೂರು ಪೂರ್ವ ತಾಲ್ಲೂಕು ವಾಲ್ಮೀಕಿ ನಾಯಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ನಾಗರಾಜ್, ಸಮಾಜದ ಮುಖಂಡರಾದ ಕಟ್ಟು ಗೊಲ್ಲಹಳ್ಳಿ ಶಿವಕುಮಾರ್, ಎಂ. ಮಂಜುನಾಥ್, ಈಶ್ವರಾನಂದ ಸ್ವಾಮೀಜಿ, ಉಪಾಧ್ಯಕ್ಷ ಅಜಯ್, ಕಾರ್ಯದರ್ಶಿ ಶಾಂತಕುಮಾರ್, ಯತೀಶ್ ಕುಮಾರ್, ಮುಖಂಡರಾದ ದುಶ್ಯಂತ್, ದೇವರಾಜ್, ಎಲ್. ಮಂಜುನಾಥ್, ಡೀಸಲ್ ಮಂಜುನಾಥ್, ಪೊಲೀಸ್ ನಾರಾಯಣಪ್ಪ ಮಾಜಿ ಅಧ್ಯಕ್ಷ ವೆಂಕಟೇಶ್, ಶೈಲ, ಗೋಪಿನಾಥ್, ಸಿ.ನಾಗೇಶ್ ಮತ್ತಿತರರು ಹಾಜರಿದ್ದರು.
