ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ಮುಂದಿನ ಎರಡು ದಿನಗಳ ಕಾಲ ನ.02 ಮತ್ತು ನ.03 ರ ವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 4ರ ವರೆಗೆ ವಿದ್ಯುತ್ ಪೂರೈಕೆ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ವಿದ್ಯುತ್ ಅಡಚಣೆಗೆ ಸಹಕರಿಸುವಂತೆ ಕೋರಿದ್ದಾರೆ.
ನವೆಂಬರ್ 02 ರಂದು ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:
ಕನಕದಾಸರಸ್ತೆ, ರಂಗಪ್ಪ ಸರ್ಕಲ್, ಗಾಂಧಿನಗರ, ಕೆ.ಸಿ.ಪಿ.ಸರ್ಕಲ್, ಆಲಹಳ್ಳಿ, ನಾಗಸಂದ್ರ, ಚೈತನ್ಯನಗರ, ವೀರಾಪುರ, ವಿದ್ಯಾನಗರ, ತಿಪ್ಪಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ನವೆಂಬರ್ 03 ರಂದು ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:
ಶಾಂತಿನಗರ, ಇಸ್ಲಾಂಪುರ, ಕಲ್ಲುಪೇಟೆ, ಕರೇನಹಳ್ಳಿ, ದೇವರಾಜನಗರ, ಟೋಲ್ ಗೇಟ್ ದರ್ಗಾಜೋಗಿಹಳ್ಳಿ, ಜಾಲಪ್ಪ ಕಾಲೇಜ್ ರಸ್ತೆ ತ್ಯಾಗರಾಜನಗರ, ಸೋಮೇಶ್ವರ ಬಡಾವಣೆ, ಗಂಗಾಧರಪುರ, ರೋಜಿಪುರ, ವಿನಾಯಕನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.