ಫೆ.26ರಂದು ಪ್ರಸಿದ್ದ ಮಧುರೆ ಶನಿಮಹಾತ್ಮಸ್ವಾಮಿ 71ನೇ ಬ್ರಹ್ಮರಥೋತ್ಸವ: ಒಂದು ವಾರ ಮನರಂಜನೆ ಕಾರ್ಯಕ್ರಮಗಳ ಆಯೋಜನೆ
ಸ್ಥಳೀಯ ಸುದ್ದಿ


ದೊಡ್ಡಬಳ್ಳಾಪುರ: ತಾಲ್ಲೂಕಿನ ಪ್ರಸಿದ್ದ ಚಿಕ್ಕಮಧುರೆ ಶ್ರೀ.ಶನಿಮಹಾತ್ಮಸ್ವಾಮಿಯ 71ನೇ ಬ್ರಹ್ಮರಥೋತ್ಸವವು ಇದೇ ಫೆ.26ರಂದು ವಿಜೃಂಭಣೆಯಿಂದ ನೆರವೇರಲಿದೆ ಎಂದು ದೇವಾಲಯದ ಪ್ರಧಾನ ಅರ್ಚಕರಾದ ರಾಜ್ ಕುಮಾರ್ ರವರು ಇಂದು ತಿಳಿಸಿದರು.
ಮಧುರೆ ದೇವಾಲಯದ ಅನ್ನದಾಸೋಹ ಭವನದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.
ಪ್ರತಿವರ್ಷದಂತೆ ಈ ವರ್ಷವು ಬ್ರಹ್ಮರಥೋತ್ಸವ ನಡೆಯಲಿದ್ದು , ಈ ಭಾರಿ ಹಲವು ವಿಶೇಷತೆಗಳಿಂದ ಕೂಡಿರಲಿದೆ. ತಾಲ್ಲೂಕಿನೆಲ್ಲೆಡೆಯಿಂದ 101 ದೇವರುಗಳನ್ನ ಬೆಳ್ಳಿ ರಥದೊಂದಿಗೆ ಕರೆಸಿ ಮೂಲ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿಸಿ ಶಾಲಾ ಆವರಣದಲ್ಲಿ ಸ್ಥಾಪಿಸಲಾಗುವುದು.
ಫೆ.26ರಂದು ಮಧ್ಯಾಹ್ನ 1:15ರಿಂದ 2:10 ಗಂಟೆಯೊಳಗೆ ಸಲ್ಲುವ ಶುಭಲಗ್ನದಲ್ಲಿ 71ನೇ ಬ್ರಹ್ಮರಥೋತ್ಸವ ನೆರವೇರಲಿದೆ ಎಂದರು.
ಫೆ.25ರಿಂದ ಮಾ.3 ರ ವರೆಗೆ ವಿಶೇಷವಾದ ಉತ್ಸವ ಕಾರ್ಯಕ್ರಮಗಳು ನೆರವೇರಲಿದೆ. ಮೊಬೈಲ್ ಆರ್ಕೆಸ್ಟ್ರಾ, ಜಿ ಕನ್ನಡ ವಾಹಿನಿಯ ಸರಿಗಮಪ ತಂಡದ ಖ್ಯಾತ ಚಲನಚಿತ್ರನಟರನ್ನೊಳಗೊಂಡ ಸಂಗೀತ ಸಂಜೆ, ಮದ್ದಿನ ಮರದ ಕಾರ್ಯಕ್ರಮ, ಕಾಕವಾಹನೋತ್ಸವ, ಚಂದ್ರಮಂಡಲೋತ್ಸವ, ಸುಪ್ರಭಾತೋತ್ಸವ, ಡೊಳ್ಳುಕುಣಿತ, ತೆಪ್ಪೋತ್ಸವ ಸೇರಿದಂತೆ ಹಲವು ಉತ್ಸವಗಳು ನೆರವೇರಲಿದೆ ಎಂದರು.
ಈ ವೇಳೆ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅದ್ಯಕ್ಷರಾದ ಚುಂಚೇಗೌಡ, ಮುಖಂಡರಾದ ಮಲ್ಲಣ್ಣ, ದೇವಾಲಯದ ಪ್ರಧಾನ ಧರ್ಮದರ್ಶಿ ಪ್ರಕಾಶ್, ಎಲ್ ಐಸಿ ಮಂಜುನಾಥ್, ಸ್ಥಳೀಯ ಮುಖಂಡರು ಇದ್ದರು.,
ಪ್ರಜಾಭಾರತ್ ನ್ಯೂಸ್ ವಾಟ್ಸಪ್ ಗ್ರೂಪ್ ಸೇರಲು ಈ👇 ಲಿಂಕ್ ಕ್ಲಿಕ್ ಮಾಡಿ
Follow this link to join my WhatsApp group: https://chat.whatsapp.com/Fj6L4Eak7N994zl2QHSpHK?mode=gi_t
ರಾಘವೇಂದ್ರ ಹೆಚ್. ಎ