ಸೀರೆ ಸಂತೆ ಹೆಸರಿನಲ್ಲಿ 45 ಸೀರೆ ಮಳಿಗೆಗಳ ಉದ್ಘಾಟನೆ: ಕಾರ್ಯಕ್ರಮಕ್ಕೆ ಬಿಗ್ ಬಾಸ್ ಕನ್ನಡ ವಿಜೇತ ಗಿಲ್ಲಿ ನಟ ಮುಖ್ಯ ಅತಿಥಿ: ಶಾಸಕ ಧೀರಜ್

ಸ್ಥಳೀಯ ಸುದ್ದಿ

ರಾಘವೇಂದ್ರ ಹೆಚ್. ಎ

2/13/20261 min read

ದೊಡ್ಡಬಳ್ಳಾಪುರ: ಸೀರೆ ಸಂತೆ ಶೀರ್ಷಿಕೆಯಡಿ ನಗರದಲ್ಲಿ 45 ಸೀರೆಗಳ ಮಳಿಗೆಗಳ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮಕ್ಕೆ ಬಿಗ್ ಬಾಸ್ ಕನ್ನಡ ವಿಜೇತ ಗಿಲ್ಲಿ ನಟ ಆಗಮಿಸಲಿದ್ದಾರೆ ಎಂದು ಶಾಸಕ ಧೀರಜ್ ಮುನಿರಾಜ್ ಅವರು ತಿಳಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾಹಿತಿ ನೀಡಿದರು.

ನೇಕಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ದಿ.ಕೊಂಗಾಡಿಯಪ್ಪನವರ ಸ್ಮರಣಾರ್ಥವಾಗಿ ಫೆ.20,21,22 ಮೂರು ದಿನಗಳ ಕಾಲ ವಿಶೆಷ ಕಾರ್ಯಕ್ರಮಗಳನ್ನು ನಗರದಲ್ಲಿ ಆಯೋಜಿಸಲಾಗಿದೆ. ಫೆ.20 ರಂದು ಸಂಜೆ ಕಾರ್ಯಕ್ರಮ ಉದ್ಘಾಟನೆಯಾಗಲಿದೆ, ತಾಲೂಕಿನ ನೇಕಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರನ್ನು ಅವರ ಸಾಧನೆಯನ್ನು ಗುರುತಿಸಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಗಿಲ್ಲಿ ನಟ ಅತಿಥಿಯಾಗಿ ಆಗಮಿಸಲಿದ್ದಾರೆ. ನೇಕಾರಿಕೆ ಹಿನ್ನೆಲೆಯುಳ್ಳ ನಟ ನಟಿಯರನ್ನು ಕರೆಸುವ ತಯಾರಿ ನಡೆದಿದೆ. ಸಂಜೆ 7.30ಕ್ಕೆ ಸರಿಯಾಗಿ ಸವಾರಿ ತಂಡದಿಂದ ಮನರಂಜನೆ ಕಾರ್ಯಕ್ರಮ.

21/02/2026 ಶನಿವಾರ ಸಂಜೆ 5.30ಕ್ಕೆ ಪ್ರಾಣೇಶ್ ರವರಿಂದ ಹಾಸ್ಯೋತ್ಸವ ಮತ್ತು ಇದೇ ದಿನ 8ಕ್ಕೆ ಕಾಮಿಡಿ ಕಿಲಾಡಿಗಳು ತಂಡದಿಂದ ಹಾಸ್ಯ ಕಾರ್ಯಕ್ರಮ

22/02/2026 ಭಾನುವಾರ ಸಂಜೆ 5.30ಕ್ಕೆ ZEE ಕನ್ನಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ತಂಡದಿಂದ ಮನರಂಜನೆ ಕಾರ್ಯಕ್ರಮ. ಇದೇ ದಿನ 8PM ಗೆ ಹೆಸರಾಂತ ಗಾಯಕರದ ರಘು ದೀಕ್ಷಿತ್ ರವರಿಂದ ಲೈವ್ ಮ್ಯೂಸಿಕ್ ಕಾರ್ಯಕ್ರಮ ಇರುತ್ತದೆ . ಇದರ ಜೊತೆಗೆ ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಸೀರೆ ಮೇಳ ನಡೆಯುತ್ತದೆ . ಸೀರೆ ಮಳಿಗೆಗಳು, ಇತರೆ ಮಳಿಗೆಗಳು, ಈವೆಂಟ್ ಸ್ಟೇಜ್, ಫುಡ್ ಕೋರ್ಟ್, ಮಕ್ಕಳು ಆಟವಾಡಲು ಎಲ್ಲಾ ರೀತಿಯ ಏರ್ಪಾಡು ಮಾಡಲಾಗಿರುತ್ತದೆ 54 ಮಳಿಗೆಗೆಳ ಸ್ಥಾಪನೆ ಎಂದರು.

ವೇಳೆ ಹಿರಿಯ ಮುಖಂಡರಾದ ಕೆ.ಎಂ ಹನುಮಂತರಾಯಪ್ಪ, ನಗರಾಧ್ಯಕ್ಷ ಕೆ.ಬಿ.ಮುದ್ದಪ್ಪ, ಮಂಡಲಾಧ್ಯಕ್ಷ ನಾಗೇಶ್, ಪುಷ್ಪಾ ಶಿವಶಂಕರ್, ನಾರಾಯಣಸ್ವಾಮಿ, ಲಕ್ಷ್ಮಿ ನಾರಾಯಣ್, ನಗರಸಭಾ ಸದಸ್ಯ ಬಂತಿ ವೆಂಕಟೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಜಾಭಾರತ್ ನ್ಯೂಸ್ ವಾಟ್ಸಪ್ ಗ್ರೂಪ್ ಸೇರಲು ಈ👇 ಲಿಂಕ್ ಕ್ಲಿಕ್ ಮಾಡಿ

Follow this link to join my WhatsApp group: https://chat.whatsapp.com/Fj6L4Eak7N994zl2QHSpHK?mode=gi_t

ರಾಘವೇಂದ್ರ ಹೆಚ್.