ವರ್ತೂರಿನಲ್ಲಿ 4ನೇ ವರ್ಷದ ಅದ್ದೂರಿ ದಸರ ಮಹೋತ್ಸವ: ಸಚಿವ ಸಂತೋಷ್ ಲಾಡ್ ಅವರು ಚಾಲನೆ
ಸ್ಥಳೀಯ ಸುದ್ದಿ


ಮಹದೇವಪುರ: ಜೈಶ್ರೀರಾಮ್ ಸೇವಾ ಸಮಿತಿ ವತಿಯಿಂದ ಮಹದೇವಪುರ ಕ್ಷೇತ್ರದ ವರ್ತೂರಿನಲ್ಲಿ ಏರ್ಪಡಿಸಿದ್ದ ನಾಲ್ಕನೇ ವರ್ಷದ ವಿಜೃಂಭಣೆಯ ದಸರಾ ಮಹೋತ್ಸವಕ್ಕೆ ಸಚಿವ ಸಂತೋಷ್ ಲಾಡ್ ಅವರು ಚಾಲನೆ ನೀಡಿದರು.
ದಸರಾ ಅಥವಾ ವಿಜಯ ದಶಮಿಯು ಕೆಟ್ಟ ಗುಣಗಳಾದ ಕೋಪ, ಅಹಂಕಾರ, ಮತ್ತು ದುರಾಸೆಯನ್ನು ತ್ಯಜಿಸಿ, ಸತ್ಯ, ಧೈರ್ಯ ಮತ್ತು ದೃಢತೆಯಂತಹ ಸದ್ಗುಣಗಳನ್ನು ಅಳವಡಿಸಿಕೊಳ್ಳಲು ಪ್ರೇರಣೆ ನೀಡುತ್ತದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ದಸರಾವು ಧರ್ಮ, ಸತ್ಯ ಮತ್ತು ನ್ಯಾಯದ ವಿಜಯದ ಸಂಕೇತವಾಗಿದೆ. ಇದು ದುರ್ಗಾ ದೇವಿಯ ಆರಾಧನೆಯನ್ನು ಒಳಗೊಂಡಿದೆ ಎಂದರು.
ಈ ಹಬ್ಬವು ಪ್ರತಿಬಿಂಬಿಸುವ ಹಾಗೂ ಆತ್ಮಾವಲೋಕನ ಮಾಡುವ ಸಮಯವಾಗಿದೆ. ಇದು ಜನರು ತಮ್ಮನಂಬಿಕೆಗಳು ಮತ್ತು ಸಂಕಲ್ಪಗಳ ಶಕ್ತಿಯನ್ನು ಅರಿಯಲು ನೆನಪಿಸುತ್ತದೆ ಎಂದರು.
ನಮ್ಮ ರಾಜ್ಯ ಸರ್ಕಾರ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯದ ಜನತೆಯ ಅಭಿವೃದ್ಧಿಗೆ ಪಣತೊಟ್ಟಿದೆ,ಜನಪರ ಆಡಳಿತ ಮೂಲಕ ಜನತೆಗೆ ಆಸರೆ ಯಾಗಿದೆ ಎಂದು ಹೇಳಿದರು.
ಗ್ಯಾರಂಟಿಗಳ ಸಮರ್ಪಕ ಅನುಷ್ಠಾನದಿಂದ ಬಡವರ ಜೀವನ ಹಸನಾಗಿದ್ದು, ಮತ್ತಷ್ಟು ಜನಪರ ಯೋಜನೆಗಳ ಮೂಲಕ ಸಮಗ್ರ ಅಭಿವೃದ್ಧಿಗೆ ಮುನ್ನಡೆ ಬರೆಯಲಾಗುವುದು ಎಂದು ತಿಳಿಸಿದರು.
ಜೈ ಶ್ರೀರಾಮ ಸೇವಾ ಸಮಿತಿಯ ಅಧ್ಯಕ್ಷ ಕುಪ್ಪಿ ಮಂಜುನಾಥ ಅವರು ಮಾತನಾಡಿ ವರ್ತೂರು ಸರ್ಕಾರಿ ಕಾಲೇಜು ಆವರಣದಲ್ಲಿ ನಾಡ ಹಬ್ಬ ದಸರಾ ಪ್ರಯುಕ್ತ ಐದು ದಿನಗಳ ಕಾಲ ಬೇಲೂರು ಹಳೇಬೀಡು ದೇವಾಲಯದ ಮಾದರಿಯಲ್ಲಿ ಸೆಟ್ ನಿರ್ಮಿಸಿ ದುರ್ಗಾದೇವಿಯ ಸ್ಥಿರ ಬಿಂಬ ವನ್ನು ಪ್ರತಿಸ್ಥಾಪನೆ ಮಾಡಿ ವಿಜೃಂಭಣೆಯಿಂದ ದಸರಾ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ ತಿಳಿಸಿದರು
ನೂರಕ್ಕೂ ಹೆಚ್ಚು ಮಹಿಳೆಯರು ಕಳಸವನ್ನ ಹೊತ್ತುಕೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು ಎಂದರು.
ಮುಂದಿನ ದಿನಗಳಲ್ಲಿ ಮಹದೇವಪುರ ಕ್ಷೇತ್ರದಲ್ಲಿ ಬದಲಾವಣೆಯ ಪರ್ವ ಬರಲಿದ್ದು, ರಾಜ್ಯ ಸರ್ಕಾರದ ಅಭಿವೃದ್ಧಿ ಮಾರ್ಗದಲ್ಲಿ ಕ್ಷೇತ್ರ ಮುನ್ನಡೆಯಲಿದೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಕೆಲ ಮುಖಂಡರು ರಾಜ್ಯ ಸರ್ಕಾರದ ಕಾರ್ಯಗಳನ್ನು ಯೋಜನೆಗಳನ್ನು ಹಾಗೂ ಕಾಮಗಾರಿಗಳನ್ನು ನಮ್ಮ ಕೆಲಸದಂತೆ ಬಿಂಬಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್.ನಾಗೇಶ್,ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಪೂರ್ವ ಜಿಲ್ಲಾಧ್ಯಕ್ಷ ನಂದಕುಮಾರ್,ಗ್ಯಾರಂಟಿ ಅಧ್ಯಕ್ಷ ಪ್ರಶಾಂತ್,ಕ್ಷೇತ್ರದ ಗ್ಯಾರಂಟಿ ಅಧ್ಯಕ್ಷ ಸುರೇಶ್,ಬ್ಲಾಕ್ ಅಧ್ಯಕ್ಷರಾದ ಶ್ರೀನಿವಾಸ್ ರೆಡ್ಡಿ, ವಿನೋದ ಮತ್ತಿತರರು ಇದ್ದರು.