ತೆಲಂಗಾಣ:ನದಿಗೆ ಈಜಲು ತೆರಳಿದ್ದ ಒಂದೇ ಕುಟುಂಬದ 6 ಯುವಕರು ನದಿಯ ಪಾಲು.!

ದೇಶ/ವಿದೇಶ

ಧರ್ಮ ಬಸವನಪುರ

6/8/20251 min read

ತೆಲಂಗಾಣ: ನದಿಯಲ್ಲಿ ಈಜಾಡಲು ಹೊಗಿದ್ದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗುತ್ತಿದ್ದ ಓರ್ವ ಬಾಲಕನನ್ನು ಒ‌ಬ್ಬರನ್ನ ರಕ್ಷಿಸುವ ಸಲುವಾಗಿ ಒಂದೇ ಕುಟುಂಬದ 6 ಬಾಲಕರ ನದಿಯ ಪಾಲಾದ ಘಟನೆಯೊಂದು ತೆಲಂಗಾಣ (Telangana) ದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಈ ಮೃತ ದುರ್ದೈವಿಗಳೆಲ್ಲರು ಮದುವೆ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ್ದರು ಎಂದು ತೀಳಿದು ಬಂದಿದ್ದು, ಒಂದು ಮನೆತನಕ್ಕೆ ಸೇರಿದವರಾಗಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ಒಬ್ಬರು ನೀರಿನಲ್ಲಿ ಮುಳುಗುತ್ತಿದ್ದಾಗ ಒಬ್ಬರ ಹಿಂದೆ ಮತ್ತೋಬ್ಬರಂತೆ ರಕ್ಷಿಸಲು ಹೋಗಿ ದುರದೃಷ್ಟವಶಾತ್ ಅವರಲ್ಲಿ ಯಾರೂ ಜೀವಂತವಾಗಿ ಹೊರಬರಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಭೂಪಾಲಪಲ್ಲಿ ಜಿಲ್ಲೆಯಲ್ಲಿ ಮಹಾದೇವಪುರ ಮಂಡಲದ ಅಂಬಾಟಿಪಲ್ಲಿ ಗ್ರಾಮದ ಬಳಿಯ ಮೇಡಿಗಡ್ಡ ಬ್ಯಾರೇಜ್ ಬಳಿಯ ಗೋದಾವರಿ ನದಿಯಲ್ಲಿ 10 ಬಾಲಕರು ಸೇರಿ ಈಜಲು ಹೊಗುದ್ದ ಸಂದರ್ಭದಲ್ಲಿ 6 ಬಾಲಕರು ಈ ದುರಂತದಲ್ಲಿ ನೀರು ಪಾಲಾಗಿದ್ದಾರೆ.

ಇಷ್ಟಾದರೂ ನೀರಿನಲ್ಲಿ ಈಜಾಡುವ ಆಸೆಯಿಂದ ಗೋದಾವರಿಯಲ್ಲಿ ಸ್ನಾನ ಮಾಡಲು ನದಿಗೆ ಇಳಿದಿದ್ದರು ಮತ್ತಷ್ಟು ಜನ ಇಳಿದಿದ್ದರು ಎನ್ನಲಾಗಿದೆ.

ಈ ಘಟನೆ ಶನಿವಾರ ಸಂಜೆ ಜಯಶಂಕರ್ ಭೂಪಾಲಪಲ್ಲಿ ಜಿಲ್ಲೆಯ ಮಹದೇವಪುರ ಮಂಡಲದ ಅಂಬತ್ಪಲ್ಲಿಯಲ್ಲಿ ವರದಿಯಾಗಿದೆ. ಮಧುಸೂಧನ್ (18), ಪಟ್ಟಿ ಶಿವಮನೋಜ್ (15), ತೊಗರಿ ರಕ್ಷಿತ್ (13), ಸಾಗರ್ (16), ಬೊಲ್ಲೆದ್ಲಾ ರಾಮಚರಣ್ (17), ಪಸುಲ ರಾಹುಲ್ (19) ಮತ್ತು ಪಟ್ಟಿ ಶಿವಮಣಿ ಮೃತಪಟ್ಟ ದುರ್ದೈವಿಗಳು ಎಂದು ತಿಳಿದುಬಂದಿದೆ.