ಕೆ.ಆರ್.ಪುರ ಜಿಬಿಎ ವಲಯ ಆಯುಕ್ತರ ಕಚೇರಿಯಲ್ಲಿ 77ನೇ ಗಣರಾಜ್ಯೋತ್ಸವ ಸಂಭ್ರಮ.
ಸ್ಥಳೀಯ ಸುದ್ದಿ


ಕೆ.ಆರ್.ಪುರ: ಸಂವಿಧಾನವು ಪ್ರಜಾಪ್ರಭುತ್ವದ ಆತ್ಮವಾಗಿದ್ದು, ನಾವೆಲ್ಲರೂ ಸಂವಿಧಾನದ ಮೌಲ್ಯಗಳನ್ನು ಅರಿತುಕೊಂಡು ದೇಶದ ಅಭಿವೃದ್ಧಿಗೆ ಒತ್ತು ನೀಡೋಣ ಎಂದು ಕೆಆರ್‌ಪುರ ಜಿಬಿಎ ಜಂಟಿ ಆಯುಕ್ತರಾದ ಡಾ.ಸುಧಾ ತಿಳಿಸಿದರು.
ಕೆಆರ್ ಪುರ ಜಿಬಿಎ ಕಚೇರಿ ಆವರಣದಲ್ಲಿ ಸಿಬ್ಬಂದಿಯೊಂದಿಗೆ ಹಾಗೂ ಪೌರ ಕಾರ್ಮಿಕರ ಜೊತೆಗೆ 77ನೇ ಗಣರಾಜ್ಯೋತ್ಸವ ದಿನಾಚರಣೆ ನಿಮಿತ್ತ ಧ್ವಜಾರೋಹಣ ನೆರವೇರಿಸಿ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಗಳಿಗೆ ಪುಷ್ಪರ್ಚಾನೆ ಸಲ್ಲಿಸಿ ಬಳಿಕ ಅವರು ಮಾತನಾಡಿದರು.
1950 ಜನವರಿ 26 ರಂದು ಸಂವಿಧಾನವನ್ನು ಜಾರಿಗೆ ತರಲಾಯಿತು. ಸಂವಿಧಾನ ಪ್ರಜಾಪ್ರಭುತ್ವದ ಆತ್ಮ. ನಮ್ಮ ಸಂವಿಧಾನವು ಸಮಾನತೆ, ಭ್ರಾತೃತ್ವ, ವ್ಯಕ್ತಿಗೌರವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಒಳಗೊಂಡಿದ್ದು, ಜಗತ್ತಿನ ಎಲ್ಲ ಸಂವಿಧಾನಗಳಿಗಿಂತ ಶ್ರೇಷ್ಠ ಮೌಲ್ಯಗಳನ್ನು ನಮ್ಮ ಸಂವಿಧಾನ ಹೊಂದಿದೆ. ನಾವೆಲ್ಲರೂ ಸಂವಿಧಾನದ ಮೌಲ್ಯಗಳನ್ನು ಅರಿತು ದೇಶದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಅವರು ಹೇಳಿದರು
ಸಂವಿಧಾನ ಆಶಯದಡಿ ಪ್ರತಿಯೊಂದು ಕಾಯ್ದೆ ಮತ್ತು ಕಾನೂನುಗಳನ್ನು ರಚಿಸಲಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಕಾನೂನನಡಿ ನಡೆದುಕೊಳ್ಳುವುದು. ಅವುಗಳನ್ನು ಗೌರವಿಸುವುದು ಪ್ರತಿಯೊಬ್ಬರ ಕಾಳಜಿ ಪರ ಕಾರ್ಯವಾಗಿದೆ ಎಂದರು.
ಒಗ್ಗಟ್ಟಿನಲ್ಲಿ ಬಲವಿದೆ. ಎಲ್ಲರೂ ಒಟ್ಟಾಗಿರಿ, ಜಿಬಿಎ ರೂಲ್ಸ್ ಮಾಡುವುದಕ್ಕೆ ಇಷ್ಟೊಂದು ಕಷ್ಟ ಇದೆ. ಅದರಲ್ಲೂ ದೇಶಕ್ಕೆ
ಕಾನೂನು ರೂಪಿಸಬೇಕು ಎಂದರೆ ಅಷ್ಟು ಸುಲಭವಲ್ಲ, ಇಂತಹ ದೊಡ್ಡ ಸಂವಿಧಾನ ರಚಿಸಿರುವ ಅಂಬೇಡ್ಕರ್ ಅವರ ಕಾರ್ಯ ಅದ್ಭುತವಾದುದು ಎಂದು ಹೇಳಿದರು.
ಹೊಡೆದು ಆಳುವ ನೀತಿ ಬೇಡ, ಎಲ್ಲರೂ ತಂಡವಾಗಿ ಕೆಲಸ ಮಾಡುತ್ತಾ ಮುನ್ನುಗ್ಗಿದರೆ ಜಯ ಲಭಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.
ಪ್ರಧಾನಿ ಮೋದಿ ಅವರ ಆಶಯದಂತೆ ಪ್ರತಿಯೊಬ್ಬ ಭಾರತೀಯನ ಮನೆ ಮೇಲೆ ಧ್ವಜ ಆರೋಹಣ ಮಾಡಬೇಕು. ದೇಶದ ಬಗ್ಗೆ ಗೌರವ ಇಟ್ಟುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಇಇ ಶಿವಶಂಕರ್, ಎಇಇ ಜಗದೀಶ್, ಮುರುಳಿಧರ್, ಶಿವಕುನಾರ್, ಸಚೀನ್ ಮತ್ತಿತರರಿದ್ದರು.