ಕೆ.ಆರ್.ಪುರ: ಮಹರ್ಷಿ ವಾಲ್ಮೀಕಿ ರಾಮಾಯಣದ ಮೂಲಕ ಜಗತ್ತಿಗೆ ಸತ್ಯ ಸಂದೇಶವನ್ನು ಸಾರಿದ್ದಾರೆ ಎಂದು ಅಂಬೇಡ್ಕರ್ ನಗರ ಶಾಲಾ ಮತ್ತು ಕಾಲೇಜಿನ ಮುಖ್ಯಸ್ಥ ಹಿಟ್ಟಾಚಿ ಮಂಜುನಾಥ್ ಅವರು ಹೇಳಿದರು.
ರಾಮಮೂರ್ತಿನಗರದ ಅಂಬೇಡ್ಕರ್ ನಗರ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಪ್ರಯುಕ್ತ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಮಹಾನ್ ಪುರುಷ ವಾಲ್ಮೀಕಿ ಅವರು ಒಬ್ಬ ಪರಿಪೂರ್ಣ ಮನುಷ್ಯನಾಗಿ ಜಗತ್ತಿಗೆ ಸತ್ಯ ಸಂದೇಶ ಸಾರಲು 24000 ಶ್ಲೋಕಗಳನ್ನು ಬರೆದು ರಾಮಾಯಣವನ್ನು ಜಗತ್ತಿಗೆ ಪಸರಿಸುವ ಕೆಲಸ ಮಾಡಿದರು ಎಂದರು.
ರಾಮಾಯಣವನ್ನು ಶಾಲಾ ಮಕ್ಕಳಿಗೂ ತಿಳಿಹೇಳುವ ಕೆಲಸ ಮಾಡಬೇಕಿದೆ. ಮಹಾನ್ ಪುರುಷ ವಾಲ್ಮೀಕಿಯನ್ನು ಒಂದು ಜಾತಿಗೆ ಸೀಮಿತ ಮಾಡದೆ ಸರ್ವ ಜನಾಂಗದವರು ವಾಲ್ಮೀಕಿಯ ಸಂದೇಶ ಅರ್ಥೈಸಿಕೊಳ್ಳಬೇಕಿದೆ ಎಂದರು.
ನಮ್ಮ ಶಾಲಾ ಕಾಲೇಜಿನಲ್ಲಿ ಎಲ್ಲಾ ಆದರ್ಶ ಪುರುಷರನ್ನು ಗೌರವಿಸುವ ಉದ್ದೇಶದಿಂದಜಯಂತಿಗಳನ್ನು ಆಚರಿಸಲಾಗುತ್ತದೆ. ಅದರಂತೆ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತದೆ ಎಂದರು.
ಫ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾದ ಬಿ.ವಿ.ಭಾರತಿ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ವಿಜಯಾ, ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸಹ ಶಿಕ್ಷಕರು, ಸಿಬ್ಬಂದಿ ವರ್ಗದವರು ಇದ್ದರು.