ಮಹದೇವಪುರ: ಕ್ಷೇತ್ರದ ವರ್ತೂರು–ಗುಂಜೂರು ಮುಖ್ಯರಸ್ತೆ ಕಾಮಗಾರಿಯನ್ನು ಮಾಜಿ ಸಚಿವ ಹಾಗೂ ಮಹದೇವಪುರ ಟಾಸ್ಕ್ ಫೋರ್ಸ್ ಅಧ್ಯಕ್ಷ ಅರವಿಂದ ಲಿಂಬಾವಳಿ ಅವರು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.

ನಂತರ ಮಾತನಾಡಿದ ಅರವಿಂದ ಲಿಂಬಾವಳಿ ಅವರು
ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ವರ್ತೂರು ಕೋಡಿ ಬಳಿಯಿಂದ ಗುಂಜೂರು ಸಮೀಪದ ವರೆಗೂ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸುತ್ತ ಕಾಮಗಾರಿ ವೇಗವಾಗಿ ಪೂರ್ಣಗಿಳಿಸಲು ಅಧಿಕಾರಿಗಳಿಗೆ ಮಾರ್ಗದರ್ಶನ ಹಾಗೂ ಸೂಚಿಸಿದರು. ಅಲ್ಲದೆ ಕೆಲ ಭಾಗದಲ್ಲಿ ಕಾರ್ಮಿಕರ ಸಂಖ್ಯೆ ಬಲ ಕಡಿಮೆ ಇರುವುದನ್ನು ಅರಿತು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರನ್ನು ಪಡೆದು ಬೇಗನೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು,

ಅವಶ್ಯಕತೆ ಇಲ್ಲದ ವಸ್ತುಗಳನ್ನು ರಸ್ತೆಗಳ ಮೇಲೆ ಬಿಡಲಾಗಿದೆ. ಕಾಮಗಾರಿ ನಡೆಸಲು ಅಡ್ಡಿಯಾಗುತ್ತಿದೆ ಅಂತಹ ವಸ್ತುಗಳನ್ನು ಸ್ಥಳಾಂತರಿಸಿ ಎಂದರು. ಸಾರ್ವಜನಿಕರ ಬಹುದಿನಗಳ ಬೇಡಿಕೆ ಹಾಗೂ ವಾಹನ ಸವಾರರ ಸಂಚಾರ ದಟ್ಟಣೆ ನಿವಾರಿಸಲು ಶಾಶ್ವತ ಪರಿಹಾರ ಕಲ್ಪಿಸುವ ಕಾಮಗಾರಿ ನಡೆಯುತ್ತಿದ್ದು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗುಣಮಟ್ಟದಲ್ಲಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದರು.

ಈ ಸಂದರ್ಭದಲ್ಲಿ ಕ್ಷೇತ್ರದ ನಗರ ಮಂಡಲ ಅಧ್ಯಕ್ಷ ಎನ್.ಆರ್.ಶ್ರೀಧರ್ ರೆಡ್ಡಿ, ರಾಜ್ಯ ಬಿಜೆಪಿ ಪರಿಷತ್ ಸದಸ್ಯ ಎಲ್. ರಾಜೇಶ್, ಬೆಂಗಳೂರು ಕೆಂದ್ರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಮೋದಿ,ಮುಖಂಡರಾದ ವರ್ತೂರು ಶ್ರೀಧರ್, ವಿ.ಪಿ.ರಕ್ಷಿತ್,ನಾಗರಾಜ್,ದಿವಾಕರ್,ವಿವೇಕ್,ಹಾಗೂ ಅಧಿಕಾರಿಗಳು ಸ್ಥಳೀಯರು ಉಪಸ್ಥಿತರಿದ್ದರು.
ವರ್ತೂರು–ಗುಂಜೂರು ಮುಖ್ಯರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದ ಮಾಜಿ ಸಚಿವ ಲಿಂಬಾವಳಿ.