ಹುಟ್ಟಿನಿಂದಲೇ ಮೊಣಕಾಲು ಚಲನೆಗೆ ತೊಂದರೆ: 9 ವರ್ಷದ ಬಾಲಕಿಗೆ ಹೊಸ ಜೀವನೋತ್ಸಾಹ ನೀಡಿದ ಮೆಡಿಕವರ್ ಆಸ್ಪತ್ರೆ.
ಸ್ಥಳೀಯ ಸುದ್ದಿ


ಬೆಂಗಳೂರು:(ವೈಟ್ ಫೀಲ್ದ್) : ಹುಟ್ಟಿನಿಂದ ಮೊಣಕಾಲು ಚಲನೆಗೆ ತೊಂದರೆ ಅನುಭವಿಸುತ್ತಿದ್ದ ಕೊಲ್ಕತ್ತಾ ಮೂಲದ 9 ವರ್ಷದ ಅಂತರ, ಈವರೆಗೆ ದೆಹಲಿಯಲ್ಲಿ ಎರಡು ಬಾರಿ ಶಸ್ತ್ರಚಿಕಿತ್ಸೆಗೂ ಫಲಿತಾಂಶ ಕಾಣದೆ ನಿರಾಸೆಯಲ್ಲಿದ್ದರು. ಆದರೆ ಇದೀಗ ಬೆಂಗಳೂರಿನ ವೈಟ್‌ಫೀಲ್ಡ್‌ನ ಮೆಡಿಕವರ್ ಆಸ್ಪತ್ರೆಯಲ್ಲಿ ನಡೆಸಲಾದ ಕ್ವಾಡ್ರಿಸೆಪ್ಸ್ ಪ್ಲಾಸ್ಟಿ ಶಸ್ತ್ರಚಿಕಿತ್ಸೆಯ ಮೂಲಕ ಆಕೆ ಆರೋಗ್ಯ ಪೂರ್ಣ ಜೀವನದತ್ತ ಹೆಜ್ಜೆಯಿಟ್ಟಿದ್ದಾಳೆ.
ಅಂತರಳ ಬಲಗಾಲು ಹುಟ್ಟಿನಿಂದಲೇ ಸಂಪೂರ್ಣವಾಗಿ ಮಡಚಲು ಆಗುತ್ತಿರಲಿಲ್ಲ. ಒಂದು ಹಾಗೂ ಮೂರು ವರ್ಷದ ವಯಸ್ಸಿನಲ್ಲಿ ನಡೆಸಿದ ಶಸ್ತ್ರಚಿಕಿತ್ಸೆಗಳ ಬಳಿಕವೂ ಚಲನೆಯ ಸಮಸ್ಯೆ ಮುಂದುವರಿದಿತ್ತು. ಆಕೆ ನಡೆಯಲು ಅಥವಾ ಓಡಲು ತೊಂದರೆ ಇಲ್ಲದಿದ್ದರೂ, ಬಲ ಮಂಡಿ ಸಂಪೂರ್ಣವಾಗಿ ಮಡಚಲಾಗುತ್ತಿರಲಿಲ್ಲ. ಅಂತರಳ ಪೋಷಕರು ಮೆಡಿಕವರ್ ಆಸ್ಪತ್ರೆಯ ಹಿರಿಯ ಮೂಳೆ ತಜ್ಞ ಡಾ. ಆರ್. ಡಿ. ಚಕ್ರವರ್ತಿ ಅವರನ್ನು ಸಂಪರ್ಕಿಸಿದರು. ತಜ್ಞರಾದ ಡಾ. ಚಕ್ರವರ್ತಿ, ಡಾ. ಸಂಜಯ್ ಹೆಗಡೆ ಮತ್ತು ಡಾ. ರಾಘವೇಂದ್ರ ರೆಡ್ಡಿ ಅವರ ನೇತೃತ್ವದಲ್ಲಿ ಕ್ವಾಡ್ರಿಸೆಪ್ಸ್ ಪ್ಲಾಸ್ಟಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿತು. ಶಸ್ತ್ರಚಿಕಿತ್ಸೆಯ ನಂತರ ಅಂತರನಿಗೆ ಸ್ಲಾಬ್ ಹಾಕಲಾಗಿದ್ದು, ಪ್ರಸ್ತುತ ಆಕೆ ಚೇತರಿಸಿಕೊಳ್ಳುತ್ತಿರುವ ಸ್ಥಿತಿಯಲ್ಲಿದ್ದಾರೆ.
ಇಂತಹ ವಿಶೇಷ ಕೇಸ್‌ಗಳನ್ನು ನಿರ್ವಹಿಸುವುದು ನಿಖರ ವೈದ್ಯಕೀಯ ಜ್ಞಾನ ಮತ್ತು ಶ್ರದ್ದೆಯ ಅಗತ್ಯವಿದೆ. ರೋಗಿ ಸಂಪೂರ್ಣ ಗುಣಮುಖರಾಗುವಲ್ಲಿ ಯಾವುದೇ ಅನುಮಾನವಿಲ್ಲ ಎಂದು ಡಾ. ಆರ್. ಡಿ. ಚಕ್ರವರ್ತಿ ಸಂತಸ ವ್ಯಕ್ತಪಡಿಸಿದರು.