ಹನುಮ ಜಯಂತಿ ಪ್ರಯುಕ್ತ ಬಸವನಪುರ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಭಕ್ತಾದಿಗಳ ದಂಡು

ಸ್ಥಳೀಯ ಸುದ್ದಿ

ಧರ್ಮ ಬಸವನಪುರ

4/13/20251 min read

ಕೆ.ಆರ್.ಪುರ : ಇಂದು ಹನುಮನ ಜಯಂತಿ ಅಂಗವಾಗಿ ಬಸವನಪುರ ಗ್ರಾಮದ ಶ್ರೀ ಅಭಯ ಆಂಜನೇಯ ಸ್ವಾಮಿಗೆ ಬೆಣ್ಣೆ ಅಲಾಂಕರವನ್ನ ಮಾಡಿ ವಿಶೇಶ ಪೂಜೆ ಸಲ್ಲಿಸಲಾಯಿತು.

ಹನುಮ ಜಯಂತಿಯ ಪ್ರಯುಕ್ತ ಶ್ರೀ ಅಭಯಾಂಜನೇಯ ಸ್ವಾಮಿ ಸನ್ನಿದಾನಕ್ಕೆ ವಿವಿಧ ಹೂಗಳಿಂದ ಅಲಂಕಾರ ಮಾಡಿ ಸಿಂಗಾರ ಮಾಡಲಾಗಿತ್ತು. ಅಪಾರ ಭಕ್ತರು ಸಾಲು ಗಟ್ಟಿ ನಿಂತು ದೇವರ ದರ್ಶನ ಪಡೆದರು.

ಶನಿವಾರ ಆದ ಕಾರಣ ಆಂಜನೇಯ ಸ್ವಾಮಿ ದೇವಲಯಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರಲಾರಂಭಿಸಿದರು. ಬಸವನಪುರ ಸುತ್ತಮುತ್ತಲಿನ ಬಡಾವಣೆಗಳ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದುಕೊಂಡರು.

ಹನುಮ ಜಯಂತಿ ಆಚರಣೆ:

ಹನುಮ ಜಯಂತಿಯನ್ನು ವರ್ಷಕ್ಕೆ ಎರಡು ಬಾರಿ ಆಚರಿಸಲಾಗುತ್ತದೆ.  ಉತ್ತರ ಭಾರತದ ಭಕ್ತರು ಹನುಮಾನ್ ಜಯಂತಿಯನ್ನು ಚೈತ್ರ ಮಾಸದ ಪೂರ್ಣಿಮೆಯಂದು ಅಂದರೆ ಮಾರ್ಚ್‌ ಏಪ್ರಿಲ್ ಮಧ್ಯೆ ಆಚರಿಸುತ್ತಾರೆ. ಈ ದಿನವೇ ಆಂಜನಾ ಮತ್ತು ಕೇಸರಿಗೆ ವಾಯು ದೇವರ ಆಶೀರ್ವಾದಿಂದ ಹನುಮಂತ ಜನಿಸಿದ ಎನ್ನಲಾಗುತ್ತದೆ.

ಇನ್ನೂ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಅಂದರೆ ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಹನುಮ ಜಯಂತಿಯನ್ನು ಮಾರ್ಗಶೀರ್ಷ ಮಾಸದಲ್ಲಿ ಅಂದರೆ ಡಿಸೆಂಬರ್ ಜನರವರಿ ಸಮಯದಲ್ಲಿ ಆಚರಿಸಲಾಗುತ್ತದೆ. ವರ್ಷಕ್ಕೆ ಎರಡು ಬಾರಿ ಹನುಮ ಜಯಂತಿ ಆಚರಿಸಲು ಕಾರಣ ಪ್ರಾಚೀನ ಪುರಾಣಗಳು.

ಕೆಲವು ಶಾಸ್ತ್ರಗಳು ಹನುಮಂತನ ಜನನವನ್ನು ಚೈತ್ರ ಮಾಸಕ್ಕೆ ಸಂಬಂಧಿಸಿದಂತೆ ಉಲ್ಲೇಖಿಸುತ್ತವೆ. ಇನ್ನೂ ಕೆಲವು ಮಾರ್ಗಶೀರ್ಷ ಮಾಸದ ವೇಳೆ ಎಂದು ವಿವರಿಸುತ್ತವೆ. ಇಂದು ಎಲ್ಲಾ ದೇವಸ್ಥಾನದಲ್ಲಿ ಹನುಮನಿಗೆ ವಿಶೇಷ ಪೂಜೆಯನ್ನು ಮಾಡಲಾಯಿತು, ಹಬ್ಬದ ಸಂಭ್ರಮ ಜೋರಾಗಿತ್ತು.