ರೈಲ್ವೆ ಸ್ಟೆಷನ್ʼಗೆ ತೆರಳುತ್ತಿದ್ದ ವ್ಯಕ್ತಿ ಪಾಳು ಬಾವಿಗೆ ಬಿದ್ದು ಪರದಾಟ.! ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ
ಸ್ಥಳೀಯ ಸುದ್ದಿ


ರೈಲ್ವೆ ಸ್ಟೆಷನ್ ಗೆ ತೆರಳುತ್ತಿದ್ದ ವ್ಯಕ್ತಿ ಪಾಳು ಬಾವಿಗೆ ಬಿದ್ದು ಪರದಾಟ ನಡೆಸಿದ ಘಟನೆ ಯಲಹಂಕ ತಾಲೂಕಿನ ರಾಜನುಕುಂಟೆ ಸಮೀಪ ನಡೆದಿದೆ. ಕೊಪ್ಪಳ ಮೂಲದ ಶಿವರಾಜ್ ಪೂಜಾರ್ (28) ಪಾಳು ಬಾವಿಗೆ ಬಿದ್ದ ವ್ಯಕ್ತಿಯಾಗಿದ್ದು,
ರೈಲ್ವೆ ಸ್ಟೇಷನ್ ಹಿಂಭಾಗದಿಂದ ಕಾಲುದಾರಿಯಲ್ಲಿ ಸ್ಟೆಷನ್ ಬಳಿ ಬರುತ್ತಿರುವ ವೇಳೆ ಪಾಳು ಬಾವಿ ನೋಡದೆ ಒಳಗೆ ಬಿದ್ದಿದ್ದಾನೆ. ಪಾಳು ಬಾವಿಗೆ ಬಿದ್ದವನ ಕಿರುಚಾಟವನ್ನ ಕೇಳಿಸಿಕೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪೋಲಿಸರು ಅಗ್ನಿಶಾಮಕದಳದವರಿಗೆ ಮಹಿತಿ ನೀಡಿದ್ದಾರೆ.
ಸ್ಥಳಕ್ಕೆ ದೊಡ್ಡಬಳ್ಳಾಪುರ ಅಗ್ನಿಶಾಮಕದಳದ ಸಿಬ್ಬಂದಿ ಭೇಟಿ ನೀಡಿ ಪಾಳುಬಾವಿಗೆ ಬಿದ್ದಿದ್ದ ಶಿವರಾಜ್ ಪೂಜಾರ್ ರಕ್ಷಣೆ ಮಾಡಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಗ್ನಿಶಾಮಕ ದಳದ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನೀಕರ ಮೆಚ್ಚುಗೆ ವ್ಯಕ್ತವಾಗಿದೆ.