ಮಂಡ್ಯ: ಕಳ್ಳತನಕ್ಕೆ ಯತ್ನಿಸಿ ಕೊನೆ ಕ್ಷಣದಲ್ಲಿ ಕೈಮುಗಿದು ತೆರಳಿದ ವಪಾಸ್ ಹೊರಟ ಮುಸುಕುಧಾರಿ.

ರಾಜ್ಯ

ಧರ್ಮ ಬಸವನಪುರ.

6/7/20251 min read

ಮಂಡ್ಯ : ದೇವಾಲಯದಲ್ಲಿ ಕಳ್ಳತನ ಮಾಡಲು ಬಂದಿದ್ದ ಮುಸುಕುಧಾರಿಯೊಬ್ಬ ಕೊನೆ ಕ್ಷಣದಲ್ಲಿ ಕಳ್ಳತನಕ್ಕೆ ಹೆದರಿ ದೇವರಿಗೆ ಕೈ ಮುಗಿದು ವಾಪಸ್ ತೆರಳಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕದಲೂರು ಗ್ರಾಮದಲ್ಲಿ ನಡೆದಿದೆ.

ಮುಸುಕುಧಾರಿಯೊಬ್ಬ ಕದಲೂರು ಗ್ರಾಮದ ಶ್ರೀ ಪಟ್ಟಲದಮ್ಮ ದೇಗುಲದಲ್ಲಿ ಗುರುವಾರ ರಾತ್ರಿ ಕಳ್ಳತನಕ್ಕೆ ಯತ್ನಿಸಿದ್ದಾನೆ. ದೇವಾಲಯದ ಸುತ್ತ ಗಮನಿಸಿದ್ದಾನೆ. ಆದರೆ, ಕೊನೆ ಕ್ಷಣದಲ್ಲಿ ಕಳ್ಳತನಕ್ಕೆ ಹೆದರಿ ದೇವರಿಗೆ ಕೈ ಮುಗಿದು ತೆರಳಿದ್ದಾನೆ.

ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ವೀಡಿಯೋ ವೈರಲ್ ಆಗಿದೆ. ಕೆಸ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.