ಕ್ಯಾಮರಾಗೆ ಪೋಸ್ ಕೊಟ್ಟ ತಾಯಿ ಕರಡಿ ಮತ್ತು ಮರಿ ಕರಡಿ! ವಿಡಿಯೋ ವೈರಲ್

ಸೋಷಿಯಲ್ ಮೀಡಿಯಾ

RAGHAVENDRA H A

7/18/20251 min read

ತಾಯಿ ಕರಡಿ ಮತ್ತು ಮರಿ ಕರಡಿ ಕ್ಯಾಮರಾಗೆ ಪೋಸ್​ ಕೊಟ್ಟಿದ್ದು ಈ ದೃಶ್ಯಗಳು ಡ್ರೋನ್​ ವಿಡಿಯೋದಲ್ಲಿ ಸೆರೆಯಾಗಿದೆ. ಸದ್ಯ ಈ ಡ್ರೋನ್​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ರಾಮನಗರ ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣವಾಗಿರುವ ರೇವಣಸಿದ್ದೇಶ್ವರ ಬೆಟ್ಟದ ಪಕ್ಕದಲ್ಲಿರುವ ಮತ್ತೊಂದು ಬೆಟ್ಟದ ತುದಿಯಲ್ಲಿ ತಾಯಿ ಕರಡಿಯೊಂದಿಗೆ (Bear) ಅದರ ಮರಿ ಆಟವಾಡುತ್ತಿರುವ ದೃಶ್ಯವನ್ನು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ರೇವಣಸಿದ್ದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದ ಪ್ರವಾಸಿಗರೊಬ್ಬರು ಡೋಣ್ ಕ್ಯಾಮರಾ ಮೂಲಕ ಕರಡಿ ಮತ್ತು ಅದರ ಮರಿಯ ಆಟ ಸೆರೆ ಹಿಡಿದಿದ್ದು, ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ವಿಡಿಯೋದಲ್ಲೇನಿದೆ?

ತನ್ನ ಮರಿಯೊಂದಿಗೆ ಕರಡಿ ಆಟವಾಡುವ ನೃತ್ಯ ಮಾಡುವ ದೃಶ್ಯ ಡೋನ್‌ನಲ್ಲಿ ಸೆರೆಯಾಗಿದೆ. ಅಲ್ಲದೆ, ಡೋನ್ ಬರುತ್ತಿದ್ದಂತೆ ಎರಡು ತುಂಟಾ ಮರಿಗಳು ಪೋಸ್ ಕೊಟ್ಟಿರುವ ಸ್ಟೈಲ್ ನೆಟ್ಟಿಗರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಇನ್ನು ಈ ವಿಡಿಯೋಗೆ ಸಾಕಷ್ಟು ಲೈಕ್ ದೊರೆತಿದೆ. ಇನ್ನು ಡೋಣ್ ಸದ್ದು ಕೇಳಿ ಕರಡಿ ಮರಿಯೊಂದಿಗೆ ಕಲ್ಲಿನ ಪೊಟರೆಯೊಳಕ್ಕೆ ಸೇರಿಕೊಂಡಿದೆ.

ಪ್ರಜಾ ಭಾರತ್ ನ್ಯೂಸ್ ವೆಬ್ ಪೋರ್ಟಲ್ ವಾಟ್ಸಪ್ ಗ್ರೂಪ್ ಸೇರಲು 👇👇Follow this link to join my WhatsApp group: https://chat.whatsapp.com/Fj6L4Eak7N994zl2QHSpHK