ರಾಮನಗರ: ಅಯ್ಯಪ್ಪನ ದರ್ಶನಕ್ಕೆ ತೆರಳಿದ್ದ ಯುವಕನಿಗೆ ಹೃದಯಾಘಾತ. ಅಯ್ಯಪ್ಪನ ಭಕ್ತ ಸಾವು.

ಜಿಲ್ಲಾ ಸುದ್ದಿಸ್ಥಳೀಯ ಸುದ್ದಿ

ಧರ್ಮ ಬಸವನಪುರ

6/16/20251 min read

ರಾಮನಗರ: ಶಬರಿಮಲೈ ಅಯ್ಯಪ್ಪನ ದರ್ಶನ ಮುಗಿಸಿ ಬರುವಾಗ, 18 ವರ್ಷದ ಅಯ್ಯಪ್ಪ ಭಕ್ತ ಹೃದಯಾಘಾತದಿಂದ ಮೃತನಾಗಿದ್ದಾನೆ. ರಾಮನಗರದ ಕನಕಪುರ ಮೂಲದ ಪ್ರಜ್ವಲ್ ಮೃತ ಭಕ್ತನಾಗಿದ್ದಾನೆ.

ಮೂಲತಃ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದ ನಿವಾಸಿಯಾಗಿರುವ ಪ್ರಜ್ವಲ್ ಅವರು ತಮ್ಮ ತಂದೆ ಹಾಗೂ ಸ್ನೇಹಿತರ ಜೊತೆ ಶಬರಿಮಲೆ ಯಾತ್ರೆಗೆ ತೆರಳಿದ್ದರು.

ಅಯ್ಯಪ್ಪನ ದರ್ಶನ ಮುಗಿಸಿ ಬೆಟ್ಟ ಇಳಿಯುವಾಗ ಪ್ರಜ್ವಲ್‌ಗೆ ಹೃದಯಾಘಾತವಾಗಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರ್ಗಮಧ್ಯೆ ಪ್ರಜ್ವಲ್ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಶಬರಿಮಲೈ ಪೋಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ. ಕನಕಪುರಕ್ಕೆ ತರಲು ಕುಟುಂಬಸ್ಥರು ತಯಾರಿ ನಡೆಸಿದ್ದಾರೆ. ಕೆಲ ತಿಂಗಳಿಂದ ಹಲವು ಯುವಕ, ಯುವತಿಯರು ಹೃದಯಾಘಾತದಿಂದ ಮೃತಪಡುತ್ತಿರುವುದು ದುಃಖಕರ ಸಂಗತಿ.

ಶ್ರದ್ಧಾ, ಭಕ್ತಿ ಹಾಗೂ ನಂಬಿಕೆಯಿಂದ ಶಬರಿಮಲೆ ಯಾತ್ರೆಗೆ ತೆರಳಿದ್ದ ಅಯ್ಯಪ್ಪ ಭಕ್ತ ಪ್ರಜ್ವಲ್ ಸಾವು ಕುಟುಂಬ ಹಾಗೂ ಸ್ನೇಹಿತರಿಗೆ ಆಘಾತ ತರುವಂತಹ ಘಟನೆ ನಡೆದಿದೆ.