ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಪ್ರತಿಕೃತಿಗೆ ಹಾಲು, ತುಪ್ಪದ ಅಭಿಷೇಕ

ಜಿಲ್ಲಾ ಸುದ್ದಿ

Raghavendra H A

6/2/20251 min read

ಮಾಲಿನ್ಯ ನಿಯಂತ್ರಣ ಮಂಡಳಿ ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರಕ್ಕೆ ಆಗ್ರಹಿಸಿ ಅರ್ಕಾವತಿ ನದಿ ಹೋರಾಟ ಸಮಿತಿ ವಿನೂತನ ಹೋರಾಟಕ್ಕೆ ಮುಂದಾಗಿದ್ದು ಅಧಿಕಾರಿಯ ಪ್ರತಿಮೆಗೆ ಹಾಲು, ತುಪ್ಪ ಮತ್ತು ಗಂಧದ ಅಭಿಷೇಕ ಮಾಡುವ ಮೂಲಕ ಪ್ರತಿಭಟನೆ ಮಾಡಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕು ಚಿಕ್ಕತುಮಕೂರು ಕೆರೆಯ ದಂಡೆಯ ಮೇಲೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಭಾಸ್ಕರ್​ ಪ್ರತಿಕೃತಿಗೆ ಅಭಿಷೇಕ ಮತ್ತು ಪೂಜಾ ಕಾರ್ಯಕ್ರಮವನ್ನು ಹೋರಾಟ ಸಮಿತಿ ಅಯೋಜನೆ ಮಾಡಿ, ಹಾಲಿನ ಅಭಿಷೇಕ, ತುಪ್ಪದ ಅಭಿಷೇಕ, ಮತ್ತು ಗಂಧದ ಅಭಿಷೇಕ ಮಾಡಿದರು, ಗ್ರಾಮಸ್ಥರ ಮೇಲೆ ಕರುಣೆ ತೋರೋ.. ಓ ಭಾಸ್ಕರ್ ಜನರಿಗೆ ಶುದ್ಧ ನೀರು ಗಾಳಿ ಕೊಡು ಎಂದು ಪೂಜೆ ಮಾಡಿದರು.

ದೊಡ್ಡಬಳ್ಳಾಪುರ ಮಾಲಿನ್ಯ ನಿಯಂತ್ರಣ ಮಂಡಳಿ ಕಛೇರಿಯೂ ಬೆಂಗಳೂರಿನ ಪಿಣ್ಯಾದಲ್ಲಿದೆ, ಕಛೇರಿಯನ್ನ ದೊಡ್ಡಬಳ್ಳಾಪುರಕ್ಕೆ ಶೀಫ್ಟ್ ಮಾಡುವಂತೆ ಕಳೆದ ನಾಲ್ಕು ವರ್ಷಗಳಿಂದ ಅರ್ಕಾವತಿ ನದಿ ಹೋರಾಟ ಸಮಿತಿ ಹೋರಾಟ ಮಾಡುತ್ತಿದೆ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಭಾಸ್ಕರ್ ರವರಿಗೆ ಕಛೇರಿಯ “ಕೀ”ಯನ್ನ ನೀಡಿದ ಜಿಲ್ಲಾಧಿಕಾರಿಗಳಾದ ಬಸವರಾಜು ಶೀಫ್ಟ್ ಆಗುವಂತೆ ಸೂಚನೆ ನೀಡಿದ್ದಾರೆ, ಜಿಲ್ಲಾಧಿಕಾರಿಗ ಮಾತಿಗೂ ಬೆಲೆ ಕೊಡದ ಭಾಸ್ಕರ್ ಕುಂಟು ನೆಪಗಳನ್ನ ಹೇಳುತ್ತಿರುವುದು ಹೋರಾಟಗಾರರ ಅಕ್ರೋಶಕ್ಕೆ ಕಾರಣವಾಗಿದೆ.

ಇದೇ ವೇಳೆ ಮಾತನಾಡಿದ ಹೋರಾಟಗಾರರಾದ ಸತೀಶ್, ದೊಡ್ಡಬಳ್ಳಾಪುರ ಪ್ರವಾಸಿ ಮಂದಿರಕ್ಕೆ ಕಚೇರಿಯನ್ನ ಶೀಫ್ಟ್ ಆಗುವಂತೆ ಜಿಲ್ಲಾಧಿಕಾರಿಗಳು ಭಾಸ್ಕರ್ ರವರಿಗೆ ಸೂಚನೆ ನೀಡಿದ್ದಾರೆ. ಆದರೆ ಭಾಸ್ಕರ್ ಕಛೇರಿಯಲ್ಲಿ ಮಹಿಳಾ ಸಿಬ್ಬಂದಿ ಇದ್ದಾರೆ, ಪ್ರವಾಸಿ ಮಂದಿರದಲ್ಲಿ ಶೌಚಾಲಯ ಇಲ್ಲವೆಂದ್ದು ಕುಂಟು ನೆಪ ಹೇಳುವ ಮೂಲಕ ಬೇಜವಾಬ್ದಾರಿಯುತವಾಗಿ ಮಾತನಾಡಿದ್ದಾರೆ, ಅವರಿಗೆ ಬಡಿದಿರುವ ಅಜ್ಞಾನವನ್ನ ಹೋಗಲಾಡಿಸುವ ಸಲುವಾಗಿ ಪೂಜಾ ಕಾರ್ಯಕ್ರಮದ ಮೂಲಕ ಪ್ರತಿಭಟನೆ ಮಾಡಿದ್ದಾಗಿ ಹೇಳಿದರು.