AICC ಹ್ಯೂಮನ್ ರೈಟ್ಸ್ ಬೆಂಗಳೂರು ಜಿಲ್ಲೆ ಮಹಿಳಾ ಘಟಕ ವತಿಯಿಂದ ಮಹಾ ನಾಯಕ ಅಂಬೇಡ್ಕರ್ ಜಯಂತಿ ಆಚರಣೆ

ಸ್ಥಳೀಯ ಸುದ್ದಿ

ರಾಘವೇಂದ್ರ ಹೆಚ್.ಎ

4/16/20251 min read

ಮಹದೇವಪುರ (ಚನ್ನಸಂದ್ರ): ಎಐಸಿಸಿ ಹ್ಯೂಮನ್ ರೈಟ್ಸ್ ಬೆಂಗಳೂರು ಜಿಲ್ಲೆ ಮಹಿಳಾ ಘಟಕದ ಕಛೇರಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಆಚರಣೆ ಮಾಡಲಾಯಿತು.

ಎಐಸಿಸಿ ಹ್ಯೂಮನ್ ರೈಟ್ಸ್ ಬೆಂಗಳೂರು ಜಿಲ್ಲಾ ಅಧ್ಯಕ್ಷರಾದ ಆನಂದ್ ಪ್ರಕಾಶ್ ಅವರು ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ‌ ಮಾತನಾಡಿ ಅವರು ಅಂಬೇಡ್ಕರ್ ಸಂವಿಧಾನದ ಮೂಲಕ ದೇಶದಲ್ಲಿ ಸಮಾನತೆಗೆ ನಾಂದಿ ಹಾಡಿದ್ದು, ಜಾತೀಯತೆ ತೊಲಗಿಸಲು ಶ್ರಮಿಸಿದ್ದಾರೆ ಎಂದು ಹೇಳಿದರು.

ಅಂಬೇಡ್ಕರ್ ದೇಶಕಂಡ ಮಹಾಜ್ಞಾನಿ. ಅಂದು ಅವರು ರಚಿಸಿದ ಸಂವಿಧಾನ ಇಂದು ಭಾರತೀಯರಿಗೆ ದಾರಿ ದೀಪವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಐಸಿಸಿ ಹ್ಯೂಮನ್ ರೈಟ್ಸ್ ಮಹಿಳಾ ಘಟಕದ ಅಧ್ಯಕ್ಷರಾದ ಸೌಭಾಗ್ಯ, ಉಪಾಧ್ಯಕ್ಷರಾದ ಅಂಬಿಕಾ, ಸುರೇಶ್, ಜಂಟಿ ಕಾರ್ಯದರ್ಶಿಗಳಾದ ನಾಗಾಶ್ರಿ ಕಟ್ಟಿಮನೆ, ಕೆ.ಆರ್. ಪುರ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷರಾದ ಮಹಾಲಕ್ಷ್ಮಿ , ತಾಲ್ಲೂಕು ಅಧ್ಯಕ್ಷರಾದ ಕೃಷ್ಣ ಮೂರ್ತಿ, ಮಹದೇವಪುರ ವಿಧಾನಸಭಾ ಕ್ಷೇತ್ರ ಮತ್ತು ಹೊಸಕೋಟೆ ತಾಲ್ಲೂಕು ಅಧ್ಯಕ್ಷರುಗಳು ಇನ್ನು ಅನೇಕ ಎಐಸಿಸಿ ಹ್ಯೂಮನ್ ರೈಟ್ಸ್ ನ ಬೆಂಗಳೂರು ಜಿಲ್ಲೆಯ ಪದಾಧಿಕಾರಿಗಳು ಜೈ ಭೀಮ್ ಸಂಘಟನೆಗಳು ಭಾಗವಹಿಸಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ವಿಜೃಂಭಣೆಯಿಂದ ಆಚರಿಸಿ ಶುಭಕೋರಿದರು.