ಜಿಲ್ಲಾಡಳಿತ ಭವನದಲ್ಲಿ ಅಮರಶಿಲ್ಪಿ ಜಕಣಾಚಾರಿ ಜಯಂತಿ ಆಚರಣೆಯ

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

1/1/20261 min read

ಬೆಂ.ಗ್ರಾ.ಜಿಲ್ಲೆ: ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯನ್ನು ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಅವರು ಉದ್ಘಾಟಿಸಿ ಅಮರ ಶಿಲ್ಪಿ ಜಕಣಾಚಾರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಿಲ್ಲಿಸಿದರು.

ನಂತರ ಮಾತನಾಡಿ ವಾಸ್ತು ಶಿಲ್ಪದ ಹರಿಕಾರ ಎಂದೇ ಪ್ರಸಿದ್ಧಿ ಪಡೆದಿರುವ ವಿಶ್ವಕರ್ಮ ಜಕಣಾಚಾರಿ ಅವರು ವಾಸ್ತು ಶಿಲ್ಪ ಮತ್ತು ವಿಗ್ರಹ ಕೆತ್ತನೆಯಲ್ಲಿ ಚಿರಪರಿಚಿತರಾಗಿ ಅವರ ಕೆತ್ತನೆಗಳಲ್ಲಿ ಪ್ರಮುಖವಾಗಿ ಬೇಲೂರು ಚನ್ನಕೇಶವ, ಹಳೇಬೀಡು ಸೋಮನಾಥೇಶ್ವರ ದೇವಾಲಾಯಗಳ ವಾಸ್ತು ಶಿಲ್ಪ ಕಲೆಯು ವಿಶ್ವ ಪಾರಂಪರಿಕ ತಾಣಗಳ ಮಾನ್ಯತೆ ಪಡೆದಿದೆ. ಅವರ ಕಲೆಗೆ ಬೆಲೆ ಕಟ್ಟಲಾಗದು. ಅವರ ಕಾಯಕ ನಿಷ್ಠೆ, ಆದರ್ಶ ಗುಣ ಮತ್ತು ಬೆಳೆದು ಬಂದ ಪರಿಶ್ರಮದ ಘಟನೆಗಳನ್ನು ನಾವು ಅರಿಯಬೇಕು, ವಾಸ್ತು ಶಿಲ್ಪಕಲೆಗೆ ಅವರ ಕೊಡುಗೆ ಅಸಾಮಾನ್ಯ ವಾದುದು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ರಾಜೀವ್ ಸುಲೋಚನ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಗೀತಾ, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.