ಅಂಬೇಡ್ಕರ್ ಒಂದು ಜಾತಿಗೆ ಸೀಮಿತವಲ್ಲ, ಸರ್ವನಾಯಕನಂತೆ ಪ್ರತಿಯೊಬ್ಬರು ಆರಾಧಿಸಬೇಕು: ಕುಪ್ಪಿ ಮಂಜುನಾಥ್
ಸ್ಥಳೀಯ ಸುದ್ದಿ


ಅಂಬೇಡ್ಕರ್ ಒಂದು ಜಾತಿಗೆ ಸೀಮಿತವಲ್ಲ, ಸರ್ವನಾಯಕನಂತೆ ಪ್ರತಿಯೊಬ್ಬರು ಆರಾಧಿಸಬೇಕು: ಕುಪ್ಪಿ ಮಂಜುನಾಥ್
ವರ್ತೂರು:(ಮಹದೇವಪುರ): ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಿಂದ ದೇಶದ ಎಲ್ಲಾ ಜನಾಂಗದವರು ಸಹಬಾಳ್ವೆಯಿಂದ ಬದುಕನ್ನು ನಿರ್ಮಿಸಿಕೊಂಡಿದ್ದಾರೆಂದು ವರ್ತೂರು ಕುಪ್ಪಿ ಮಂಜುನಾಥ್ ಅವರು ತಿಳಿಸಿದರು.
ವರ್ತೂರಿನ ಗಾಂಧಿ ವೃತ್ತದಲ್ಲಿ ವರ್ತೂರು ಸ್ವಾಭಿಮಾನಿ ಬಳಗದ ಅಧ್ಯಕ್ಷರಾದ ಕುಪ್ಪಿ ಮಂಜುನಾಥ್ ಅವರ ನೇತ್ರತ್ವದಲ್ಲಿ ಆಯೋಜಿಸಿದ ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಭಾರತಕ್ಕೆ 1947ರಲ್ಲಿ ಸ್ವತಂತ್ರ ಬಂದ ನಂತರ ನಮ್ಮ ದೇಶದಲ್ಲಿ ಯಾವ ರೀತಿ ಸರ್ಕಾರ ನಡೆಸಬೇಕು,ಆಡಳಿತ ನಡೆಸಬೇಕಾದರೆ ಯಾವ ರೀತಿ
ಕಾನೂನನ್ನು ಜಾರಿಗೊಳಿಸಬೇಕು ಎಂದು ಗೊತ್ತಿರಲಿಲ್ಲ ಆ ಸಮಯದಲ್ಲಿ ಸಂವಿಧಾನವನ್ನ ರಚನೆ ಮಾಡಿದರು. ಇಂದಿಗೂ ಅವರ ಬರೆದಿರುವ ಸಂವಿಧಾನದಂತೆ ಎಲ್ಲಾ ಕಾನೂನು ನಡೆದುಕೊಂಡು ಬರುತ್ತಿದೆ ಎಂದರು.
ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಸೀಮಿತವಲ್ಲ, ಸರ್ವನಾಯಕನಂತೆ ಪ್ರತಿಯೊಬ್ಬರು ಅವರನ್ನು ಆರಾಧಿಸಬೇಕು. ಇಂದಿನ ಸಿದ್ದಾಂತವನ್ನು ಮೈಗೂಡಿಸಿಕೊಂಡು ಜ್ಞಾನವಂತರಾಗಬೇಕೆಂದು ತಿಳಿಸಿದರು.
ಸಮಾನತೆ ಅನ್ನುವುದು ಕೇವಲ ಒಂದು ಜನಾಂಗಕ್ಕೆ ಅಲ್ಲ, ಯಾರು ಹಿಂದುಳಿದಿದ್ದಾರೆ ಅವರೆಲ್ಲರಿಗೂ ಸಾಮಾಜಿಕ ನ್ಯಾಯ ಸಿಗಬೇಕೆಂದು ಪ್ರತಿಪಾದಿಸಿದರು. ಅಂಬೇಡ್ಕರ್ ಅವರು ಚಿಂತನೆಗಳು ಒಂದು ವರ್ಗ, ಜಾತಿ ,ಧರ್ಮಕ್ಕೆ ಸೀಮಿತವಾದದಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುವ ಎಲ್ಲರಿಗೂ ಅನ್ವಯವಾಗುತ್ತವೆ ಎಂದರು.
ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಗಾಂಧಿ ವೃತ್ತದಲ್ಲಿ ಎರಡು ಕಡೆಯವರು ಅಂಬೇಡ್ಕರ್ ಜಯಂತಿ ಆಚರಣೆಗೆ ವೇದಿಕೆಯನ್ನ ಹಾಕಿ ಸ್ವಲ್ಪ ಸಮಯ ಗೊಂದಲಕ್ಕೆ ಎಡೆಮಾಡಿಕೊಟ್ಟಿತು.
ಪ್ರತಿ ವರ್ಷ ಇಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಂಬೇಡ್ಕರ್ ಜಯಂತಿಯನ್ನ ಈ ಸ್ಥಳದಲ್ಲಿ ಆಚರಣೆ ಮಾಡಿಕೊಂಡು ಬರುತ್ತಾ ಬಂದಿದ್ದಾರೆ.ಅದೇ ಸಲುವಾಗಿ ಮೊದಲಿಗೆ ನಾವು ಒಂದು ದಿನ ಮುಂಚೆ ವೇದಿಕೆಯನ್ನ ಹಾಕಿದ್ದು,ಅದನ್ನ ಗಮನಿಸಿದ ಬಿಜೆಪಿಯವರು ತೊಂದರೆ ನೀಡುವ ಸಲುವಾಗಿ ನಮ್ಮ ವೇದಿಕೆಗೆ ಅಡ್ಡಲಾಗಿ ಅವರು ವೇದಿಕನ್ನ ಹಾಕಿ ಗೊಂದಲ ಮಾಡಿದ್ದಾರೆ.
ನಂತರ ಪೋಲಿಸರಿಗೆ ಮಾಹಿತಿ ನೀಡಿ ವರ್ತೂರು ಪೊಲೀಸ್ ಠಾಣಾ ಸರ್ಕಲ್ ಇನ್ಸ್‌ಪೆಕ್ಟರ್ ಯೋಗಾ ನಂದ ಅವರ ಸಮ್ಮುಖದಲ್ಲಿ ಇಬ್ಬರಿಗೂ ತಿಳುವಳಿಕೆ ಹೇಳಿ ಅಂಬೇಡ್ಕರ್ ಅವರ ಆಚರಣೆಯನ್ನು ಪಕ್ಷ ಭೇದ ಭಾವ ಮರೆತು ಆಚರಿಸುವಂತೆ ಸಲಹೆ ನೀಡಿದರು.ಸರ್ಕಲ್ ಇನ್ಸ್ಪೆಕ್ಟರ್ ಅವರೇ ಅಡ್ಡಲಾಗಿ ನಿರ್ಮಿಸಲಾದ ವೇದಿಕೆಯನ್ನು ಸರಿ ಮಾಡಿದರು. ಎಂದು ವರ್ತೂರು ಸ್ವಾಭಿಮಾನಿ ಬಳಗದ ಅಧ್ಯಕ್ಷ ಕುಪ್ಪಿ ಮಂಜುನಾಥ್ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ಸಿ ಬ್ಲಾಕ್ ಅಧ್ಯಕ್ಷರಾದ ನಾಗರಾಜಯ್ಯ, ಮುನಿರಾಜು,ರವಿಕುಮಾರ್,ಸುನೀಲ್ ಕುಮಾರ್, ರಾಜ್ ಗೋಪಾಲ್,ಇಕ್ಬಾಲ್ ಮೊಹಮದ್,ದೀಪಕ್ ಮತ್ತಿತರರು ಇದ್ದರು.

