Ambedkar Jayanthi: ಡಾ.ಬಿ.ಆರ್.ಅಂಬೇಡ್ಕರ್ ಕೇವಲ ವ್ಯಕ್ತಿಯಲ್ಲ ಪ್ರತಿಯೊಬ್ಬರಿಗೂ ಬಹು ದೊಡ್ಡ ಶಕ್ತಿ :ಅರವಿಂದ ಲಿಂಬಾವಳಿ.

ಸ್ಥಳೀಯ ಸುದ್ದಿ

ಧರ್ಮ ಬಸವನಪುರ

4/14/20251 min read

ಮಹದೇವಪುರ: ಸಮಾನತೆಯ ಸಮಾಜ ನಿರ್ಮಿಸಲು ಶ್ರಮಿಸಿದ ಮಹಾನ್ ಚೇತನ ಡಾ.ಬಿ.ಆರ್.ಅಂಬೇಡ್ಕರ್, ಶತಮಾನಗಳಿಂದ ಶೋಷಣೆಗೊಳಗಾದವರ ಬಾಳಿನ ಬೆಳಕಾದ ಮಹಾ ನಾಯಕ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.

ಅಂಬೇಡ್ಕರ್ ಅವರ 135ನೇ ಜಯಂತಿ ಅಂಗವಾಗಿ ವೈಟ್ ಫೀಲ್ ಅಂಬೇಡ್ಕರ್ ಪುತ್ಥಳಿ ಮತ್ತು ಸಮುದಾಯ ಭವನ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಡಾ. ಬಿ.ಆರ್. ಅಂಬೇಡ್ಕರ್ ರವರು ಭಾರತ ದೇಶಕ್ಕೆ ಸಂವಿಧಾನವನ್ನು ರೂಪಿಸುವುದರ ಮೂಲಕ ಪ್ರತಿ ಸಮುದಾಯಕ್ಕೂ ಹಕ್ಕು ಮತ್ತು ಸ್ವಾತಂತ್ರ್ಯವನ್ನು ನೀಡಿ ಪ್ರಜಾಪ್ರಭುತ್ವದ ವ್ಯವಸ್ಥೆಯ ಮೂಲಕ ಸಮ ಸಮಾಜವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.

ಶೋಷಿತ ಸಮುದಾಯದಲ್ಲಿ ಜನಿಸಿದ ಬಾಬಾಸಾಹೇಬರು ಸಾಮಾಜಿಕ ಅಸಮಾನತೆ, ಜಾತಿ ಪದ್ಧತಿ, ನಿರುದ್ಯೋಗ, ಬಡತನವನ್ನು ಹೋಗಲಾಡಿಸಲು ಬಹಳಷ್ಟು ಶ್ರಮಿಸಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ರವರು ಕೇವಲ ವ್ಯಕ್ತಿಯಲ್ಲ ಪ್ರತಿಯೊಬ್ಬರಿಗೂ ಬಹು ದೊಡ್ಡ ಶಕ್ತಿಯಾಗಿದ್ದಾರೆ. ಅವರು ಕೊಟ್ಟ ಸಂವಿಧಾನ ನಮಗೆಲ್ಲರಿಗೂ ಬಹು ದೊಡ್ಡ ಶಕ್ತಿಯಾಗಿದೆ.

ಇಂಥ ಶ್ರೇಷ್ಠ ವ್ಯಕ್ತಿಯ ಜಯಂತಿ ನಮ್ಮ ಕ್ಷೇತ್ರದಲ್ಲಿ ಸಾವಿರಾರು ಜನ ಸೇರಿ ಆಚರಿಸುತ್ತಿರುವುದು ಮಾದರಿಯ ಕಾರ್ಯಕ್ರಮವಾಗಿದೆ ಎಂದರು.

ಕಾಂಗ್ರೆಸ್ ನವರು ಅಂಬೇಡ್ಕರ್ ಬಗ್ಗೆ ಮಾತನಾಡುತ್ತಾರೆ ಆದರೆ ಅಂಬೇಡ್ಕರ್ ಅವರು ಪಕ್ಷ ಕಟ್ಟಿ ಚುನಾವಣೆಯಲ್ಲಿ ಕಣಕ್ಕಿಳಿದಿದ್ದ ಅಂಬೇಡ್ಕರ್ ಅವರನ್ನು ಸೋಲಿಸಲಾಯಿತು.ಲೋಕಸಭೆಗೆ ಬರದಂತೆ ತಡೆಯಲಾಯಿತು ಎಂದು ದೂರಿದರು.

ಅಂಬೇಡ್ಕರರ ಅಂತ್ಯಸಂಸ್ಕಾರಕ್ಕೆ ದೆಹಲಿಯಲ್ಲಿ ಸ್ಥಳವನ್ನ ಅಂದಿನ ಕಾಂಗ್ರೆಸ್ ಸರ್ಕಾರ ನೀಡಲಿಲ್ಲ ಎಂದು ಕಾಂಗ್ರೆಸ್ ಸರ್ಕಾರ ವಿರುದ್ದ ವಾಗ್ದಾಳಿ ನಡೆಸಿದರು.ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಅಂಬೇಡ್ಕರ್ ಅವರಿಗೆ ಸಲ್ಲಬೇಕಾದ ನಿಜವಾದ ಗೌರವಗಳು ದೊರಕಿದ್ದು ಅದಕ್ಕೆ ಮೂಲ ಕಾರಣ ಪ್ರಧಾನಿ ನರೇಂದ್ರ ಮೋದಿಯವರು ಎಂದು ತಿಳಿಸಿದರು.

ಡಾ. ಅಂಬೇಡ್ಕರ್ ಅವರು ತಮ್ಮ ಇಡೀ ಜೀವನವನ್ನು ಜಾತಿವಾದ, ತಾರತಮ್ಯ ಮತ್ತು ಸಾಮಾಜಿಕ ಅನ್ಯಾಯದ ವಿರುದ್ಧ ಹೋರಾಡುತ್ತಾ ಕಳೆದರು ಮತ್ತು ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳನ್ನು ಒದಗಿಸಲು ಸಂವಿಧಾನಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದರು. ಸಮಾಜದಲ್ಲಿ ಶಿಕ್ಷಣ, ಸಮಾನತೆ ಮತ್ತು ಮಾನವ ಹಕ್ಕುಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಡಾ. ಅಂಬೇಡ್ಕರ್ ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡರು. ಅಂಬೇಡ್ಕರ್ ಅವರ ಆದರ್ಶಗಳು ಮತ್ತು ಆಲೋಚನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮಾನ ಮತ್ತು ನ್ಯಾಯಯುತ ಸಮಾಜದತ್ತ ಸಾಗಬೇಕಿದೆ ಎಂದುತಿಳಿಸಿದರು.

ಅಂಬೇಡ್ಕರ್ ಅವರು ಹುಟ್ಟಿದ, ಲಂಡನ್ ನಲ್ಲಿ ವಾಸ್ತವ್ಯ ಹೂಡಿದ್ದ, ನವದೆಹಲಿಯಲ್ಲಿ ನೆಲೆ ಮಾಡಿದ್ದ, ಸಂವಿಧಾನ ಬರೆದ, ಬೌದ್ಧ ಧರ್ಮಸ್ವೀಕರಿಸಿದ ಮತ್ತು ಅವರ ಅಂತಿಮ ಸಂಸ್ಕಾರ ನಡೆದ ಜಾಗಗಳನ್ನು ನಿರ್ಲಕ್ಷ ಮಾಡಿ ಅಂಬೇಡ್ಕರರ ಜೀವನದ ಕುರುಹು ನಾಶ ಮಾಡಲು ಯತ್ನಿಸಿಲಾಗಿತ್ತು. ಅವುಗಳ ರಕ್ಷಣೆ, ಅಭಿವೃದ್ಧಿಗೂ ಮೋದಿ ಸರ್ಕಾರವೇ ಬರಬೇಕಾಯಿತು. ಈಗ ಅವುಗಳನ್ನು ಯಾತ್ರಾಸ್ಥಳವನ್ನಾಗಿ ಮಾಡಲಾಗಿದೆ ತಿಳಿಸಿದರು.

ಅಂಬೇಡ್ಕರ್ ಅವರ ಪುತ್ಥಳಿಯನ್ನ ಬೆಳ್ಳಿ ರಥದ  ಮೆರವಣಿಗೆ ಜೊತೆಗೆ ಮಹಿಳೆಯರು ಕಳಸವನ್ನ ಹೊತ್ತುಕೊಂಡು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರುಇದೇ ಸಂದರ್ಭದಲ್ಲಿ ಸಮುದಾಯದ ಮುಖಂಡರು, ಹಿರಿಯರನ್ನು ಸನ್ಮಾನಿಸಲಾಯಿತು.

ಸಂದರ್ಭದಲ್ಲಿ ಶಾಸಕರಾದ ಮಂಜುಳಾ ಅರವಿಂದ ಲಿಂಬಾವಳಿ ಗ್ರಾಮಾಂತರ ಅಧ್ಯಕ್ಷಪಿಳ್ಳಪ್ಪ, ಮಂಡಲ ಅಧ್ಯಕ್ಷ ಶ್ರೀಧರ್ ರೆಡ್ಡಿ, ದೊಡ್ಡಗುಬ್ಬಿ ಪಂಚಾಯಿತಿ ಅಧ್ಯಕ್ಷೆ ಮಾಲಾ ಮಾರುತಿಕುಮಾರ್ ಮುಖಂಡರಾದ ಮನೋಹರ ರೆಡ್ಡಿ ಮಾರಪ್ಪ, ವೇಣು, ಬಿದರಹಳ್ಳಿ ರಾಜೇಶ್, ಕೆ.ವಿ.ನಾಗರಾಜ್‌, ಮಹೇಂದ್ರ ಮೋದಿ, ಆದೂರು ಮುನಿರಾಜು ಮತ್ತಿತರರಿದ್ದರು.