ದಲಿತರ ಜಮೀನನ್ನ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಕೆ ಮಾಡಿರುವವರ ವಿರುದ್ಧ ಅಂಬೇಡ್ಕರ್ ಸೇವಾ ಸಮಿತಿ ಹೋರಾಟ.
ಸ್ಥಳೀಯ ಸುದ್ದಿ


ಮಹದೇವಪುರ: ದಲಿತರ ಭೂಮಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಖಬ್ಜ ಮಾಡಿರುವ ಬಲ್ಯಾಡ್ಯರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಬೇಕೆಂದು ಅಂಬೇಡ್ಕರ್ ಸೇವಾ ಸಮಿತಿ ರಾಜ್ಯಾಧ್ಯಕ್ಷ ಕೋಲಾರ ಸಂದೇಶ್ ಅವರು ಆಗ್ರಹಿಸಿದ್ದಾರೆ.
ಬೆಂಗಳೂರು ಪೂರ್ವ ತಾಲ್ಲೂಕು ಸಾದರಮಂಗಲ ಗ್ರಾಮದ ಸರ್ವೇ ನಂ 21/1 ರಲ್ಲಿ 4 ಎಕರೆ 19ಗುಂಟೆ ಸರ್ಕಾರಿ ಹಿಡುವಳಿ ಜಮೀನು ಮೂಲಕ ವೆಂಕಟ ಬಿನ್ ಕುಂಟಹನುಮ ಎಂಬುವರಿಗೆ. ಮಂಜೂರಾಗಿತ್ತು.
ಕಂದಾಯ ಪಾವತಿ ಮಾಡಿಲ್ಲ ಎಂಬ ಕಾರಣದಿಂದ ಈ ಜಮೀನು ಹರಾಜು ಪ್ರಕ್ರಿಯೆ ಮಾರಾಟ ಮಾಡಲಾಗಿದೆ ಎಂದು ನಕಲಿ ದಾಖಲೆ ಸೃಷ್ಟಿಸಿ ನೂರಾರು ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ಕಬಳಿಸಿದ್ದಾರೆ.
ಈ ಸರ್ವೇ ನಂ ಸಂಬಂಧಿಸಿದಂತೆ ಯಾವುದೇ ರೀತಿಯ ಹರಾಜು ಪ್ರಕ್ರಿಯೆ ನಡೆದಿಲ್ಲ ಎಂದು ತಹಶಿಲ್ದಾರರ್ ಕಾರ್ಯಾಲಯ ಸ್ಪಷ್ಟಪಡಿಸಿದೆ. ಕಂದಾಯ ಪಾವತಿ ಮಾಡಿರುವ ದಾಖಲೆಗಳು ಇವೆ. ನಕಲಿ ದಾಖಲೆ ಸೃಷ್ಟಿಸಿ ದಲಿತರ ಭೂಮಿಯನ್ನು ಖಬ್ಜಮಾಡಿರುವ ಜೋನಾಶಾ ನಾಗರಾಜರೆಡ್ಡಿ,ಚಿತ್ರಸುರೇಶ್ ರೆಡ್ಡಿ, ಹಾಗೂ ರಮೇಶ್ ಬಾಬು ಅವರನ್ನು ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು ಎಂದು ಒತ್ತಾಯಿಸಿದರು.
ಹಿಡುವಳಿ ಜಮೀನನ್ನು 1956 ಹಾಗೂ 1957 ರಲ್ಲಿ ಮಂಜೂರಾಗಿರುವ ಜಮೀನನ್ನು ಮೂಲ ಮಾಲೀಕರಾದ ವೆಂಕಟ ಬಿನ್ ಕುಂಟಹನುಮ ಎಂಬುವರಿಗೆ ಖಾತಾ ಹಾಗೂ ಪಹಣಿ ಮಾಡಿಸಿಕೊಡುಂತೆ ಜಿಲ್ಲಾಧಿಕಾರಿಗಳಿಗೆ ಸಂದೇಶ್ ಅವರು ಮನವಿ ಮಾಡಿದರು.