ತೆಲಾಂಗಣದಲ್ಲಿ ಮತ್ತೋರ್ವ ನವವಿವಾಹಿತನ ಹತ್ಯೆ : ಲವರ್ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿಸಿದ ಪಾಪಿ ಪತ್ನಿ.!

ದೇಶ/ವಿದೇಶ

ಧರ್ಮ ಬಸವನಪುರ.

6/24/20251 min read

ತೆಲಾಂಗಣ: ಮೇಘಾಲಯ ಹನಿಮೂನ್ ಕೊಲೆ ಪ್ರಕರಣ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿತ್ತು ಅದು ಮಾಸುವ ಮುನ್ನೆವೇ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಇದೀಗ ನಮ್ಮ ಪಕ್ಕದ ನೆರೆ ರಾಜ್ಯ ತೆಲಂಗಾಣದಲ್ಲೂ ಅದೇ ರೀತಿ ಘಟನೆ ನಡೆದಿದೆ. ಮದುವೆಯಾದ ಕೇವಲ ಒಂದು ತಿಂಗಳಲ್ಲೇ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿರುವ ಘಟನೆ ಗಡ್ವಾಲ್ ಜಿಲ್ಲೆಯಲ್ಲಿ ನಡೆದಿದೆ.

ತೆಲಂಗಾಣದ ಗದ್ವಾಲ್​ನ ರಾಜವೀಧಿನಗರದ 32 ವರ್ಷದ ತೇಜೇಶ್ವರ್ ನಂದ್ಯಾಲ್ ಜಿಲ್ಲೆಯ ಪನ್ಯಂ ಪೊಲೀಸ್ ಠಾಣೆ ವ್ಯಾಪ್ತಿಯ ಸುಗಲಿಮೆಟ್ಟದ ಎಚ್‌ಎನ್‌ಎಸ್‌ಎಸ್ ಕಾಲುವೆಯ ಬಳಿ ಶವವಾಗಿ ಪತ್ತೆಯಾಗಿದ್ದು, ಅವರ ಪತ್ನಿ ಮೇಲೆ ಅನುಮಾನ ಮೂಡಿದೆ.

ಕರ್ನೂಲ್ನ ಐಶ್ವರ್ಯಾ ಮೇ 18 ರಂದು ತೆಲಂಗಾಣದ ಜೋಗುಲಾಂಬ ಗಡ್ವಾಲ್ ಜಿಲ್ಲೆಯ ನಿವಾಸಿ ತೇಜೇಶ್ವರ್ (32) ಅವರನ್ನು ವಿವಾಹವಾಗಿದ್ದರು. ತೇಜೇಶ್ವರ್ ಖಾಸಗಿ ಸರ್ವೇಯರ್ ಆಗಿ ಕೆಲಸ ಮಾಡುತ್ತಿದ್ದರು. ಆರಂಭದಲ್ಲಿ ಮದುವೆಯನ್ನು ಫೆಬ್ರವರಿ 13 ರಂದು ನಿಗದಿಪಡಿಸಲಾಗಿತ್ತು. ಆದರೆ ಮದುವೆಗೆ ಕೇವಲ ಐದು ದಿನಗಳ ಮೊದಲು ಐಶ್ವರ್ಯಾ ನಾಪತ್ತೆಯಾಗಿದ್ದರು,

ಫೆಬ್ರವರಿ 16 ರಂದು ಮನೆಗೆ ಹಿಂದಿರುಗಿದ ಐಶ್ವರ್ಯಾ, ತೇಜೇಶ್ವರ್ ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿ, ತಾನು ಯಾರನ್ನೂ ಪ್ರೀತಿಸುತ್ತಿಲ್ಲ ಮತ್ತು ವರದಕ್ಷಿಣೆ ನೀಡಲು ತನ್ನ ತಾಯಿ ಎದುರಿಸುತ್ತಿರುವ ತೊಂದರೆಯನ್ನು ಸಹಿಸಲಾಗದೆ ತನ್ನ ಫ್ರೆಂಡ್​ ಮನೆಗೆ ಹೋಗಿದ್ದೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಎಂದು ಅಳುತ್ತಾ ಹೇಳಿದಳು. ಐಶ್ವರ್ಯಾಳ ಮಾತುಗಳನ್ನು ನಂಬಿದ ತೇಜೇಶ್ವರ್, ಮನೆಯವರ ಒಪ್ಪಿಗೆ ಇಲ್ಲದೇ ಹೋದರು ಮದುವೆಗೆ ಒಪ್ಪಿಕೊಂಡನು. ಬಳಿಕ ತೇಜೇಶ್ವರ್ ಮತ್ತು ಐಶ್ವರ್ಯಾ ಮೇ 18 ರಂದು ವಿವಾಹವಾದರು.

ಮದುವೆಯಾದ ಒಂದು ತಿಂಗಳೊಳಗೆ ಐಶ್ವರ್ಯಾ ತಿರುಮಲಕ್ಕೆ 2,000 ಕ್ಕೂ ಹೆಚ್ಚು ಫೋನ್ ಕರೆಗಳನ್ನು ಮಾಡಿದ್ದಾಳೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಮದುವೆಯ ನಂತರ ಐಶ್ವರ್ಯಾ, ನಿರಂತರವಾಗಿ ಫೋನ್‌ನಲ್ಲಿ ಮಾತನಾಡುವುದನ್ನು ಗಮನಿಸಿದ ತೇಜೇಶ್ವರ್ ಆಕೆಯನ್ನು ಗದರಿಸಿದನು. ಇದರಿಂದ ದಂಪತಿ ನಡುವೆ ಬಿರುಕು ಮೂಡಿತು. ಇಬ್ಬರು ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಆದರೆ, ಜೂನ್ 17ರಂದು ತೇಜೇಶ್ವರ್ ನಾಪತ್ತೆಯಾಗಿದ್ದರು. ಈ ಸಂಬಂಧ ಪೊಲೀಸರಿಗೆ ದೂರು ಕೂಡ ದಾಖಲಾಗಿತ್ತು. ತನಿಖೆ ನಡೆಯುವಾಗಲೇ ಭಾನುವಾರ ಆಂಧ್ರಪ್ರದೇಶದ ಪನ್ಯಂ ಬಳಿಯ ಸುಗಲಿಮೆಟ್ಟ ಜಮ್ಮುವಿನಲ್ಲಿ ತೇಜೇಶ್ವರ್ ಅವರ ಶವ ಪತ್ತೆಯಾಯಿತು.

ಯೋಜನೆಯಂತೆ, ಜೂನ್ 17 ರಂದು 10 ಎಕರೆ ಭೂಮಿಯನ್ನು ಖರೀದಿಸುವ ನೆಪದಲ್ಲಿ ಕೆಲವು ವ್ಯಕ್ತಿಗಳು ತೇಜೇಶ್ವರ್ ಅವರನ್ನು ಭೇಟಿಯಾಗಿ ಸಮೀಕ್ಷೆ ನಡೆಸುವಂತೆ ಕೇಳಿಕೊಂಡರು. ಅವರು ಆತನನ್ನು ಗಡ್ವಾಲ್ನಿಂದ ಕಾರಿನಲ್ಲಿ ಕರೆದೊಯ್ದರು. ವಾಹನದೊಳಗೆ, ತೇಜೇಶ್ವರ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ಆತನ ಕತ್ತು ಸೀಳಿ, ಪಣ್ಯಂನ ಸುಗಲಿಮೆಟ್ಟು ಬಳಿ ಮೃತದೇಹವನ್ನು ವಿಲೇವಾರಿ ಮಾಡಿದರು. ಬ್ಯಾಂಕ್ ಉದ್ಯೋಗಿ ಪ್ರಸ್ತುತ ತಲೆಮರೆಸಿಕೊಂಡಿದ್ದು, ಪೊಲೀಸರು ಈಗಾಗಲೇ ಐಶ್ವರ್ಯಾಳನ್ನುಬಂಧಿಸಿದ್ದಾರೆ.