ಕರವೇಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ, ಜೂನ್​ 24 ಅರ್ಜಿ ಸಲ್ಲಿಕೆಗೆ ಕೊನೆ ದಿನ

ಸ್ಥಳೀಯ ಸುದ್ದಿ

ರಾಘವೇಂದ್ರ ಹೆಚ್​.ಎ

6/23/20251 min read

ದೊಡ್ಡಬಳ್ಳಾಪುರ: ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆಯಿಂದ 2024-25 ನೇ ಸಾಲಿನ SSLC ಮತ್ತು 2nd PUC ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.

ಸರ್ಕಾರಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳು SSLC ಮತ್ತು 2nd PUC ಯಲ್ಲಿ ಶೇ.85 ಅಂಕಗಳು ಹಾಗೂ ಕನ್ನಡ ಭಾಷಾ ವಿಷಯದಲ್ಲಿ SSLCಯಲ್ಲಿ 125 ಅಂಕಗಳು ಹಾಗೂ ದ್ವಿತೀಯ ಪಿಯುಸಿಯಲ್ಲಿ 100 ಅಂಕಗಳನ್ನು ಗಳಿಸಿರಬೇಕು.

ಖಾಸಗಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ, ದ್ವಿತೀಯ ಪಿ.ಯು.ಸಿಯಲ್ಲಿ ಶೇ.95 ಅಂಕಗಳು, ಕನ್ನಡ ಭಾಷಾ ವಿಷಯದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ 125 ಅಂಕಗಳು ಹಾಗೂ ದ್ವಿತೀಯ ಪಿ.ಯು.ಸಿಯಲ್ಲಿ 100 ಅಂಕಗಳನ್ನು ಗಳಿಸಿರಬೇಕು.

ಅರ್ಹ ವಿದ್ಯಾರ್ಥಿಗಳು ತಮ್ಮಹೆಸರು, ಅಂಕಪಟ್ಟಿ(ಜೆರಾಕ್ಸ್‌ ಪ್ರತಿ), ಇತ್ತೀಚಿನ ಭಾವಚಿತ್ರ, ದೂರವಾಣಿ ಸಂಖ್ಯೆಯೊಂದಿಗೆ ಜೂ.24ರೊಳಗೆ ಸಹ್ಯಾದ್ರಿ ಆಸ್ಪತ್ರೆ, ಫ್ರೆಂಡ್ಸ್ ಹಾಲ್ ಮುಂಭಾಗ, ಪಾಲನಜೋಗಿಹಳ್ಳಿ, ದೊಡ್ಡಬಳ್ಳಾಪುರ ಇಲ್ಲಿಗೆ ತಲುಪಿಸಬೇಕಿದೆ.

ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9663531611, 8073452305 ಸಂಪರ್ಕಿಸಿ ಎಂದು ಕನ್ನಡಿಗರ ಬಣದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಚಂದ್ರಶೇಖರ್​ ತಿಳಿಸಿದ್ದಾರೆ.