ನವದೆಹಲಿಯ ಗಣರಾಜ್ಯೋತ್ಸವ ಪರೇಡ್ ವೀಕ್ಷಣೆಗೆ ದೊಡ್ಡಬಳ್ಳಾಪುರದ ಆಶಾ ಆರ್ ಆಯ್ಕೆ

ಸ್ಥಳೀಯ ಸುದ್ದಿದೇಶ/ವಿದೇಶ

ಧರ್ಮ ಬಸವನಪುರ.

1/20/20261 min read

ಬೆಂ.ಗ್ರಾ.ಜಿಲ್ಲೆ : ನವದೆಹಲಿಯಲ್ಲಿ ನಡೆಯಲಿರುವ 2026ನೇ ಸಾಲಿನ ಗಣರಾಜ್ಯೋತ್ಸವ ಕರ್ತವ್ಯ ಪಥ(ಪರೇಡ್)ದ ವೀಕ್ಷಣೆಗೆ ಸ್ವಸಹಾಯ ಗುಂಪುಗಳ ಸದಸ್ಯರನ್ನು ವಿಶೇಷ ಅತಿಥಿಗಳಾಗಿ ನಿಯೋಜನೆ ಮಾಡುವ ಸಂಬಂಧ ಜಿಲ್ಲೆಯಿಂದ ದೊಡ್ಡಬಳ್ಳಾಪುರದ ಆರೂಡಿ ಗ್ರಾಮಪಂಚಾಯಿತಿಯ ಗರಿಕೇಹಳ್ಳಿ ಗ್ರಾಮದ ಸ್ವಸಹಾಯ ಗುಂಪಿನ ಸದಸ್ಯರಾದ ಆಶಾ ಆರ್ ಅವರನ್ನು ನಿಯೋಜನೆ ಮಾಡಲಾಗಿದೆ ಎಂದು ಜಿ.ಪಂ ಸಿಇಒ ಡಾ.ಕೆ.ಎನ್ ಅನುರಾಧ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.