ಹಲ್ಲಿನ ಸಮಸ್ಯೆಗಳಿಗೆ ಆಯುರ್ವೇದ ಸಹಕಾರಿ: ಡಾ. ಸೋನಿಯಾ ದತ್ತ

ಪ್ರಜಾ ವಿಷೇಶ

ರಾಘವೇಂದ್ರ ಹೆಚ್​​.ಎ

4/21/20251 min read

ಹಲ್ಲಿನ ಸಾಮಾನ್ಯ ಸಮಸ್ಯೆಗಳಲ್ಲಿ ಹುಳುಕು ಹಲ್ಲು ಕೂಡ ಒಂದು. ಹಲ್ಲಿನಲ್ಲಿ ಹುಳುಕು ಆಗಿದೆ ಎಂದರೆ ಸೂಕ್ಷ್ಮಾಣುಜೀವಿಗಳು ಹಲ್ಲಿನಲ್ಲಿ ಸೇರಿಕೊಂಡು ತೂತುಮಾಡಿ ಅದನ್ನು ಹಾಳುಮಾಡುತ್ತವೆ. ಹೀಗೆ ಹುಳುಕು ಹಿಡಿದಿರುವ ಹಲ್ಲಿಗೆ ಹುಳುಕು ಹಲ್ಲು ಎಂದು ಹೇಳುತ್ತಾರೆ. ಮಕ್ಕಳು ದೊಡ್ಡವರು ಎನ್ನದೇ ಇದು ಎಲ್ಲರನ್ನು ಒಂದೇ ರೀತಿಯಾಗಿ ಕಾಡುತ್ತದೆ. ಹಾಗೆಯೇ ಇದು ನೆನ್ನೆ ಮೊನ್ನೆಯ ಸಮಸ್ಯೆಯಲ್ಲ. ಅನಾದಿ ಕಾಲದಿಂದಲೂ ಇದೆ ಎಂದು ದಂತ ವೈದ್ಯಕೀಯ ಶಾಸ್ತ್ರದ ಪ್ರಾದ್ಯಾಪಕಿ ಡಾ.ಸೋನಿಯಾ ದತ್ತ ಅಭಿಪ್ರಾಯಪಟ್ಟಿದ್ದಾರೆ.

ಸಮಸ್ಯೆಗಳು ಸಣ್ಣ ಪ್ರಮಾಣದಲ್ಲಿದ್ದಾಗಲೇ ಎಚ್ಚರಗೊಳ್ಳದಿದ್ದರೇ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಇವೆಲ್ಲವುದಕ್ಕೂ ಆಯುರ್ವೇದ ಗುಣಗಳುಳ್ಳ ಡಾಬರ್​ ರೆಡ್​ ಪೇಸ್ಟ್​ ಪರಿಣಾಮಕಾರಿಯಾಗಿ ಕೆಲಸಮಾಡುತ್ತದೆ ಎಂದಿದ್ದಾರೆ.

ಹುಳುಕು ಸಮಸ್ಯೆಗಳಿಗೆ ಪ್ರಮುಖ ಕಾರಣಗಳು:

ಹಲ್ಲುಗಳ ಮೇಲೆ ರೂಪುಗೊಳ್ಳುವ ಬ್ಯಾಕ್ಟೀರಿಯಾದ ಜಿಗುಟು ಪದರದಿಂದ ಹಲ್ಲಿನಲ್ಲಿ ರಂದ್ರಗಳು ಸೃಷ್ಟಿಯಾಗುತ್ತದೆ. ಇವು ಸಕ್ಕರೆಯಂಥ ಸಿಹಿಯಾದ ಪದಾರ್ಥಗಳ ಸೇವನೆಯಿಂದ ಮತ್ತಷ್ಟು ಹೆಚ್ಚಾಗುತ್ತದೆ. ಇವು ಹಲ್ಲುಗಳ ಮೇಲಿನ ಕವಚವನ್ನು ಸವೆಯುವಂತ ಆ್ಯಸಿಡ್​ ಉತ್ಪತ್ತಿ ಮಾಡುತ್ತದೆ. ಸರಿಯಾದ ವಿಧಾನದಲ್ಲಿ ಹಲ್ಲುಜ್ಜದಿದ್ದರೂ ಕೂಡ ಹಲ್ಲಿನಲ್ಲಿ ರಂದ್ರಗಳು ಸೃಷ್ಟಿಯಾಗುತ್ತದೆ ಒಟ್ಟಾರೆಯಾಗಿ ಹೇಳುವುದಾರರೇ ಹುಳುಕು ಹಲ್ಲು ಹೆಚ್ಚಾಗಲು ಪ್ರಮುಖ ಕಾರಣವೆಂದರೇ ಸಕ್ಕರೆ, ಸಕ್ಕರೆಯಿಂದ ತಯಾರಿಸಿದ ಸಿಹಿ ಪದಾರ್ಥಗಳು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದೇ ಆಗಿದೆ. ​

ಹಲ್ಲಿನ ಉಳುಕು ತಡೆಗಟ್ಟುವಲ್ಲಿ ಆಯುರ್ವೇ ಪಾತ್ರ:

ಹಲ್ಲುಗಳ ರಕ್ಷಣೆಗೆ ನೈಸರ್ಗಿಕವಾಗಿ ಲಭ್ಯವಿರುವ ಲವಂಗ, ಬೇವು, ಶುಂಠಿ ಯಂತ ಪದಾರ್ಥಗಳು ಸಹಕಾರಿಯಾಗುತ್ತದೆ. ಬಾಯಿಯಲ್ಲಿನ ದುರ್ವಾಸನೆ, ಬ್ಯಾಕ್ಟೀರಿಯಾಗಳನ್ನು ತಡೆಗಟ್ಟಲು, ದಂತಕ್ಷಯ ತಡೆಯಲು, ಒಸಡುಗಳ ಆರೋಗ್ಯ ಕಾಪಾಡಲು ಕೂಡ ಇವು ಸಹಕಾರಿ. ಇಂಥ ಹಲವು ಔಷಧಿಯ ಗುಣಗಳು ಈ ಡಾಬರ್​ ರೆಡ್​ ಪೇಸ್ಟ್​ನಲ್ಲಿ ಲಭ್ಯವಿದೆ. ಇದು ಇಂಡಿಯನ್​ ಡೆಂಟಲ್​ ಅಸೋಸಿಯೇಷನ್​ ನಿಂದ ಪ್ರಾಮಾಣಿಕರಿಸಿದೆ.

ಹಲ್ಲುಗಳ ಕ್ಯಾವಿಟಿ ತಡೆಗಟ್ಟಲು ಕೆಲವು ಟಿಪ್ಸ್​ಗಳು:

ಸರಳ ವಿಧಾನದಲ್ಲಿ ಹಲ್ಲುಗಳ ರಕ್ಷಣೆ ಮಾಡಬಹುದು,

1. ದಿನನಿತ್ಯ ಎರಡು ಬಾರಿ ವೈದ್ಯರು ಸೂಚಿಸಿದ ಪೇಸ್ಟ್​ ಮೂಲಕ ಬ್ರಷ್​ ಮಾಡಬೇಕು, ಬೆಳಿಗ್ಗೆ ಎದ್ದಾಗ ಮತ್ತು ರಾತ್ರಿ ಮಲಗುವ ಮುನ್ನ ಹಲ್ಲನ್ನು ಚೆನ್ನಾಗಿ ಉಜ್ಜಿ ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಹುಳುಕು ಹಲ್ಲಿನಂತ ಸಮಸ್ಯೆಗಳನ್ನು ತಡೆಗಟ್ಟಬಹುದು.

2. ಆಧುನಿಕ ರೀತಿಯಲ್ಲಿ ಹಲ್ಲುಗಳನ್ನು ಶುಚಿಗೊಳಿಸಿಕೊಳ್ಳುವ ವಿಧಾನವನ್ನು ಅರಿತಿರಬೇಕು,

3. ಸಿಹಿ ಪದಾರ್ಥಗಳ ಬಳಕೆ ಕಡಿಮೆ ಮಾಡುವುದು.

4. ಸಮಸ್ಯೆಗಳು ಕಂಡುಬಂದ ತಕ್ಷಣ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯುವುದು.

5. ಮೌತ್​ ವಾಷ್​ಗಳನ್ನು ಬಳಸುವುದರಿಂದ ಬಾಯಿಯಲ್ಲಿ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯಬಹುದು.

6. ಸಕ್ಕರೆ ಇಲ್ಲದ ಚೀವಿಂಗ್​ ಗಮ್​ ಅಗೆಯುವುದರಿಂದ ಬಾಯಿಯಲ್ಲಿ ಲಾಲಾರಸ ಉತ್ಪಾದನೆ ಹೆಚ್ಚಿಸಬಹುದು.

ಹೀಗೆ ಹಲವು ಸುಲಭ ವಿಧಾನಗಳಿಂದ ಮಕ್ಕಳು, ಮಹಿಳೆಯರು, ವೃದ್ದರು ಸೇರಿದಂತೆ ಎಲ್ಲರೂ ಹಲ್ಲುಗಳ ರಕ್ಷಣೆ ಮಾಡಿಕೊಳ್ಳಬಹುದು.