ಆರೋಗ್ಯಕ್ಕೆ ಇಂಗ್ಲಿಷ್ ಮೆಡಿಸಿನ್ ಗಿಂತ ಆಯುರ್ವೇದವೇ ಉತ್ತಮ.
ಸ್ಥಳೀಯ ಸುದ್ದಿ


ಕೆ.ಆರ್ ಪುರ: ಆಯುರ್ವೇದ ವೈದ್ಯಕೀಯ ವೃತ್ತಿ ಪುರಾತನ ಕಾಲದಿಂದಲೂ ಪ್ರಸಿದ್ದಿ ಪಡೆದಿದೆ ಹಾಗೂ ಇಂದಿಗೂ ಜೀವಂತವಾಗಿದೆ ಎಂದು ಕೆ.ಆರ್. ಪುರ ವಲಯದ ಜಿಬಿಎ ಜಂಟಿ ಆಯುಕ್ತರಾದ ಡಾ ಸುಧಾ ಸ್ವಪ್ನ ತಿಳಿದಿದ್ದಾರೆ.
ಕೆ.ಆರ್ ಪುರದ ಧನ್ವಂತ್ರಿ ಬಡಾವಣೆಯಲ್ಲಿ ನೂತನವಾಗಿ ಆರಂಭವಾದ ಶ್ರೀ ಕೃಷ್ಣ ಆಯುರ್ವೇದಿಕ್ ಕ್ಲೀನಿಕ್ ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಪುರಾತನ ಪದ್ಧತಿಯಂತೆ ನೈಸರ್ಗಿಕ ಗಿಡ ಮೂಲಿಕೆ ಔಷಧಗಳ ಮೂಲಕ ಆಯುಷ್ ಆಸ್ಪತ್ರೆಗಳು ಚಿಕಿತ್ಸೆ ನೀಡುತ್ತಿವೆ.
ವೇಗದ ಬದುಕಿನಲ್ಲಿ ನಾನಾ ರೋಗಗಳಿಗೆ ತುತ್ತಾಗುವ ಭಯದಲ್ಲಿ ಇಂಗ್ಲಿಷ್ ಮೆಡಿಸಿನ್ ಬಿಟ್ಟು ಜನರು ಆಯುರ್ವೇದ ಚಿಕಿತ್ಸೆಗೆ ಮುಂದಾಗಿದ್ದು, ಆರೋಗ್ಯಕ್ಕೆ ಇಂಗ್ಲಿಷ್ ಮೆಡಿಸಿನ್ ಗಿಂತ ಆಯುರ್ವೇದವೇ ಉತ್ತಮವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಆಯುರ್ವೇದವು ಕೇವಲ ರೋಗವನ್ನು ಗುಣಪಡಿಸುವುದಲ್ಲ, ಬದಲಿಗೆ ರೋಗ ಬಾರದಂತೆ ತಡೆಯುವ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕಡೆಗೆ ಗಮನ ಹರಿಸುತ್ತದೆ ಎಂದು ತಿಳಿಸಿದರು.
ಮಾಜಿ ಸಚಿವ ಎಂಟಿಬಿ ನಾಗರಾಜ್ ಶ್ರೀ ಕೃಷ್ಣ ಕ್ಲೀನಿಕ್ ಉದ್ಘಾಟಿಸಿ ಶುಭ ಕೋರಿ, ಡಾ. ಆನಂದ್ ಕೃಷ್ಣ ಅವರು 30 ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಇವರ ಸೇವೆ ಇನ್ನು ಉತ್ತಮವಾಗಿರಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರಾದ ಡಾ. ಆನಂದ್ ಕೃಷ್ಣ, ರಾಮಕೃಷ್ಣ ಸಾಧನಾಕೇಂದ್ರದ ಚಂದ್ರೇಶಾನಂದ ಸ್ವಾಮಿ, ಡಾ ಸಾಂಭಶಿವ ಮುಂತಾದವರಿದ್ದರು.