ಬಾಗಲಕೋಟೆ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಲೋಕೇಶ್ವರ ಮಹಾರಾಜ ಸ್ವಾಮೀಜಿ ಅರೆಸ್ಟ್

ಜಿಲ್ಲಾ ಸುದ್ದಿರಾಜ್ಯ

ಧರ್ಮ ಬಸವನಪುರ

5/24/20251 min read

ಬಾಗಲಕೋಟೆ: ರಾಯಬಾಗ ತಾಲೂಕಿನ ಮೇಖಳಿಯ ರಾಮಮಂದಿರ ಲೋಕೇಶ್ವರ ಮಹಾರಾಜ ಸ್ವಾಮೀಜಿಯಿಂದ 17 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಸ್ವಾಮೀಜಿಯನ್ನ ಬಂಧಿಸಲಾಗಿದೆ.

ರಾಮಮಂದಿರ ಮಠದ ಲೋಕೇಶ್ವರ ಮಹಾರಾಜ ಸ್ವಾಮೀಜಿ ವಿರುದ್ಧ ಪೊಲೀಸರು ಪೋಕ್ಸೋ ಕೇಸ್ ದಾಖಲಿಸಿಕೊಂಡು ಬಂಧಿಸಿ,ಬೆಳಗಾವಿಯ ಮೂಡಲಗಿ ಪೊಲೀಸ್ ಠಾಣೆಗೆ ಪ್ರಕರಣ ಹಸ್ತಾಂತರ ಮಾಡಿದ್ದಾರೆ. ಆರೋಪಿ ಕಾಮುಕ ಸ್ವಾಮಿಯನ್ನ ವಶಕ್ಕೆ ಪಡೆದು ಮೂಡಲಗಿ ಪೊಲೀಸರು ಜೈಲಿಗಟ್ಟಿದ್ದಾರೆ.

ಬಾಲಕಿಯನ್ನ ಮನೆಗೆ ಕರೆದುಕೊಂಡು ಹೋಗಿ ಬಿಟ್ಟುಬರುವುದಾಗಿ ಹೇಳಿ ಮೇ 13 ಮತ್ತು 14 ರಂದು ಎರಡು ದಿನಗಳ ಕಾಲ ರಾಯಚೂರು ಬಾಗಲಕೋಟೆ ಸುತ್ತಮುತ್ತ ಬಾಲಕಿಯನ್ನ ಸುತ್ತಾಡಿಸಿ, ಬಾಲಕಿಯನ್ನು ಲಾಡ್ಜ್ ಗೆ ಕರೆದೊಯ್ದು ಅತ್ಯಾಚಾರ ಎಸಗಿ ನಂತರ ಬಾಗಲಕೋಟೆಯ ಮಹಾಲಿಂಗಪುರ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಲಾಗಿದೆ.ಯಾರ ಬಳಿಯಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ‌.

ಈ ಹಿಂದೆಯೂ ಮಠದಲ್ಲಿ ಸಾಕಷ್ಟು ಕಾನೂನು ಬಾಹಿರ ಚಟುವಟಿಕೆ ಮಾಡುತ್ತಿದ್ದ ಆರೋಪ ಕೂಡ ಕೇಳಿಬರುತ್ತಿದೆ. ಕೆಲವು ವರ್ಷಗಳ ಹಿಂದೆ ಗ್ರಾಮಸ್ಥರು ಸ್ವಾಮೀಜಿಗೆ ಧರ್ಮದೇಟು ನೀಡಿ ಬುದ್ದಿವಾದ ಹೇಳಿದ್ದರು.ಮತ್ತೆ ಈಗ ಅತ್ಯಾಚಾರ ಆರೋಪ ಹಿನಲ್ಲೆ ಸ್ವಾಮೀಜಿಯನ್ನು ವಿರುದ್ಧ ಜನ ತಿರುಗುಬಿದ್ದಿದ್ದಾರೆ.