ಬೈರತಿ ಬಸವರಾಜ್ ಜೈಲಿನಿಂದ ಬಿಡುಗಡೆ.ಕ್ಷೇತ್ರದಲ್ಲಿ ಕಾರ್ಯಕರ್ತರ ಸಂಭ್ರಮ
ಸ್ಥಳೀಯ ಸುದ್ದಿ


ಕೆ.ಆರ್.ಪುರ: ಕ್ಷೇತ್ರದ ಶಾಸಕ ಬೈರತಿ ಬಸವರಾಜ್ ಅವರಿಗೆ ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಜಾಮೀನು ದೊರೆತ ಹಿನ್ನೆಲೆಯಲ್ಲಿ ಕ್ಷೇತ್ರದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕೆ.ಆರ್ ಪುರದಲ್ಲಿ ಶ್ರೀ ಕಟ್ಟೆ ವಿನಾಯಕ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ 101 ಈಡುಗಾಯಿ ಒಡೆದು, ಸಿಹಿ ಹಂಚಿದರು.
ನಂತರ ತಮ್ಮ ನೆಚ್ಚಿನ ನಾಯಕನ ಬಿಡುಗಡೆಗಾಗಿ ಜೈಲಿನ ಗೇಟ್ ಬಳಿ ನೂರಾರು ಬೆಂಬಲಿಗರು ಭೇಟಿ ನೀಡಿ ಅವರನ್ನು ಸ್ವಾಗತಿಸಿದರು. ನಗರ ಪಾಲಿಕೆ ಮಾಜಿ ಸದಸ್ಯ ಆಂತೋಣಿಸ್ವಾಮಿ, ಮುಖಂಡರಾದ ಕೆ.ಹೇಮಂತ್, ಶಿವಪ್ಪ, ಗಿರೀಶ್, ಶಮಂತ್ ,ಜೆಸಿಬಿ ಆಂತೋಣಿ, ಮರಿರಾಜ್, ಕೆ.ಪಿ.ಕೃಷ್ಣ,ಎಲ್.ಐ.ಸಿ.ವೆಂಕಟೇಶ್ ಹಾಜರಿದ್ದರು.