ಬಮೂಲ್ ಚುನಾವಣೆ ಶಾಂತಿಯುತ ಮುಕ್ತಾಯ: ದೊಡ್ಡಬಳ್ಳಾಪುರ ಫಲಿತಾಂಶಕ್ಕೆ ಕೋರ್ಟ್ ತಡೆ

ಸ್ಥಳೀಯ ಸುದ್ದಿ

Raghavendra H A

5/25/20251 min read

ದೊಡ್ಡಬಳ್ಳಾಪುರ: ತಾಲೂಕಿನಾದ್ಯಂತ ತೀವ್ರ ಕುತುಹಲ ಕೆರಳಿಸಿದ್ದ (ಬಮುಲ) ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯು ಇಂದು ಶಾಂತಿಯುತವಾಗಿ ಮುಕ್ತಾಯವಾಗಿದ್ದು, ಸಜೆ ಫಲಿತಾಂಶದ ನಿರೀಕ್ಷೆಯಲ್ಲಿದ್ದವರಿಗೆ ಭಾರಿ ನಿರಾಸೆಯಾಗಿದೆ.

ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹುಸ್ಕೂರು ಆನಂದ್ ರವರು ತನ್ನ ಸ್ಪರ್ಧೆಯ ಅನರ್ಹತೆ ಪ್ರಶ್ನಸಿ ಹೈಕೋರ್ಟ್ ಮೊರೆ ಹೋಗಿ ಮಧ್ಯಂತರ ಆದೇಶ ಪಡೆದು ಬಿಜೆಪಿ ಅಭ್ಯರ್ಥಿ ಬಿ.ಸಿ ಆನಂದ್​ ವಿರುದ್ದ ಕಣಕ್ಕಿಳಿದಿದ್ದರು. ಇವರಿಗೆ ಕಾಂಗ್ರೆಸ್​​ ಬೇಷರತ್ ಬೆಂಬಲ ಸೂಚಿಸಿತ್ತು ಈ ಬೆಳವಣಿಗೆಯೂ ತಾಲೂಕಿನಾದ್ಯಂತ ತೀವ್ರ ಕುತೂಹಲ  ಕೆರಳಿಸಿತ್ತು. ಸದ್ಯ  ಪ್ರಕರಣದ ತೀರ್ಪು ಬರುವವರೆಗೂ ಎಣಿಕೆಗೆ ಕೋರ್ಟ್ ತಡೆಯಾಜ್ಞೆ ನೀಡಿದೆ.

ಇಂದು ಸಂಜೆ ವೇಳೆಗೆ ಮತದಾನ ಮುಗಿದು ಫಲಿತಾಂಶ ಹೊರ ಬೀಳುವ ಸಮಯಕ್ಕೆ ನ್ಯಾಯಾಲಯವು ದೊಡ್ಡಬಳ್ಳಾಪುರ ಮತ ಎಣಿಕೆ ಕ್ಷೇತ್ರದ ಫಲಿತಾಂಶ ಪ್ರಕಟಕ್ಕೆ ತಡೆ ನೀಡಿದ್ದು ಜೂನ್ 5ರಂದು ಈ ಸಂಬಂಧ ನ್ಯಾಯಲಯದಲ್ಲಿ ವಿಚಾರಣೆ ನಡೆಯಲಿದೆ. ವಿಚಾರಣೆ ಬಳಿಕ ನ್ಯಾಯಾಲಯದ ಸೂಚನೆ ಮೇರೆಗೆ ಮತ ಎಣಿಕೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ಮಾಹಿತಿ ನೀಡಿದೆ.