ಬಮುಲ್ ಚುನಾವಣೆ : ಜೆಡಿಎಸ್ ಮತ್ತು ಕಾಂಗ್ರೆಸ್ ಮತದಾರರ ಬೆಂಬಲ ನನಗಿದೆ, ಗೆಲ್ಲುವುದು ಖಚಿತ- ಹುಸ್ಕೂರ್ ಆನಂದ್
ಜಿಲ್ಲಾ ಸುದ್ದಿ

ಮೇ 5ರಂದು ಭಾನುವಾರ ಬಮುಲ್ ( ಬೆಂಗಳೂರು ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ )ದ ನಿದೇರ್ಶಕ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ದೊಡ್ಡಬಳ್ಳಾಪುರ ತಾಲ್ಲೂಕಿನ ಜೆಡಿಎಸ್, ಕಾಂಗ್ರೆಸ್ ಪಕ್ಷದಿಂದ ಶೇ.100% ಸೇರಿದಂತೆ ಬಿಜೆಪಿಯ ಸುಮಾರು 50% ಮತದಾರರು ನನಗೆ ಮತದಾನ ಮಾಡಲು ಒಮ್ಮತ ಸೂಚಿಸಿದ್ದಾರೆ. ಈ ಹಿಂದೆ ಬಮುಲ್ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಬಿ.ಸಿ ಆನಂದ್ ಅವರು ವಾಮ ಮಾರ್ಗದಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ಸದ್ಯ ನಾನು ಬಮುಲ್ ಚುನಾವಣೆಯಲ್ಲಿ ಜಯಗಳಿಸಿದರೆ ದೊಡ್ಡಬಳ್ಳಾಪುರವನ್ನು ರಾಜ್ಯಕ್ಕೆ ಮಾದರಿಯನ್ನಾಗಿ ಮಾಡಿ ತೋರಿಸುವೆ - ಹುಸ್ಕೂರ್ ಆನಂದ್ (ಅಭ್ಯರ್ಥಿ)

