ಕಣ್ಣೂರಿನಲ್ಲಿ ಬನಾ ಇಕೋ ವರ್ಕ್ಸ್ ವತಿಯಿಂದ ಪ್ರಾಣಿಗಳ ತ್ಯಾಜ್ಯ ಸಂಸ್ಕರಣಾ ಘಟಕ ಉದ್ಘಾಟನೆ.

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

8/28/20251 min read

ಮಹದೇವಪುರ: .ವೈಜ್ಞಾನಿಕವಾಗಿ ಪ್ರಾಣಿ ತ್ಯಾಜ್ಯವನ್ನು ಸಂಸ್ಕರಣೆ ಮಾಡಿ ನಾಯಿಗಳಿಗೆ ಹಾಗೂ ಮೀನುಗಳಿಗೆ ಆಹಾರ ಉತ್ಪಾದಿಸುವ ನಿಟ್ಟಿನಲ್ಲಿ ಬನಾ ಇಕೋ ವರ್ಕ್ಸ ಘಟಕ ಕಾರ್ಯನಿರ್ವಹಿಸಲಿದೆ ಎಂದು ಮಾಜಿ ಸಚಿವ ಹಾಗೂ ಮಹದೇವಪುರ ಟಾಸ್ಕ್ ಫೋರ್ಸ್ ಅದ್ಯಕ್ಷ ಅರವಿಂದ ಲಿಂಬಾವಳಿ ತಿಳಿಸಿದರು.

ಕ್ಷೇತ್ರದ ಬಿದರಹಳ್ಳಿ ಹೋಬಳಿ ಕಣ್ಣೂರಿನಲ್ಲಿ ಬನಾ ಇಕೋ ವರ್ಕ್ಸ್ ವತಿಯಿಂದ ಪ್ರಾಣಿಗಳ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಶಾಸಕರಾದ ಮಂಜುಳಾ ಅರವಿಂದ ಲಿಂಬಾವಳಿ ಅವರೊಂದಿಗೆ ಉದ್ಘಾಟಿಸಿ ಮಾತನಾಡಿದರು.

ಪಿಪಿಪಿ ಮಾದರಿಯಲ್ಲಿ ಪ್ರಾಣಿ ತ್ಯಾಜ್ಯ ಸಂಸ್ಕರಣಾ ಘಟಕದ ಸ್ಥಾಪನೆ ಮಾಡಿದ್ದಾರೆ. ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೋಳಿ, ಕುರಿಗಳ ತ್ಯಾಜ್ಯ ವಸ್ತುಗಳನ್ನು ಸಂಗ್ರಹ ಮಾಡಿ, ಅವುಗಳನ್ನು ಸಂಸ್ಕರಣೆ ಮಾಡಿ, ಅದನ್ನು ನಾಯಿಗಳಿಗೆ ಮತ್ತು ಮೀನುಗಳಿಗೆ ಆಹಾರ ಉತ್ಪಾದಿಸುವ ನಿಟ್ಟಿನಲ್ಲಿ ಈ ಘಟಕ ಕಾರ್ಯ ನಿರ್ವಹಿಸಲಿದೆ. ನಮ್ಮೆಲ್ಲರ ಸಹಕಾರದಿಂದ ಇವರು ತಮ್ಮ ಸ್ವಂತ ಖರ್ಚಿನಲ್ಲಿ ಈ ಘಟಕವನ್ನು ನಿರ್ಮಿಸಿದ್ದು, ಇದನ್ನು ಸರಕಾರ ಬೆಂಬಲಿಸಿ ಪ್ರೋತ್ಸಾಹಿಸಬೇಕು ತಿಳಿಸಿದರು.

ಅಭಿವೃದ್ಧಿ ಯಲ್ಲಿ ರಾಜಕಾರಣ ಬೇಡ ಜನರ ದಿಕ್ಕುತಪ್ಪಿಸುವ ಕೆಲಸ ಕೆಲವರು ಮಾಡುತ್ತಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಅಭಿವೃದ್ಧಿಗೆ ಅಡ್ಡಿಮಾಡಿದಂತಾಗುತ್ತದೆ. ವೈಜ್ಞಾನಿಕವಾಗಿ ಪ್ರಾಣಿ ತ್ಯಾಜ್ಯಗಳನ್ನು ಸಂಸ್ಕರಣೆ ಮಾಡಿ ನಾಯಿಗಳಿಗೆ ಆಹಾರ ಉತ್ಪಾದಿಸುವ ನಿಟ್ಟಿನಲ್ಲಿ ಈ ಘಟಕ ಕಾರ್ಯನಿರ್ವಹಿಸಲಿದ್ದು ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು

ಮಿಟಗಾನಹಳ್ಳಿಯಲ್ಲಿ ಕಸ ಹಾಕುವುದನ್ನು ಸರಕಾರ ಕೂಡಲೇ ಶಾಶ್ವತವಾಗಿ ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಕಸ ಹಾಕುವುದನ್ನು ಬೇರೆಡೆ ಸ್ಥಳಾಂತರಿಸಿ ವೈಜ್ಞಾನಿಕ ಕವಾಗಿ ಕಸವನ್ನು ಹಾಕಬೇಕು, ಒಣಕಸ, ಹಸಿಕಸ, ಪ್ಲಾಸ್ಟಿಕ್, ಪ್ರಾಣಿತ್ಯಾಜ್ಯ ಎಲ್ಲವನ್ನು ಬೇರ್ಪಡಿಸಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಹಾಕಬೇಕಿದೆ ಎಂದು ಹೇಳಿದರು.

ಕಸದ ಸಮಸ್ಯೆಗಳ ಇತ್ಯಾರ್ಥಕ್ಕಾಗಿ ಈಗಾಗಲೇ ಆನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಬೆಂಗಳೂರು ನಗರದಲ್ಲಿ ಜನಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಇದರಿಂದ ಟ್ರಾಫಿಕ್ ಸಮಸ್ಯೆ, ಮೂಲಭೂತ ಸಮಸ್ಯೆ ಸೇರಿದಂತೆ ನಗರೀಕರಣ ಹೆಚ್ಚಾದಂತೆ ಈ ರೀತಿಯ ಅನೇಕ ಸಮಸ್ಯೆಗಳು ಜಾಸ್ತಿಯಾಗುತ್ತಲೇ ಇದೆ ಎಂದು ಹೇಳಿದರು.

ಕಸದ ಸಮಸ್ಯೆಯನ್ನು ಬೇರೆ ನಗರಗಳಲ್ಲಿ ಮತ್ತು ದೇಶಗಳಲ್ಲಿ ಯಶಸ್ವಿಯಾಗಿ ಮಾಡುತ್ತಿದ್ದಾರೆ ಆದರೆ ನಮ್ಮ ಮಹಾನಗರದಲ್ಲಿ ಯಶಸ್ವಿ ಆಗಿಲ್ಲ.ಯಾವುದೇ ಸ್ಥಳದಲ್ಲಿ ಕಸ ವಿಲೇವಾರಿ ಮಾಡುವಾಗ ಉತ್ತಮ ಗುಣಮಟ್ಟದ ತಂತ್ರಜ್ಞಾನ ಬಳಸಿ ಯಶಸ್ವಿಯಾಗಿ ಮಾಡಬೇಕು ಎಂದು ಸಲಹೆ ನೀಡುತ್ತೇನೆ ಎಂದರು.

ಈ ಭಾಗದ ಜನರಿಗೆ ಏನು ತೊಂದರೆ ಆಗಿದೆ ಮತ್ತು ನೀರು ಕಲುಷಿತ ಆಗಿದೆ, ಕೆರೆಗಳು ಹಾಳಾಗಿದೆ ರಸ್ತೆಗಳು ಹಾಳಾಗಿದೆ ಇದಕ್ಕೆಲ್ಲಾ ಬಿಬಿಎಂಪಿ ಪೆನಾಲ್ಟಿ ಟ್ಯಾಕ್ಸ್ ಅಂತ ಕೊಡಬೇಕು ಈಸಮಸ್ಯೆಗಳನ್ನ ಪರಿಹರಿಸಲು ಪೆನಾಲ್ಟಿ ಟ್ಯಾಕ್ಸ್ ಕೊಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದರು.

ಪ್ರಾಣಿಗಳ ತ್ಯಾಜ್ಯ ಸಂಸ್ಕರಣ ಘಟಕ ಅಧಿಕೃತವಾಗಿದೆ, ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಎಲ್ಲಾ ರೀತಿಯ ಅನುಮತಿ ಪಡೆದು ಪ್ರಾರಂಭಿಸಲಾಗಿದೆ. ಪ್ರತಿ ಗ್ರಾ.ಪಂ ಮೂರು ಜನಕ್ಕೆ ಉದ್ಯೋಗ ಸಿಗಲಿದೆ. ಮಾಂಸದ ಅಂಗಡಿ ಮಾಲೀಕರಿಗೆ ಮಾಂಸ ತ್ಯಾಜ್ಯ ಶೇಖರಣೆ ಮಾಡಲು ತರಬೇತಿ ನೀಡಲಾಗುತ್ತಿದೆ. ಪ್ರತಿ ದಿನ ಎರಡು ಬಾರಿ ತ್ಯಾಜ್ಯವನ್ನು ಸಂಗ್ರಹಿಸಲಾಗುವುದು.ಅತ್ಯಾಧುನಿಕ ಯಂತ್ರಗಳಿಂದ ಸಂಸ್ಕರಿಸಲಾಗುತ್ತದೆ ಇದ್ದರಿಂದ ಪರಿಸರಕ್ಕೆ ಹಾನಿಯಾಗುವುದಿಲ್ಲ ಎಂದು ಘಟಕದ ಆಡಳಿತ ನಿರ್ದೇಶಕ ಅಭಿಷೇಕ್ ಗೌಡ ತಿಳಿಸಿದರು.

ಮೊದಲಿಗೆ ನಾವು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರಾಣಿಗಳ ತ್ಯಾಜ್ಯವನ್ನ ತಂದು ಸಂಸ್ಕರಣೆ ಮಾಡಿ ನಾಯಿಗಳಿಗಳಿಗೆ ಮತ್ತು ಮೀನುಗಳಿಗೆ ಆಹಾರವನ್ನ ತಯಾರಿಸಲಾಗುತ್ತದೆ ಎಂದರು.

ಕ್ಷೇತ್ರದ ಶಾಸಕರಾದ ಮಂಜುಳಾ ಅರವಿಂದ ಲಿಂಬಾವಳಿ, ಬಿಬಿಎಂಪಿ ನಿವೃತ್ತ ಮುಖ್ಯ ಆಯುಕ್ತರಾದ ಮಂಜುನಾಥ್ ಪ್ರಸಾದ್, ಕಣ್ಣೂರು ಗ್ರಾಪಂ ಅಧ್ಯಕ್ಷರಾದ ಅಶೋಕ್ ಎಸ್., ಬನಾ ಇಕೋ ವರ್ಕ್ ಆಡಳಿತ ನಿರ್ದೇಶಕರಾದ ಅಭಿಷೇಕ್, ಬಿದರಹಳ್ಳಿ ಪಂಚಾಯಿತಿ ಉಸ್ತುವರಿ ಹಾಗೂ ದೊಡ್ಡಗುಬ್ಬಿ ಪಂಚಾಯಿತಿ ಮಾಜಿ ಅಧ್ಯಕ್ಷ ಮಾರುತಿ, ಮಹದೇವಪುರ ಟಾಸ್ಕ್ ಫೋರ್ಸ್ ಸಂಚಾಲಕರಾದ ಲಿಂಗರಾಜ್ ಅರಸ್, ಧನಂಜಯ್, ಮಹೇಶ್. ನಂಜುಂಡ ಮತ್ತಿತರರಿದ್ದರು.