ಕೆಂಪೇಗೌಡರ ದೂರದೃಷ್ಟಿಗೆ ಬೆಂಗಳೂರು ನಿದರ್ಶನ: ಶಾಸಕ ಭೈರತಿ ಬಸವರಾಜ.

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

6/28/20251 min read

ಕೆ.ಆರ್.ಪುರ: ನಾಡಪ್ರಭು ಕೆಂಪೇಗೌಡರು ಭವಿಷ್ಯದ ದೂರದೃಷ್ಟಿ ಯಿಂದ ನಿರ್ಮಿಸಿದ ಬೆಂಗಳೂರು ಪ್ರಸ್ತುತ ಇಡೀ ವಿಶ್ವದ ಜನರನ್ನು ತನ್ನತ್ತ ಸೆಳೆಯುತ್ತಿದೆ. ಇದು ಅವರ ದೂರದೃಷ್ಟಿಗೆ ನಿದರ್ಶನ ಎಂದು ಶಾಸಕ ಬಿ.ಎ. ಬಸವರಾಜ ಅವರು ತಿಳಿಸಿದರು.

ಕ್ಷೇತ್ರದ ವಿಜಿನಾಪುರದಲ್ಲಿ ಜೈಭುವನೇಶ್ವರಿ ಒಕ್ಕಲಿಗರ ಸಂಘದಿಂದ ಏರ್ಪಡಿಸಿದ್ದ 516ನೇ ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಕೆಂಪೇಗೌಡರು ಯಾವುದೇ ಕೆಲಸ ಕಾರ್ಯಗಳನ್ನು ಮಾಡುವಾಗ ದೂರದೃಷ್ಟಿ ಹಾಗೂ ಜನರ ಒಳಿತಿಗಾಗಿ ಶ್ರಮಿಸಿದವರು .ದೇಶ, ರಾಜ್ಯ, ಬೆಳೆಯಬೇಕಾದರೆ ನಗರಗಳ ಬೆಳವಣಿಗೆ ಮುಖ್ಯ ಎಂಬುದನ್ನು ಅರಿತಿದ್ದ ಅವರು, ಬೆಂಗಳೂರಿಗೆ ಭದ್ರ ಬೂನಾದಿ ಹಾಕಿದ ನಾಯಕ ಎಂದು ತಿಳಿಸಿದರು.

ಸರ್ವಜನಾಂಗದ ಅಭಿವೃದ್ಧಿಗೆ ಕೆಂಪೇಗೌಡರು ಶ್ರಮಿಸಿದ್ದು, ಒಂದು ಸಮುದಾಯಕ್ಕೆ ಸೀಮಿತರಲ್ಲ ಎಲ್ಲಾ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ ಮಹನೀಯನನ್ನ ಸ್ಮರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಎಲ್ಲ ಸಮುದಾಯಗಳು ಅಭಿವೃದ್ಧಿಯಾದಗ ಮಾತ್ರ ದೇಶದ ಅಭಿವೃದ್ಧಿ ಸಾದ್ಯ , ರಾಜ್ಯದಲ್ಲಿ ಬಿಜೆಪಿ ಸರ್ಕಾರ ಎಲ್ಲ ಸಮಾಜದ ಅಭಿವೃದ್ಧಿಗೆ ಬದ್ದವಾಗಿದೆ ಎಂದು ತಿಳಿಸಿದರು.

ಕ್ಷೇತ್ರದಾದ್ಯಂತ ಕಾವೇರಿ ನೀರಿನ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು,ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದೆಂದು ನುಡಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಪ್ರದೀಪ್ ಗೌಡ, ರಮೇಶ್ ಗೌಡ,ಎಸ್ ಎಲ್ ವಿ ಶೇಖರ್,ಗೋಪಾಲಣ್ಣ,,ರಾಜ ಕುಮಾರ್ ಗೌಡ,ಗಂಗಾಧರ್, ಸಂದೀಪ್,ಮಲ್ಲಣ್ಣ,ಬ್ರಹ್ಮನಂದ,ಅಯ್ಯಪ್ಪ,ಸನ್ಮಾನ ಹನುಮಂತಪ್ಪ, ಗಂಗಣ್ಣ, ಶ್ರೀನಿವಾಸ ಮಾಸ್ಟರ್ ರವರಿಗೆ ಸನ್ಮಾನಿಸಲಾಯಿತು.