BANGLADESH : ಬಾಂಗ್ಲಾದಲ್ಲಿ ಹಿಂದೂ ಯುವತಿ ಮೇಲೆ ರೇಪ್ - ಸ್ಥಳೀಯ ರಾಜಕಾರಣಿಯೇ ಆರೋಪಿ!
ಕ್ರೈಮ್ದೇಶ/ವಿದೇಶ


ಡಾಕಾ: 21 ವರ್ಷದ ಯುವತಿಯೊಬ್ಬಳ ಮೇಲೆ ಅತ್ಯಾಚಾ*ರ ಎಸೆಗಿದ ಆರೋಪದ ಮೇಲೆ ಸ್ಥಳೀಯ ರಾಜಕಾರಣಿ ಸೇರಿದಂತೆ ಐವರನ್ನು ಬಂಧಿಸಿರುವ ಘಟನೆ ಬಾಂಗ್ಲಾದೇಶದ ಮುರಾದ್ ನಗರ ಉಪಜಿಲ್ಲಾದಲ್ಲಿ ನಡೆದಿದೆ.
ಜೂನ್ 26 ರಂದು ಈ ಘಟನೆ ನಡೆದಿದ್ದು, ರಾಮಚಂದ್ರಾಪುರ ಪಚ್ಚಿಟ್ಟಾ ಗ್ರಾಮದ 38 ವರ್ಷದ ಫಜೋರ್ ಅಲಿ ಎಂಬಾತ ಸಂತ್ರಸ್ತೆಯ ತಂದೆಯ ಮನೆಗೆ ನುಗ್ಗಿ ಈ ಕೃತ್ಯವೆಸಗಿರುವುದಾಗಿ ಗೊತ್ತಾಗಿದೆ.
ಮುರಾದ್ ನಗರ ಉಪಜಿಲ್ಲೆಯ 21 ವರ್ಷದ ಹಿಂದೂ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಸ್ಥಳೀಯ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ(ಬಿಎನ್‌ಪಿ) ನಾಯಕ ಫೇಜರ್ ಅಲಿ ಎಂಬಾತನನ್ನು ಬಂಧಿಸಲಾಗಿದೆ.
ಫಜೋರ್ ಅಲಿ ಬಾಂಗ್ಲಾದೇಶ BNP ಪಕ್ಷದ ನಾಯಕನಾಗಿದ್ದಾನೆ. ಸಂತ್ರಸ್ತೆಯ ಪತಿ ವಿದೇಶದಲ್ಲಿ ನೆಲೆಸಿದ್ದಾರೆ. ಹರಿಸೇವಾ ಹಬ್ಬದ ಪ್ರಯುಕ್ತ ಸಂತ್ರಸ್ತೆ ಮಕ್ಕಳೊಂದಿಗೆ ತಂದೆ ಜತೆ ಇದ್ದಳು. ಈ ವೇಳೆ ರಾತ್ರಿ 10 ಗಂಟೆಯ ವೇಳೆ ಫಜೋರ್ ಅಲಿ ಮನೆಗೆ ನುಗ್ಗಿದ್ದಾನೆ. ಬಲವಂತವಾಗಿ ಮನೆಯೊಳಗೆ ನುಗ್ಗಿ ಆಕೆಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಈ ಕೃತ್ಯವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಆರೋಪದಲ್ಲಿ ಇತರೆ 4 ಮಂದಿಯನ್ನು ಬಂಧಿಸಲಾಗಿದೆ.