ಮಾಜಿ ಶಾಸಕ ವೆಂಕಟರಮಣಯ್ಯರನ್ನ ಏಕವಚನದಲ್ಲಿ ನಿಂದಿಸಿದ ಬಿ.ಸಿ.ಆನಂದ್: ಕಾಂಗ್ರೆಸ್ ಮುಖಂಡರು ಆಕ್ರೋಶ
ಸ್ಥಳೀಯ ಸುದ್ದಿ


ಬಮುಲ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಬಿ.ಸಿ ಆನಂದ್ ಅವರು ಗೆದ್ದ ಬಳಿಕ ನಿಕಟಪೂರ್ವ ಶಾಸಕರಾದ ವೆಂಕಟರಮಣಯ್ಯ ರವರನ್ನು ಏಕವಚನದಲ್ಲಿ ಬೈದಿರುವುದನ್ನು ನಾವು ತೀವ್ರ ಖಂಡಿಸುತ್ತೇನೆ ಎಂದು ಲಕ್ಷ್ಮಿ ಪತಿ ಆಕ್ರೋಶ ವ್ಯಕ್ತಪಡಿಸಿದರು.
ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ನ ನಗರ, ಗ್ರಾಮಾಂತರ ಬ್ಲಾಕ್ ಎಸ್ ಸಿ ಎಸ್ ಟಿ ಘಟಕದ ಅಧ್ಯಕ್ಷರಿಂದ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.
ಇತ್ತೀಚೆಗೆ ನಡೆದ ಬಮುಲ್ ಬೆಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಬಿ.ಸಿ ಆನಂದ್ ಅವರು ಜಯಗಳಿಸಿದ್ದಾರೆ. ಜನರು ನೀಡಿದ ಈ ತೀರ್ಪನ್ನು ನಾವು ನಮ್ಮ ಪಕ್ಷದ ವತಿಯಿಂದ ಸ್ವಾಗತಿಸುತ್ತೇವೆ. ಆದರೇ, ಗೆದ್ದ ಅಮಲಿನಲ್ಲಿ ನಮ್ಮ ನಿಕಟಪೂರ್ವ ಶಾಸಕರಾದ ಟಿ.ವೆಂಕಟರಮಣಯ್ಯ ರವರನ್ನು ಏಕ ವಚನದಲ್ಲಿ ಬೈದಿರುವುದು ಸರಿಯಲ್ಲ,
ಇಲ್ಲಿ ಮಾಜಿ ಶಾಸಕರನ್ನು ಏಕವಚನದಲ್ಲಿ ನಿಂದಿಸಿ, ಬಳಿಕ ಹಾಲಿ ಬಿಜೆಪಿ ಶಾಸಕರನ್ನು ಭೇಟಿಯಾಗಿ ಸನ್ಮಾನಿಸಿ ಮಧ್ಯಾಹ್ನದ ವೇಳೆಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸನ್ಮಾನಿಸಿ ಬಂದಿದ್ದಾರೆ. ಇದು ಅವರ ದ್ವಂದ ನಿಲುವಿಗೆ ಮತ್ತೊಂದು ನಿರ್ದಶನವಾಗಿದ್ದು ಅವರು ಯಾವ ಪಕ್ಷಕ್ಕೆ ಸೇರಿದವರು ಎಂಬುದನ್ನ ಅವರ ಶಾಸಕರು ಹಾಗು ಕ್ಷೇತ್ರದ ಜನರಿಗೆ ಸ್ಪಷ್ಟನೆ ಕೊಡಬೇಕು ಎಂದು ಆಗ್ರಹಿಸಿದರು.
ಬಳಿಕ ಮಾತನಾಡಿದ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಭೈರೇಗೌಡ ಅವರು ಮಾತನಾಡಿ, ಬಮುಲ್ ಚುನಾವಣೆಯಲ್ಲಿ ದೊಡ್ಡಬಳ್ಳಾಪುರ ಜೆಡಿಎಸ್ ಅಭ್ಯರ್ಥಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಬೇಷರತ್ ಬೆಂಬಲ ನಿಡಿದ್ದೆವು, ಆದರೇ ಈ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸೋತಿದ್ದಾರೆ. ಜನರು ನೀಡಿರುವ ತೀರ್ಪನ್ನು ನಾವು ಒಪ್ಪಿಕೊಂಡಿದ್ದೇವೆ. ಆದರೇ, ಗೆದ್ದ ಬಳಿಕ ಬಿಜೆಪಿ ಬೆಂಬಲಿತ ಅಭ್ಯರ್ಥಿ ಬಿ.ಸಿ.ಆನಂದ್ ಅವರು ನಿಕಟಪೂರ್ವ ಶಾಸಕರನ್ನು ಏಕವಚನದಲ್ಲಿ ಮಾತನಾಡಿರುವುದು ಸರಿಯಲ್ಲಿ ಇದನ್ನು ನಾವು ಖಂಡಿಸುತ್ತೇವೆ. ರಾಜಕಾರಣದಲ್ಲಿ ಮಾತನಾಡುವಾಗ ಕನಿಷ್ಟ ಸೌಜನ್ಯ ಇಟ್ಟುಕೊಂಡು ಮಾತನಾಡಬೇಕು, ಭಾಷೆಯನ್ನು ಇತಿ ಮಿತಿಯಲ್ಲಿಟ್ಟುಕೊಂಡು ಅವರ ರಾಜಕೀಯದಲ್ಲಿ ಏಳಿಗೆ ಸಾಧಿಸಬೇಕು. ಇದರ ಬಗ್ಗೆ ಅವರೇ ಆತ್ಮ ವಿಮರ್ಶೆ ಮಾಡಿಕೊಳ್ಳಲಿ ಎಂದು ಅವರು ಹೇಳಿದರು.
ಇನ್ನು ಇದೇ ವೇಳೆ ಮುಖಂಡರಾದ ಅಪ್ಪಿ ವೆಂಕಟೇಶ್ ಮಾತನಾಡಿ, ಬಮುಲ್ ಚುನಾವಣೆಯಲ್ಲಿ ನಮ್ಮ ಬೇಷರತ್ ಬೆಂಬಲ ಪಡೆದ ಜೆಡಿಎಸ್ ಅಭ್ಯರ್ಥಿ ಪರಾಭವಗೊಂಡಿದ್ದಾರೆ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ಗೆದ್ದ ಸಂಭ್ರಮದಲ್ಲಿ ಈ ಹಿಂದೆ ಎರಡು ಬಾರಿ ಶಾಸಕರಾಗಿ ಚುನಾಯಿತರಾಗಿ ತಾಲ್ಲೂಕಿಗೆ ಶ್ರಮಿಸಿದ ಮಾಜಿ ಶಾಸಕ ವೆಂಕಟರಮಣಯ್ಯ ಅವರ ಬಗ್ಗೆ ಏಕವಚನದಲ್ಲಿ ಮಾತನಾಡಿರುವುದು ಬಿ.ಸಿ ಆನಂದ್ ಅವರ ಗನತೆಯನ್ನು ತೋರಿಸುತ್ತದೆ ಎಂದು ಅವರು ಕಿಡಿಕಾರಿದರು.
ಈ ವೇಳೆ ಕುರುಬ ಸಮಾಜದ ರಾಜ್ಯ ಖಜಾಂಚಿ ಕೃಷ್ಣಮೂರ್ತಿ, ತಾಲ್ಲೂಕು ಎಸ್ಸಿ ಎಸ್ಟಿ ಬ್ಲಾಕ್ ಅಧ್ಯಕ್ಷ ಕೆಂಪಣ್ಣ, ನಗರ ಎಸ್ಸಿಎಸ್ಟಿ ಬ್ಲಾಕ್ ಅಧ್ಯಕ್ಷ ಮುನಿರಾಜ್, ದಲಿತ ಮುಖಂಡರಾದ ಟಿ.ಮಂಜುನಾಥ್, ನಗರಸಭಾ ಸದಸ್ಯರಾದ ಶಿವಣ್ಣ, ಮಂಜುನಾಥ್ ಮತ್ತು ಶ್ರೀನಿವಾಸ್ ಅವರು ಇದ್ದರು.