ಬೆಳಗಾವಿ: ಬಾಗಿನ ಅರ್ಪಿಸಲು ಹೋಗಿ ನೀರು ಪಾಲಾದ ಮಹಿಳೆ.

ಜಿಲ್ಲಾ ಸುದ್ದಿ

ಧರ್ಮ ಬಸವನಪುರ

6/18/20251 min read

ಬೆಳಗಾವಿ: ಮಾಂಜರಿ ಗ್ರಾಮದ ಬಳಿಯಲ್ಲಿ ತುಂಬಿ ಹರಿಯುತ್ತಿರುವ ಕೃಷ್ಣಾ ನದಿಗೆ ಮಂಗಳವಾರ ಪೂಜೆ ಸಲ್ಲಿಸಲು ತೆರಳಿದ್ದ ಮಹಿಳೆಯೊಬ್ಬರು ಬಾಗಿನ ಅರ್ಪಿಸಲು ಹೋಗಿ ನೀರಿಗೆ ಬಿದ್ದು ಕೃಷ್ಣೆಯ ಪಾಲಾಗಿರುವ ಘಟನೆ ನಡೆದಿದೆ.

ಕೃಷ್ಣಾ ನದಿಗೆ ಸಂಗೀತಾ (41) ಅವರು ಬಾಗಿನ ಅರ್ಪಿಸಲು ತೆರೆಳಿದ್ದರು. ಈ ವೇಳೆ ಕಾಲು ಜಾರಿ ಬಿದ್ದು ನದಿಯಲ್ಲಿ ಕಣ್ಮರೆಯಾಗಿದ್ದಾರೆ.

ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳವು ಮಹಿಳೆಗಾಗಿ ಹುಡುಕಾಟ ನಡೆಸುತ್ತಿದೆ.

ಚಿಕ್ಕೋಡಿ ಉಪ ವಿಭಾಗಾಧಿಕಾರಿ ಸುಭಾಷ ಸಂಪಗಾಂವಿ, ತಹಶೀಲ್ದಾರ ಚಿದಂಬರ ಕುಲಕರ್ಣಿ ಭೇಟಿ ನೀಡಿದರು. ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.