ಬೆಂಗಳೂರು: ಓಯೋ ರೂಂನಲ್ಲಿ ನಡೆಯಿತು ಪ್ರಿಯಕರನಿಂದಲೇ ಪ್ರಿಯತಮೆಯ ಬರ್ಬರ ಹತ್ಯೆ.

ಕ್ರೈಮ್

ಧರ್ಮ ಬಸವನಪುರ.

6/9/20251 min read

ಬೆಂಗಳೂರು: ಬೆಂಗಳೂರಿನಲ್ಲಿ ವಿವಾಹಿತ ಪ್ರಿಯತಮೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಓಯೋ ಹೋಟೆಲ್‌ನಲ್ಲಿ ಪ್ರಿಯತಮೆಯನ್ನ ಬರೋಬ್ಬರಿ 17 ಬಾರಿ ಇರಿದು ತನ್ನ ಹತ್ಯೆ ಮಾಡಿದ್ದಾನೆ.

ಕೆಂಗೇರಿ ನಿವಾಸಿಗಳಾದ ಯಶಸ್ ಮತ್ತು ಹರಿಣಿ ಜಾತ್ರೆಯಲ್ಲಿ ಪರಿಚಯವಾಗಿ ಸಂಬಂಧ ಬೆಳೆಸಿದ್ದರು.ಸಾಫ್ಟ್‌ವೇರ್ ಇಂಜಿನಿಯರ್ ಯಶಸ್ ತನ್ನ ಪ್ರೇಯಸಿಯನ್ನು

ಪೂರ್ಣ ಪ್ರಜ್ಞಾ ಲೇಔಟ್ ನ ಹೋಟೆಲ್ ಓಯೋ ರೂಮಿನಲ್ಲಿ‌ ಕರೆದುಕೊಂಡು ಹೋಗಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಶುಕ್ರವಾರ ರಾತ್ರಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿರುವ 25 ವರ್ಷದ ಯಶಸ್‌, ಹರಿಣಿಗೆ ಜಾತ್ರೆಯೊಂದರಲ್ಲಿ ಪರಿಚಿತನಾಗಿದ್ದ. ಆಗ ಇಬ್ಬರು ಫೋನ್‌ ನಂಬರ್‌ ಎಕ್ಸ್‌ಚೇಂಜ್‌ ಮಾಡಿಕೊಂಡಿದ್ದರು. ಬಳಿಕ ಇಬ್ಬರ ಪರಿಚಯ ಸ್ನೇಹಕ್ಕೆ ತಿರುಗಿ ಬಳಿಕ ಪ್ರೀತಿಗೆ ತಿರುಗಿತ್ತು .ಅದರಲ್ಲೂ ಇಬ್ಬರು ಕೆಂಗೇರಿಯಲ್ಲೇ ನೆಲೆಸಿದ್ದರಿಂದ ಚಾಟಿಂಗ್‌, ಡೇಟಿಂಗ್, ಕಾಲಿಂಗ್‌ ಅಂತಾ ಮತ್ತಷ್ಟು ಹತ್ತಿರವಾಗಿದ್ದರು. ಇದು ಇಬ್ಬರನ್ನೂ ಮತ್ತಷ್ಟು ಬೆಸೆದು.. ದೈಹಿಕ ಸಂಪರ್ಕದವರೆಗೂ ಮುಂದುವರೆದಿದೆ.

ಯಶಸ್ ಸ್ನೇಹಿತನ ಸಂಬಂಧಿಯಾಗಿದ್ದ ಹರಿಣಿ, ಕೆಲ ತಿಂಗಳುಗಳಿಂದ ಒಡನಾಟವನ್ನು ಇನ್ನಷ್ಟು ಹೆಚ್ಚು ಮಾಡಿತ್ತು. ಪ್ರೀತಿಯ ವಿಷಯ ಗಂಡನಿಗೆ ಗೊತ್ತಾಗಿ ಗಲಾಟೆಯೂ ಆಗಿತ್ತು. ಅದಾದ ಬಳಿಕ ಹರಿಣಿ ಪತಿ ಮೊಬೈಲ್‌ ಕಿತ್ತುಕೊಂಡು ಮನೆಯಲ್ಲೆ ಕೂಡಿ ಹಾಕಿದ್ದರು. ಹೀಗಾಗಿ ಭಯ ಬಿದ್ದ ಹರಿಣಿ, ಯಶಸ್‌ನಿಂದ ದೂರವಾಗಿದ್ದಳು. ನಂತರ ಇತ್ತೀಚೆಗೆ ಯಶಸ್‌ನ್ನ ಸಂಪರ್ಕ ಮಾಡಿದ್ದಳು. ಆಷ್ಟರಲ್ಲಾಗಲೇ ಹರಿಣಿ ನೆನಪಲ್ಲಿ ಯಶಸ್‌ , ತಲೆ ಕೆಡಿಸಿಕೊಂಡು ಹುಚ್ಚನಾಗಿದ್ದ.

ಸ್ವಲ್ಪ ದಿನಗಳವರೆಗೆ ಯಶಸ್‌ ಆಂಟಿ ಹರಿಣಿ ಚಿಂತೆಯಲ್ಲೇ ಮುಳುಗಿದ್ದ. ಯಾವಾಗ ಹರಿಣಿ ಫೋನ್‌ ಕಾಲ್‌ ಮಾಡಿದ್ದಳೋ, ಇದೇ ಚಾನ್ಸ್‌ ಅಂತಾ ಕಳೆದ ಶುಕ್ರವಾರ ಯಶಸ್‌, ಪೂರ್ಣ ಪ್ರಜ್ಙಾ ಲೇಔಟ್‌ನಲ್ಲಿ ಓಯೋ ರೂಮ್‌ ಬುಕ್‌ ಮಾಡಿ ಮಾತನಾಡುವುದಿದೆ ಬಾ ಅಂತಾ ಕರೆಸಿದ್ದಾನೆ. ಯಾರಿಗೂ ತಿಳಿಸದೆ ಮನೆಯಿಂದ ಬಂದ ಹರಿಣಿ, ಮೊದಲಿಗೆ ಯಶಸ್‌ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾಳೆ.

ಹರಿಣಿ ಎರಡು ಮಕ್ಕಳ ತಾಯಿಯಾಗಿದ್ದು, ತನ್ನ ಅಕ್ರಮ ಸಂಬಂಧದ ವಿಚಾರವಾಗಿ ಫ್ಯಾಮಿಲಿಯಲ್ಲಿ ಒತ್ತಡಕ್ಕೆ ಒಳಗಾಗಿದ್ದಳು. ಈ ಸಲುವಾಗಿ ಯಶಸ್ ಜತೆಗಿನ ಸಂಬಂಧದಿಂದ ದೂರುವಿರಲು ನಿರ್ಧರಿಸಿದ್ದರು. ನನ್ನ ಸಹವಾಸ ಬಿಟ್ಟು ಬಿಡು ಅಂತಾ ಮನವಿ ಮಾಡಿದ್ದಾಳೆ.

ಮೊದಲೇ ಹರಿಣಿಯನ್ನ ಕೊಲ್ಲಲು ಪ್ಲಾನ್ ಮಾಡಿಕೊಂಡಿದ್ದರಿಂದ, ಆಂಟಿ ಹರಿಣಿ ಮಾತಿಗೆ ಸಿಟ್ಟಾದ ಯಶಸ್, ನಿನ್ನ ಬಿಟ್ಟಿರೋಕೆ ಆಗಲ್ಲ. ನೀನು ನನಗೆ ಬೇಕು. ಆದರೆ ನೀನು ನನ್ನಿಂದ ದೂರ ಹೊಗುತ್ತಿದ್ದಿಯಾ. ನನಗೆ ನೀನು ಸಿಗಲಿಲ್ಲ ಅಂದ್ರೆ ಇನ್ಯಾರಿಗೂ ಸಿಗಬಾರದು ಅಂತಾ ಚಾಕುವಿನಿಂದ 17 ಬಾರಿಗೆ ಇರಿದು ಹತ್ಯೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ.

ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ್ದ ಸುಬ್ರಮಣ್ಯಪುರ ಇನ್ಸ್ ಪೆಕ್ಟರ್ ರಾಜು ಮತ್ತು ತಂಡವು ಬಳಿಕ ಎಫ್‌ಎಸ್‌ಎಲ್ ತಂಡ ಕರೆಸಿ ಎಲ್ಲಾ ಸಾಕ್ಷ್ಯ ಸಂಗ್ರಹ ಮಾಡಿತ್ತು. ನಿನ್ನೆ ಕಾರ್ಯಾಚರಣೆ ನಡೆಸಿ ಕೊಲೆ ಆರೋಪಿ ಯಶಸ್ ಬಂಧನ ಮಾಡಲಾಗಿದೆ. ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.