ಬೆಂಗಳೂರು: ದಿವ್ಯ ದರ್ಶನ ಟೂರ್ ಆರಂಭಿಸಿದ ಬಿಎಂಟಿಸಿ - ಒಂದೇ ದಿನ 8 ದೇವಾಲಯದ ದರ್ಶನ ಭಾಗ್ಯ.

ಜಿಲ್ಲಾ ಸುದ್ದಿಸ್ಥಳೀಯ ಸುದ್ದಿ

ಧರ್ಮ ಬಸವನಪುರ

5/29/20251 min read

ಬೆಂಗಳೂರು: ಬಿಎಂಟಿಯಿಂದ ರಾಜ್ಯದ ಜನತೆಗೆ ಗುಡ್ ನ್ಯೂಸ್ ಸಿಕ್ಕಿದೆ. ಕೇವಲ 450 ರೂ. ಟೆಂಪಲ್ ಟೂರ್ ದಿವ್ಯ ದರ್ಶನಂ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಇದಕ್ಕೆ ಬುಕ್ ಮಾಡುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಿಎಂಟಿಸಿ ಸಂಸ್ಥೆ ಹೊಸ ಸೇವೆಯನ್ನು ಪ್ರಾರಂಭಿಸಲು ಮುಂದಾಗಿದೆ. ಅದೇನೆಂದರೆ ಬೆಂಗಳೂರು ನಗರದಲ್ಲಿರುವ ಆಧ್ಯಾತ್ಮಿಕ ಪ್ರವಾಸೋದ್ಯಮವಾಗಿರುವ, 'ದಿವ್ಯ ದರ್ಶನ' ಎಂಬ ಹೆಸರಿನ ಹೊಸ ಬಸ್ ಪ್ಯಾಕೇಜ್ ಸೇವೆಯನ್ನ, ಇದೇ ಮೇ 31ರಿಂದ ಪ್ರಾರಂಭಿಸುತ್ತಿದೆ. ಈ ಹೊಸ ಸೇವೆಯು ಶನಿವಾರ, ಭಾನುವಾರ ಮತ್ತು ಸರ್ಕಾರಿ ರಜಾದಿನಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ.

ಈಗಾಗಲೇ ಬೆಂಗಳೂರು ದರ್ಶಿನಿ ಮತ್ತು ಈಶ ಫೌಂಡೇಶನ್ ಪ್ರವಾಸಗಳ ಅನುಭವ ಬೆಂಗಳೂರಿನಲ್ಲಿ ಚಾಲ್ತಿ ಇದೆ. ಇದರ ಆಧಾರವಾಗಿಯೇ ಈ ಹೊಸ ಯೋಜನೆ ಶುರುವಾಗಲಿದೆ. ಈ ಸೇವೆಯಲ್ಲಿ ಬಿಎಂಟಿಸಿ ಬಸ್‌ಗಳು, ದೇವಾಲಯ ಪ್ರವಾಸವನ್ನು ಹೆಚ್ಚು ಸುಲಭಗೊಳಿಸಲು ಮತ್ತು ಆಧ್ಯಾತ್ಮಿಕ ಪ್ರವೃತ್ತಿಗೆ ಉತ್ತೇಜನ ನೀಡಲು ಉದ್ದೇಶಿಸಿದೆ.

'ದಿವ್ಯ ದರ್ಶನ' ಪ್ಯಾಕೇಜ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಒಂದು ದಿನದಲ್ಲಿ ಬೆಂಗಳೂರಿನ ಎಂಟು ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡುವ ಅವಕಾಶ ಪಡೆಯುತ್ತಾರೆ. ಹವಾನಿಯಂತ್ರಿತ ಬಸ್ ಸೇವೆ ಇದರ ಪ್ರಮುಖ ಆಕರ್ಷಣೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಳಿಗ್ಗೆ 8:30 ಕ್ಕೆ ಪ್ರಾರಂಭವಾಗುವ ಈ ಬಸ್ ಸಂಜೆ 6:05 ಕ್ಕೆ ಮರಳಿ ವಾಪಸ್ಸ್ ಬರಲಿದೆ.

ಈ ಪ್ಯಾಕೇಜ್‌ನಲ್ಲಿ ಬೇಟಿ ನೀಡಬಹುದಾದ ದೇವಾಲಯಗಳು:

* ಶ್ರೀ ಗಾಳಿ ಆಂಜನೇಯ ಸ್ವಾಮಿ ದೇವಾಲಯ.

* ಶ್ರೀ ರಾಜರಾಜೇಶ್ವರಿ ದೇವಸ್ಥಾನ.

* ಶೃಂಗಗಿರಿ ಶ್ರೀ ಷಣ್ಮುಖ ಸ್ವಾಮಿ ದೇವಸ್ಥಾನ.

* ಶ್ರೀ ದೇವಿ ಕರುಮಾರಿ ಅಮ್ಮನವರ ದೇವಸ್ಥಾನ.

* ಓಂಕಾರ್ ಹಿಲ್ಸ್ ದೇವಸ್ಥಾನ.

* ಇಸ್ಕಾನ್ ವೈಕುಂಠ ದೇವಸ್ಥಾನ.

* ಆರ್ಟ್ ಆಫ್ ಲಿವಿಂಗ್ ಶ್ರೀ ಶ್ರೀ ರವಿಶಂಕರ ಆಶ್ರಮ.

* ಬನಶಂಕರಿ ದೇವಸ್ಥಾನ ಈ ಎಲ್ಲಾ ದೇವರುಗಳ ದರ್ಶನ ಭಾಗ್ಯ ಕೆವಲ ಒಂದು ದಿನದ ಪ್ಯಾಕೇಜ್ ನಲ್ಲಿ ಲಭ್ಯವಿರುತ್ತದೆ.