ಬೆಂಗಳೂರು: ಹೇಸರಘಟ್ಟದ ಡ್ರ್ಯಾಗನ್ ಫ್ರೂಟ್ ಜಮೀನಿಗೆ ಭೇಟಿ ನೀಡಿದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್.
ಜಿಲ್ಲಾ ಸುದ್ದಿರಾಜಕೀಯ


ಬೆಂಗಳೂರು: ಬೆಂಗಳೂರು: ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್) ಆಯೋಜಿಸಿದ್ದ 'ವಿಕಸಿತ ಕೃಷಿ ಸಂಕಲ್ಪ ಅಭಿಯಾನ ' ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಉದ್ಘಾಟಿಸಿ, ಪ್ರಗತಿಪರ ರೈತರನ್ನು ಸನ್ಮಾನಿಸಿದರು.
ನಂತರ ಮಾತನಾಡಿದ ಅವರು ಕೃಷಿಯಲ್ಲಿ ವೈವಿಧ್ಯ, ಸುಸ್ಥಿರ ಕೃಷಿ ವಿಧಾನಗಳು ಹಾಗೂ ತಂತ್ರಜ್ಞಾನ ಆಧಾರಿತ ಕೃಷಿ ಅಳವಡಿಸಿಕೊಳ್ಳುವ ಮೂಲಕ ಭಾರತವನ್ನು ಜಗತ್ತಿನ ಆಹಾರ ಭಂಡಾರವಾಗಿಸಬೇಕು' ಎಂದು ರೈತರಿಗೆ ಕರೆ ನೀಡಿದರು.
ವಿಕಸಿತ ಕೃಷಿ ಸಂಕಲ್ಪ ಅಭಿಯಾನ'ವು 'ಒಂದು ದೇಶ, ಒಂದು ಕೃಷಿ, ಒಂದು ತಂಡ' ಎಂಬ ಮನೋಭಾವವನ್ನು ಬೆಳೆಸುತ್ತಿದೆ. ಈ ಅಭಿಯಾನದಿಂದ ಹೊಸ ತಂತ್ರಜ್ಞಾನಗಳು ನೇರವಾಗಿ ರೈತರ ಹೊಲದವರೆಗೆ ತಲುಪುತ್ತಿದ್ದು, ತ್ವರಿತ ಪರಿಣಾಮ ಬೀರುತ್ತಿವೆ' ಎಂದು ತಿಳಿಸಿದರು.
ರೈತರು ಅಳವಡಿಸಿಕೊಂಡಿದ್ದ ನವೀನ ತಂತ್ರಜ್ಞಾನ ಕೃಷಿಯ ಮಾದರಿಗಳ ಬಗ್ಗೆ ಮೆಚ್ಚುಗೆ ಸೂಚಿಸಿದರು.ವಿಕಸಿತ ಕೃಷಿ ಸಂಕಲ್ಪ ಅಭಿಯಾನ'ವು 'ಒಂದು ದೇಶ, ಒಂದು ಕೃಷಿ, ಒಂದು ತಂಡ ಎಂಬ ಮನೋಭಾವವನ್ನು ಬೆಳೆಸುತ್ತಿದೆ. ಈ ಅಭಿಯಾನದಿಂದ ಹೊಸ ತಂತ್ರಜ್ಞಾನಗಳು ನೇರವಾಗಿ ರೈತರ ಹೊಲದವರೆಗೆ ತಲುಪುತ್ತಿದ್ದು, ತ್ವರಿತ ಪರಿಣಾಮ ಬೀರುತ್ತಿವೆ ಎಂದು ತಿಳಿಸಿದರು.
ಇದೇ ವೇಳೆ ಐಸಿಎಆರ್-ಐಐಎಚ್‍ಆರ್ ಅಭಿವೃದ್ಧಿಪಡಿಸಿದ್ದ ನೂತನ ತಳಿಗಳು, ಹೂವುಗಳು, ತರಕಾರಿಗಳು, ಔಷಧೀಯ ಸಸ್ಯಗಳನ್ನು ಒಳಗೊಂಡ ಪ್ರದರ್ಶನವನ್ನು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಏಳು ಮಂದಿ ಅತ್ಯುತ್ತಮ ರೈತರಾದ ರತ್ನಮ್ಮ, ಗೋಪಾಲಗೌಡ, ಪದ್ಮಿನಿ ಗೌಡ, ಎಚ್.ಕೆ. ರಘು, ಮಂಗಳಮ್ಮ, ಮಹೇಶ್ ಎಚ್.ಎನ್. ಮತ್ತು ಶ್ರೀನಿವಾಸ್ ಅವರನ್ನು ಗೌರವಿಸಲಾಯಿತು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ. ಕೆ. ಸುಧಾಕರ್, ಶಾಸಕ ಎಸ್. ಆರ್. ವಿಶ್ವನಾಥ್ ಸೇರಿದಂತೆ ಮತ್ತಿತರರು ಇದ್ದರು.
ಐಟಿ ಉದ್ಯೋಗ ಬಿಟ್ಟು, ನೀರ್ಜಾ ವಾಲಿಯಾ ಅವರು ತಮ್ಮ ಜಮೀನಿನಲ್ಲಿ ಸಮೃದ್ಧವಾಗಿ ಬೆಳೆದ ಡ್ರ್ಯಾಗನ್ ಫ್ರೂಟ್ನ್ನು ಕಂಡು ಶಿವರಾಜ್ ಸಿಂಗ್ ಚೌಹಾಣ್ ಸಂತಸಗೊಂಡರು. ರೈತ ಮಹಿಳೆಯನ್ನು ಶ್ಲಾಘಿಸಿದರು. ಈ ಕುರಿತು ಕೇಂದ್ರ ಸಚಿವರು ಅವರು ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.
ಕೃಷಿಯ ಕಡೆಗೆ ಯುವಕರಲ್ಲಿ ಆಸಕ್ತಿ ಹೆಚ್ಚುತ್ತಿರುವುದು ಮತ್ತು ಅವರು ಹೊಸ ತಂತ್ರಗಳ ಮೂಲಕ ಅಪಾರ ಲಾಭವನ್ನು ಗಳಿಸುತ್ತಿರುವುದು ಬಹಳ ಸಂತೋಷದ ವಿಷಯ ಎಂದು ಪೋಸ್ಟ್ ಮಾಡಿದ್ದಾರೆ.