ಭಟ್ಟರಹಳ್ಳಿ: ವಿಷ್ಣುವರ್ಧನ್ ರವರ ಜೀವನ ಎಲ್ಲರಿಗೂ ಸ್ಪೂರ್ತಿದಾಯಕ : ಬೈರತಿ ಬಸವರಾಜ.
ಸ್ಥಳೀಯ ಸುದ್ದಿ


ಕೆ.ಆರ್.ಪುರ: ವಿಷ್ಣುವರ್ಧನ್ ಅವರು ಚಿತ್ರರಂಗದ ಜತೆಗೆ ಕನ್ನಡ ಭಾಷೆ ಉಳಿಸಿ ಬೆಳೆಸಲು ಶ್ರಮಿಸಿದ್ದರು.ಯುವಜನತೆಗೆ ಆದರ್ಶವಾಗಿದ್ದ ಅವರು ನುಡಿದಂತೆ ನಡೆದಿದ್ದರು ಹಾಗೂ ವಿಷ್ಣುವರ್ಧನ್ ರವರ ಜೀವನ ಎಲ್ಲರಿಗೂ ಸ್ಪೂರ್ತಿದಾಯಕ ಎಂದು ಶಾಸಕ ಬೈರತಿ ಬಸವರಾಜ ತಿಳಿಸಿದರು.
ಭಟ್ಟರಹಳ್ಳಿಯಲ್ಲಿ ಕದಂಬ ಡಾ.ವಿಷ್ಣು ಅಭಿಮಾನಿಗಳ ಬಳಗ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಷ್ಣುವರ್ಧನ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಮಾತನಾಡಿದ ಅವರು. ಸಿನಿಮಾ ಮಾತ್ರವಲ್ಲದೇ ಸಮಾಜ ಸೇವಾ ಕಾರ್ಯದಲ್ಲಿಯೂ ವಿಷ್ಣುವರ್ಧನ್ ಅವರು ಮುಂಚುಣಿ ಯಲ್ಲಿದ್ದರು. ಇಷ್ಟೆಲ್ಲ ಸಾಧನೆ ಮಾಡಿರುವ ಅವರು ಇಂದು ಬದುಕಿದ್ದರೆ ತಮ್ಮ 75ನೇ ಹುಟ್ಟುಹಬ್ಬ ವನ್ನು ತಮ್ಮ ಅಭಿಮಾನಿಗಳ ಜೊತೆಗೆ ಅತ್ಯಂತ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದರು. ಅವರು ನಮ್ಮೊಂದಿಗಿಲ್ಲವಾದರೂ ಅವರು ನಟಿಸಿದ್ದ ಸಿನಿಮಾ ಮೂಲಕ ಇಂದಿಗೂ ಜೀವಂತವಾಗಿದ್ದಾರೆ ಎಂದರು.
ವೆಂಗಯ್ಯನ ಕೆರೆ ಬಳಿ ಡಾ.ವಿಷ್ಣುವರ್ಧನ್ ಅವರ ಪ್ರತಿಮೆ ನಿರ್ಮಾಣವಾಗಿದ್ದು ಕೆರೆ ಅಭಿವೃದ್ಧಿ ಆದ ಕೂಡಲೇ ಸಂಘ ನಿರ್ಧರಿಸುವ ದಿನಾಂಕದಲ್ಲಿ ಪ್ರತಿಮೆ ಉದ್ಘಾಟನೆ ಮಾಡಲಾಗುತ್ತದೆ ಎಂದು ಹೇಳಿದರು.
ಕನ್ನಡ ಭಾಷೆಗಾಗಿ ತಮ್ಮದೇ ಆದ ಕೊಡುಗೆ ನೀಡಿರುವ ವಿಷ್ಣುವರ್ಧನ್ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿರುವುದು ಸಂತಸದ ವಿಷಯ ಎಂದು ಹೇಳಿದರು.
ಕದಂಬ ಡಾ.ವಿಷ್ಣು ಅಭಿಮಾನಿಗಳ ಬಳಗ ವತಿಯಿಂದ ಸಂಘಟನೆಯ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಪಾಲಿಕೆ ನಾಮನಿರ್ದೇಶಿತ ಮಾಜಿ ಸದಸ್ಯ ಆಂತೋಣಿಸ್ವಾಮಿ, ಎಪಿಎಂಸಿ ನಾಮನಿರ್ದೇಶಿತ ಮಾಜಿ ಸದಸ್ಯ ಭಟ್ಟರಹಳ್ಳಿ ಮಂಜು, ವೆಂಕಿ, ವಿಷ್ಣು ಸೇನೆ ಬಾಬು, ದಿಲೀಪ್, ರವಿ, ಮಂಜುನಾಥ್ ,ವೀರಭದ್ರಪ್ಪ, ಶಾಂತರಾಜ್ ಮತ್ತಿತರರು ಹಾಜರಿದ್ದರು.