ಬಿಗ್ ಬಾಸ್ ಸ್ಪರ್ಧಿ ಪ್ರಥಮ್ ಮೇಲೆ ದೊಡ್ಡಬಳ್ಳಾಪುರದಲ್ಲಿ ಹಲ್ಲೆ,ಲಾಯರ್ ಜಗದೀಶ್ ಆರೋಪ
ರಾಜ್ಯ


ದೊಡ್ಡಬಳ್ಳಾಪುರ: ತಾಲೂಕಿನ ಮಾರಮ್ಮನ ಗುಡಿ ಪೂಜೆ ವೇಳೆ ದುಷ್ಕರ್ಮಿಗಳು ಆಯುಧಗಳನ್ನು ಹಿಡಿದು ಬಿಗ್ ಬಾಸ್ ವಿನ್ನರ್ ನಟ ಪ್ರಥಮ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮತ್ತೊಬ್ಬ ಬಿಗ್ ಬಾಸ್ ಸ್ಪರ್ಧಿ ಲಾಯರ್ ಜಗದೀಶ್ ಅವರು ಆರೋಪ ಮಾಡಿದ್ದಾರೆ. ಈ ಘಟನೆ ಸಂಬಂಧ ಲಾಯರ್ ಜಗದೀಶ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ದೊಡ್ಡಬಳ್ಳಾಪುರ ಬಳಿಯ ದೇವಾಲಯದ ಉದ್ಘಾಟನೆಗೆಂದು ನಟ ಪ್ರಥಮ್ ಬಂದಾಗ ರೌಡಿಗಳ ಗುಂಪು ಆತನನ್ನು ದೇವಾಲಯದ ಹಿಂಭಾಗ ಕರೆದಿಕೊಂಡು ಹೋಗಿ ಡ್ರಾಗರ್, ಲಾಂಗು ಸೇರಿದಂತೆ ಹರಿತವಾದ ಆಯುಧಗಳನ್ನು ಇಟ್ಟು ಹಲ್ಲೆ ಮಾಡಿದ್ದಾರೆಂದು ಲಾಯರ್ ಜಗದೀಶ್ ಆರೋಪಿಸಿದ್ದಾರೆ.
ಇನ್ನು, ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಇನ್ಸ್ಪೆಕ್ಟರ್ ಪಾಷ ಅವರು ಖುದ್ದು ನಟ ಪ್ರಥಮ್ ಅವರಿಗೆ ಕರೆ ಮಾಡಿ ದೂರು ನೀಡುವಂತೆ ಕೇಳಿದ್ದು ಇದಕ್ಕೆ ಪ್ರಥಮ್ ಪ್ರತಿಕ್ರಿಯೆ ನೀಡಿಲ್ಲ ಎಂದು ಸಹ ಅವರು ವೀಡಿಯೋದಲ್ಲಿ ತಿಳಿಸಿದ್ದಾರೆ.
ಇನ್ನು ಹಲ್ಲೆ ಮಾಡುವ ವೇಳೆ ರೌಡಿಗಳ ಗಂಪಿನೊಂದಿಗೆ ದಿ.ನಟ ಬುಲ್ಲೆಟ್ ಪ್ರಕಾಶ್ ಅವರ ಪುತ್ರ ರಕ್ಷಕ್ ಬುಲ್ಲೆಟ್ ಅಹ ಇದ್ದರು ಎಂದು ಸಹ ಆರೋಪಿಸಿದ್ದು, ಒಬ್ಬ ಸೆಲೆಬ್ರೆಟಿಗೆ ರಕ್ಷಣೆ ಇಲ್ಲದೆ ಹೋದರೆ ಹೇಗೆ ಎಂದು ಗೃಹಸಚಿವ ಪರಮೇಶ್ವರ್ ಹಾಗು ಸಿಎಂ ಸಿದ್ದರಾಮಯ್ಯರನ್ನು ಪ್ರಶ್ನಿಸಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಜಾ ಭಾರತ್ ನ್ಯೂಸ್ ವೆಬ್ ಪೋರ್ಟಲ್ ವಾಟ್ಸಪ್ ಗ್ರೂಪ್ ಸೇರಲು 👇👇Follow this link to join my WhatsApp group: https://chat.whatsapp.com/Fj6L4Eak7N994zl2QHSpHK
