ಶಾಸಕರ ನಿವಾಸದ ಬಳಿ ಬೈಕ್ ಅಪಘಾತ, ವೀಡಿಯೋ ನೋಡಿ
ಸ್ಥಳೀಯ ಸುದ್ದಿ


ದೊಡ್ಡಬಳ್ಳಾಪುರ: ರಸ್ತೆ ಮಧ್ಯದಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದು ಓರ್ವ ವ್ಯಕ್ತಿ ಮತ್ತು ಮಹಿಳೆಗೆ ಗಂಭೀರ ಗಾಯಗಳಾಗಿರುವ ಘಟನೆ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜ್ ಅವರ ನಿವಾಸದ ಬಳಿ ನಡೆದಿದೆ.
ಭಾನುವಾರ ರಾತ್ರಿ ನಗರದ ಸಿದ್ದೆನಾಯಕನ ಹಳ್ಳಿ ಬಳಿ ಹೀರೋ ಬೈಕ್ ನಲ್ಲಿ ಬರುವಾಗ ಬೈಕ್ ಸ್ಕಿಡ್ ಆಗಿ ಬೈಕ್ ಸವಾರರಿಬ್ಬರೂ ರಸ್ತೆ ಮಧ್ಯಕ್ಕೆ ಬಿದ್ದಿದ್ದಾರೆ. ಈ ವೇಳೆ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿದೆ. ಈ ವೇಳೆ ಹಿಂಬದಿಯಿಂದ ಯಾವುದೇ ವಾಹನಗಳು ಬಾರದ ಹಿನ್ನೆಲೆ ಪ್ರಾಣಾಪಾಯದಿಂದ ವ್ಯಕ್ತಿಗಳು ಪಾರಾಗಿದ್ದಾರೆ. ಕೂಡಲೇ ಸ್ಥಳೀಯರು ಆಟೋ ಮಾಡಿ ನಗರದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಸದ್ಯ ಅಪಘಾತಕ್ಕೀಡಾದ ವ್ಯಕ್ತಿಗಳ ಮಾಹಿತಿ ತಿಳಿದುಬಂದಿಲ್ಲ.
ಹೆದ್ದಾರಿಯಲ್ಲಿ ಬೀದಿ ದೀಪಗಳಿಲ್ಲದೇ ಇರುವುದೇ ಅಪಘಾತಕ್ಕೆ ಕಾರಣ:
ಸಿದ್ದೇನಾಯಕನಹಳ್ಳಿ ಬಳಿ ಇತ್ತೀಚೆಗೆ ಹೆಚ್ಚು ಅಪಘಾತ ಪ್ರಕರಣಗಳು ಸಂಭವಿಸುತ್ತಿದೆ. ಬೆಂಗಳೂರು ವ್ಯಾಪ್ತಿ ವಿಸ್ತಾರವಾಗುತ್ತಿರುವುದು ಮತ್ತು ದೊಡ್ಡಬಳ್ಳಾಪುರ ನಗರದಲ್ಲಿ ಜನಸಂಖ್ಯೆ, ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದರು ಇಲ್ಲಿ ಬೀದಿ ದೀಪಗಳು ಮತ್ತು ಸ್ಪೀಡ್ ಬ್ರೇಕರ್ ಹಂಪ್ಸ್ಗಳು ಇಲ್ಲದೇ ಇರುವುದೇ ಇದಕ್ಕೆ ಕಾರಣ ಕೂಡಲೇ ಈ ಕುರಿತು ಜನಪ್ರತಿನಿಧಿಗಳು ಹಾಗು ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಅಪಘಾತ ಪ್ರಕರಣಗಳಿಗೆ ಕಡಿವಾಣ ಹಾಕಬೇಕು ಎಂದು ಪ್ರಜಾಭಾರತ್ ವೆಬ್ ಪೋರ್ಟಲ್ ಮೂಲಕ ಶಾಸಕರಿಗೆ ಸಿದ್ದೇನಾಯಕಹಳ್ಳಿ ನಿವಾಸಿ ಶಿವಣ್ಣ ಮನವಿ ಮಾಡಿಕೊಂಡರು.
