₹25 ಲಕ್ಷ ಮೌಲ್ಯದ ರಕ್ತಚಂದನ ವಶ.ಮೂವರ ಬಂಧನ.
ಸ್ಥಳೀಯ ಸುದ್ದಿಕ್ರೈಮ್


ಹೊಸಕೋಟೆ: ಹೊಸಕೋಟೆ ಪೊಲೀಸರು ₹25 ಲಕ್ಷ ಬೆಲೆ ಬಾಳುವ 11ಕ್ವಿಂಟಲ್ ತೂಕದ 102 ತುಂಡು ರಕ್ತಚಂದನ ವಶಪಡಿಸಿಕೊಂಡಿದ್ದಾರೆ.
ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಿಂದ ರಕ್ತಚಂದನ ಮರದ ತುಂಡುಗಳನ್ನು ತರಿಸಿಕೊಂಡು, ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಟ್ರಾನ್ಸ್‌ಪೋರ್ಟ್ ಕಂಪನಿ ಸರಕು ಸಾಗನೆ ವಾಹನದಲ್ಲಿ ಸಾಗಿಸುವಾಗ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತಿರುಮಲಶೆಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯ ಕಟ್ಟಿಗೆನಹಳ್ಳಿ ಗ್ರಾಮದ ಏಜಾಜ್ ಷರೀಫ್ (47), ಪಯಾಜ್ ಷರೀಫ್ (47) ಮತ್ತು ಸಾದಿಕ್ ಖಾನ್ (34), ತಬ್ರೆಜ್ ಷರೀಫ್, ಹರಿಯಾಣದ ಹಿಸ್ಸಾರದ ವಿಷ್ಣು ಕುಮಾರ್, ವಿಕಾಶ ಕುಮಾರ್, ರಕ್ತಚಂದನ ಪೂರೈಸಿದ ತಮಿಳುನಾಡು, ಆಂಧ್ರ ಪ್ರದೇಶದ ಶಿವು, ದರ್ಶನ್ ಕುಮಾರ್ ಎಂಬುವರನ್ನು ಬಂಧಿಸಿದ್ದಾರೆ.
ರಕ್ತ ಚಂದನ ಮರದ ತುಂಡುಗಳನ್ನು ತರಿಸಿಕೊಂಡು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ, ಟೇಪ್ ಸುತ್ತಿ , ಹೊಸಕೋಟೆಯ ಕೊಳತ್ತೂರು ಗ್ರಾಮದ ಡಿಲವರಿ ಟ್ರಾನ್ಸ್ ಪೋರ್ಟ್ ಕಂಪನಿ ಮೂಲಕ ಹರಿಯಾಣದ ವಿಷ್ಣುಕುಮಾರ್ ಎಂಬುವವರಿಗೆ ಪಾರ್ಸಲ್ ಮಾಡಲು ಮುಂದಾಗಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಪೊಲೀಸರಿಗೆ ಬಂದ ಕೂಡಲೇ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 25 ಲಕ್ಷ ಬೆಲೆ ಬಾಳುವ 1093 ಕೆ.ಜಿ ತೂಕದ 102 ರಕ್ತ ಚಂದನ ಮರದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಕುರಿತಂತೆ ಹೊಸಕೋಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.