ಅನುಭವದ ಮೇರೆಗೆ ಕ್ಯಾನ್ಸರ್ ಪತ್ತೆ: ರೋಗಿಯ ಜೀವ ರಕ್ಷಿಸಿದ ಮೆಡಿಕವರ್ ಆಸ್ಪತ್ರೆ ವೈದ್ಯ ಡಾ.ಕೌಶಿಕ್ ಸುಬ್ರಮಣಿಯನ್.

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

6/7/20251 min read

ಬೆಂಗಳೂರು (ವೈಟ್‌ ಫೀಲ್ದ್‌) : ಹೊಟ್ಟೆ ನೋವಿನಿಂದ ಬಳಲುತ್ತಿದ್ದ 45 ವರ್ಷದ ಬಾಬು ಎಂಬ ರೋಗಿಗೆ, ಪಿತ್ತಕೋಶದ ಕ್ಯಾನ್ಸರ್ ಇರುವುದು ಸ್ಕ್ಯಾನ್‌ನಲ್ಲಿ ತೋರಿಸಲಿಲ್ಲವಾದರೂ, ಮೆಡಿಕವರ್‌ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಕೌಶಿಕ್ ಸುಬ್ರಮಣಿಯನ್ ಅವರು ತಮ್ಮ ವೈದ್ಯಕೀಯ ಅನುಭವದಿಂದಲೇ ಗಂಭೀರತೆಯನ್ನು ಗುರುತಿಸಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದ ಪರಿಣಾಮ, ರೋಗಿಯು ಜೀವಾಪಾಯದಿಂದ ಪಾರಾದ್ದಾರೆ.

ಬಾಬು ಅವರು 30 ದಿನಗಳ ಕಾಲ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಅದನ್ನು ಸಾಮಾನ್ಯ ಗ್ರಾಸ್ಟ್ರಿಕ್ ಸಮಸ್ಯೆ ಎಂದು ಅನಿಸಿಕೊಂಡಿದ್ದರು. ಅವರು ಚಿಕಿತ್ಸೆಗಾಗಿ ಮೆಡಿಕವರ್‌ ಆಸ್ಪತ್ರೆಗೆ ಭೇಟಿ ನೀಡಿ, ಡಾ. ಕೌಶಿಕ್ ಅವರ ಸಲಹೆ ಪಡೆದುಕೊಂಡರು. ಡಾಕ್ಟರ್‌ ಅವರು ತಕ್ಷಣವೇ ಇತರೆ ಪರೀಕ್ಷೆಗಳನ್ನು ಮಾಡಿಸಿ, ಪಿತ್ತಕೋಶದ ಕ್ಯಾನ್ಸರ್ ಆಗಿರಬಹುದೆಂದು ಅನುಮಾನ ವ್ಯಕ್ತಪಡಿಸಿದರು. ಆದರೆ ಪ್ರಾಥಮಿಕ ಸ್ಕ್ಯಾನ್ ವರದಿಯಲ್ಲಿ ಕ್ಯಾನ್ಸರ್ ಇಲ್ಲವೆನ್ನಲಾಗಿತ್ತು. ನಂತರ ಬಯೋಪ್ಸಿ ನಡೆಸಿದಾಗ ಪಿತ್ತಕೋಶದಲ್ಲಿ ಕ್ಯಾನ್ಸರ್ ಇರುವುದಾಗಿ ದೃಢಪಟ್ಟಿತು. ತಕ್ಷಣವೇ ರೊಬೋಟಿಕ್ ಶಸ್ತ್ರಚಿಕಿತ್ಸೆಯ ಮೂಲಕ ರ್ಯಾಡಿಕಲ್ ಕೊಲೆಸಿಸ್ಟೆಕ್ಟಮಿ (ಪಿತ್ತಕೋಶವನ್ನು ಸಂಪೂರ್ಣವಾಗಿ ತೆಗೆದುಹಾಕುವುದು) ಮಾಡಲಾಯಿತು. ಕ್ಯಾನ್ಸರ್ ಸ್ವಲ್ಪ ಲಿವರ್‌ಗೂ ಹಬ್ಬಿಕೊಂಡಿದ್ದರಿಂದ, ಲಿವರ್‌ನ ಒಂದು ಭಾಗವನ್ನೂ ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಹಾಕಲಾಯಿತು.

ಡಾ. ಕೌಶಿಕ್ ಸುಬ್ರಮಣಿಯನ್ ಅವರು, ಪಿತ್ತಕೋಶ ಸಂಬಂಧಿತ ಕಾಯಿಲೆಗಳಲ್ಲಿ ತಕ್ಷಣದ ತಪಾಸಣೆ ಮತ್ತು ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡುವುದು ಅತ್ಯಂತ ಅವಶ್ಯಕ ಎಂದು ಅಭಿಪ್ರಾಯಪಟ್ಟಿದ್ದಾರೆ.